Homeಕರ್ನಾಟಕಮನುವಾದ ವಿಧಿಸಿದ ಎಚ್ಚರಿಕೆ; ಗೂಳಿಹಟ್ಟಿ ಆಡಿಯೋ ವಿವಾದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ

ಮನುವಾದ ವಿಧಿಸಿದ ಎಚ್ಚರಿಕೆ; ಗೂಳಿಹಟ್ಟಿ ಆಡಿಯೋ ವಿವಾದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ

- Advertisement -
- Advertisement -

‘ನಾನು ಪರಿಶಿಷ್ಟ ಜಾತಿಗೆ ಸೇರಿದವನು ಎಂಬ ಕಾರಣಕ್ಕೆ ನಾಗಪುರದಲ್ಲಿರುವ ಹೆಡಗೇವಾರ್ ಮ್ಯೂಸಿಯಂ ಪ್ರವೇಶ ನಿರಾಕರಿಸಲಾಯಿತು’ ಎಂದು ಮಾಜಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಮನುವಾದ ವಿಧಿಸಿದ ಎಚ್ಚರಿಕೆ, ದಲಿತರಿಗೆ ಆರ್‌ಎಸ್‌ಎಸ್‌ ಕಚೇರಿಯೊಳಗೆ ಪ್ರವೇಶವಿಲ್ಲ. ಬಿಜೆಪಿ ಕಚೇರಿಯಲ್ಲಿ ಸ್ವಾತಂತ್ರವಿಲ್ಲ, ಸಮಾನತೆಯನ್ನು ಬಿಜೆಪಿ ಸಹಿಸುವುದಿಲ್ಲ’ ಎಂದು ಲೇವಡಿ ಮಾಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ಬಿಜೆಪಿಯನ್ನು ಟೀಕಿಸಿರುವ ಕಾಂಗ್ರೆಸ್, ‘ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ನೈಜ ಹಿಂದೂ ಧರ್ಮ ಪರಿಪಾಲಕರೇ ಆಗಿದ್ದರೆ ಉತ್ತರಿಸಲಿ. ಇದುವರೆಗೂ ದಲಿತ, ಹಿಂದುಳಿದವರು ಆರ್‌ಎಸ್‌ಎಸ್‌ನ ಸರಸಂಘಚಾಲಕರಾಗಿಲ್ಲವೇಕೆ? ಆರ್‌ಎಸ್‌ಎಸ್‌ನ ಪ್ರಮುಖ ಹುದ್ದೆಗಳಿಗೆ ದಲಿತರು ನೇಮಕವಾಗಿಲ್ಲವೇಕೆ? ಇದುವರೆಗೂ ಆರ್‌ಎಸ್‌ಎಸ್‌ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಇಡುವುದಿಲ್ಲವೇಕೆ? ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲವೇಕೆ? ಆರ್‌ಎಸ್‌ಎಸ್‌ ಸಂವಿಧಾನ ಪ್ರತಿಯನ್ನು ಸುಟ್ಟಿದ್ದೇಕೆ? ದಲಿತರಿಗೆ ನೀಡಿದ್ದ ಮತದಾನದ ಹಕ್ಕನ್ನು ವಿರೋಧಿಸಿದ್ದೇಕೆ? ಮಹಿಳೆಯರಿಗೆ ಸಂಘದಲ್ಲಿ ಪ್ರವೇಶವಿಲ್ಲವೇಕೆ? ದಲಿತರಿಗೆ ಸಂಘದ ಕಚೇರಿಗಳಿಗೆ ಪ್ರವೇಶವಿಲ್ಲವೇಕೆ? ಕರ್ನಾಟಕ ಬಿಜೆಪಿಯಲ್ಲಿ ಯಾವೊಬ್ಬ ದಲಿತರೂ ರಾಜ್ಯಾಧ್ಯಕ್ಷ ಆಗಿಲ್ಲವೇಕೆ’ ಎಂದು ಪ್ರಶ್ನಿಸಿದೆ.

‘ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ, ಈ ದಿನದಂದೇ ಆರ್‌ಎಸ್‌ಎಸ್‌ ಕಚೇರಿಗೆ ದಲಿತರಿಗೆ ಪ್ರವೇಶವಿಲ್ಲ ಎಂಬ ಸತ್ಯ ಬಿಜೆಪಿಯವರಿಂದಲೇ ಹೊರಬಿದ್ದಿದೆ. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದೇಕೆ, ಹಿಂದೂವಾಗಿ ಸಾಯಲಾರೆ ಎಂದಿದ್ದೇಕೆ, ಮನುಸ್ಮೃತಿಯನ್ನು ಸುಟ್ಟಿದ್ದೇಕೆ ಎಂಬ ಪ್ರಶ್ನೆಗಳಿಗೆ ಬಿಜೆಪಿ ಪಕ್ಷವು ಗೂಳಿಹಟ್ಟಿ ಶೇಖರ್ ಅವರ ಮೂಲಕ ಉತ್ತರ ನೀಡಿದೆ’ ಎಂದಿದೆ.

‘ಆರ್‌ಎಸ್‌ಎಸ್‌ ಗರ್ಭಗುಡಿ ಇರಲಿ, ಬಿಜೆಪಿಯ ಗರ್ಭಗುಡಿಗೇ ದಲಿತರಿಗೆ ಪ್ರವೇಶವಿಲ್ಲ, ಬಿಜೆಪಿಯಲ್ಲಿರುವ ದಲಿತರು ಆರ್‌ಎಸ್‌ಎಸ್‌ನವರ ಚಡ್ಡಿ ಹೊರುವುದಕ್ಕೆ ಮಾತ್ರ ಸೀಮಿತವೆನ್ನುವ ಸತ್ಯ ಜಗಜ್ಜಾಹೀರಾಗಿದೆ. ದಲಿತ ಎಂಬ ಕಾರಣಕ್ಕಾಗಿಯೇ ಗೋವಿಂದ ಕಾರಜೋಳರಂತಹ ಹಿರಿಯ ನಾಯಕರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಿಲ್ಲವೇ? ದಲಿತ ಎಂಬ ಕಾರಣಕ್ಕಾಗಿಯೇ ಶ್ರೀರಾಮುಲು ಅವರು ರಾಜ್ಯಾಧ್ಯಕ್ಷ ಸ್ಥಾನ ಬಯಸಿದರೂ ಸಿಗಲಿಲ್ಲವೇ’ ಎಂದು ಬಿಜೆಪಿಯನ್ನು ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ಗೂಳಿಹಟ್ಟಿ ಶೇಖರ್, ಬಿಜೆಪಿಯ ಮಾಜಿ ಸಚಿವ, ಮಾಜಿ ಶಾಸಕ. ಜನಪ್ರತಿನಿಧಿಯಾಗಿದ್ದ ಬಿಜೆಪಿ ಪಕ್ಷದವರೇ ನಾಗಪುರದ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಅಸ್ಪೃಶ್ಯತೆ ಎದುರಿಸಿದೆ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಮುದ್ದಿನ ಕೂಸು ಬಿ.ಎಲ್. ಸಂತೋಷ್ ಅವರ ಬಳಿ ತಮಗಾದ ನೋವು, ಅವಮಾನದ ಬಗ್ಗೆ ಅವಲತ್ತುಕೊಂಡರೂ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಈ ಮೌನದ ಅರ್ಥ ಅಸ್ಪೃಶ್ಯತೆ ಆಚರಣೆ ಬಿಜೆಪಿ, ಆರ್‌ಎಸ್‌ಎಸ್‌ನ ಜನ್ಮಸಿದ್ದ ಹಕ್ಕು ಎನ್ನುವುದೇ’ ಎಂದು ಪ್ರಶ್ನಿಸಿದೆ.

‘ವಿರೋಧ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿಗೆ ದಲಿತರು ಕಾಣಲಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರು ಕಾಣಲಿಲ್ಲ. ಬಿಜೆಪಿಯಲ್ಲಿ ದಲಿತರು ಸಿಎಂ ಹುದ್ದೆಯ ಬಗ್ಗೆ ಕನಸನ್ನೂ ಕಾಣುವ ಹಾಗಿಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹೇಳುವ ಹಿಂದುತ್ವದಲ್ಲಿ ಸಮಾನತೆ, ಸಹಬಾಳ್ವೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಆರ್‌ಎಸ್‌ಎಸ್‌ ಸಂವಿಧಾನ ವಿರೋಧಿ ಸಂಘಟನೆ ಎಂಬುದಕ್ಕೆ ಅವರು ಆಚರಿಸುವ ಅಸ್ಪೃಶ್ಯತೆಯೇ ಸಾಕ್ಷಿ ನುಡಿಯುತ್ತದೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಇದನ್ನೂ ಓದಿ; ‘ಚಡ್ಡಿ ಸಂಗ್ರಹ’ ಅಭಿಯಾನವನ್ನು ಎಸ್‌ಸಿ ನಾಯಕರು ಮಾತ್ರ ಮಾಡಿದ್ಯಾಕೆ: ಪ್ರಿಯಾಂಕ್ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...