Homeಮುಖಪುಟಬಿಹಾರ: ರಾಮನವಮಿ ಹಿಂಸಾಚಾರದ ಮಾಸ್ಟರ್ ಮೈಂಡ್, ಬಜರಂಗದಳ ಸಂಚಾಲಕ ಪೊಲೀಸರಿಗೆ ಶರಣು

ಬಿಹಾರ: ರಾಮನವಮಿ ಹಿಂಸಾಚಾರದ ಮಾಸ್ಟರ್ ಮೈಂಡ್, ಬಜರಂಗದಳ ಸಂಚಾಲಕ ಪೊಲೀಸರಿಗೆ ಶರಣು

- Advertisement -
- Advertisement -

ಇತ್ತೀಚೆಗೆ ಬಿಹಾರದಲ್ಲಿ ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿತ್ತು. ಚೆನ್ನಾಗಿ ಪ್ಲ್ಯಾನ್ ಮಾಡಿ ಈ ಹಿಂಸಾಚಾರ ಮಾಡಲಾಗಿತ್ತು. ಇದರ ಮಾಸ್ಟರ್ ಮೈಂಡ್ ಬಜರಂಗದಳ ಸಂಚಾಲಕ ಇದೀಗ ಶರಣಾಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಹಿಂಸಾಚಾರವು ನಳಂದಾದ ಬಿಹಾರಶರೀಫ್‌ನಲ್ಲಿ ನಡೆದಿತ್ತು. ಈ ಘಟನೆ ನಡೆಸಲು ಸಾಮಾಜಿಕ ಮಾಧ್ಯಮ ಮತ್ತು 456 ಸದಸ್ಯರನ್ನು ಹೊಂದಿರುವ ವಾಟ್ಸಾಪ್ ಗ್ರೂಪ್‌ನಲ್ಲಿ ಚರ್ಚೆ ನಡೆಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಬಿಹಾರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗವಾರ್ ಬಿಹಾರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗವಾರ್  ಅವರು, ”ನಳಂದ ಜಿಲ್ಲೆಯ ಬಜರಂಗದಳ ಸಂಚಾಲಕ ಕುಂದನ್ ಕುಮಾರ್ ಅವರು ರಾಮ ನವಮಿಯ ಮುನ್ನ ರಚಿಸಲಾದ ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ ಆಗಿದ್ದರು. ಸರ್ಕಾರ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಪ್ರಾರಂಭಿಸಿದ ನಂತರ ಕುಂದನ್ ಕುಮಾರ್ ಶರಣಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.

”ಈ ಗ್ರೂಪ್‌ನ ಮತ್ತೋರ್ವ ಅಡ್ಮಿನ್ ಕಿಶನ್ ಕುಮಾರ್ ಕೂಡ ಶರಣಾಗಿದ್ದಾರೆ. ವಾಟ್ಸಾಪ್ ಗ್ರೂಪ್‌ನಲ್ಲಿ, ಹಿಂಸಾಚಾರವನ್ನು ಹರಡಲು ಸಂಚು ರೂಪಿಸಲಾಗಿದೆ ಮತ್ತು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಸುಳ್ಳು ಮಾಹಿತಿ ಒಳಗೊಂಡಿರುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ” ಎಂದು ಗವಾರ್ ಹೇಳಿದರು.

ಇದನ್ನೂ ಓದಿ: ಬಿಹಾರದಲ್ಲಿ ಮುಂದುವರೆದ ಕೋಮು ಹಿಂಸಾಚಾರ: ಬಾಂಬ್ ಸ್ಪೋಟ, ಓರ್ವ ಸಾವು, ಹಲವರಿಗೆ ಗಾಯ

ಅನ್ಯಸಮುದಾಯದ ಸದಸ್ಯರ ವಿರುದ್ಧ ಜನರನ್ನು ಪ್ರಚೋದಿಸಲು, ನಕಲಿ ವೀಡಿಯೋಗಳನ್ನು ಹರಡಲು ಈ ಗುಂಪನ್ನು ಬಳಸಲಾಗುತ್ತಿತ್ತು ಎಂದು ಆರಂಭಿಕ ತನಿಖೆಗಳು ಬಹಿರಂಗಪಡಿಸುತ್ತವೆ.

ನಳಂದದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಅವರಲ್ಲಿ ಐವರನ್ನು ಬಂಧಿಸಲಾಗಿದೆ ಮತ್ತು ಕುಂದನ್ ಕುಮಾರ್ ಸೇರಿದಂತೆ ಇಬ್ಬರು ಶರಣಾಗಿದ್ದಾರೆ. ನಾಪತ್ತೆಯಾಗಿರುವ ಆರೋಪಿಯನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಮೊಬೈಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೊಬೈಲ್ ಫೋನ್‌ಗಳಲ್ಲಿ ಅವರು ಆಪಾದಿತ ವಿಷಯಗಳನ್ನು ಅಪ್‌ಲೋಡ್ ಮಾಡಿದ್ದಾರೆ.

ಮಾರ್ಚ್ 31 ರಂದು, ರಾಮನವಮಿ ಮೆರವಣಿಗೆಯಲ್ಲಿ ಬಿಹಾರ್ ಷರೀಫ್ ಹಿಂಸಾಚಾರವು ಯುವಕನ ಸಾವಿಗೆ ಕಾರಣವಾಯಿತು. ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿಯೂ ಎರಡು ಗುಂಪುಗಳ ನಡುವೆ ಘರ್ಷಣೆಗಳು ವರದಿಯಾಗಿವೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಹಿಂದೆ ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ”ಗಡ್ಬದ್” (ಕಿಡಿಗೇಡಿತನ) ದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದ ಉಂಟಾಗಿದೆ ಎಂದು ಆರೋಪಿಸಿದ್ದರು.

”ಸಸಾರಾಮ್ ಮತ್ತು ಬಿಹಾರ ಷರೀಫ್‌ನಲ್ಲಿ ರಾಮನವಮಿ ಹಬ್ಬದ ಸಂದರ್ಭದಲ್ಲಿ ಕೋಮು ಉದ್ವಿಗ್ನತೆಗಳು ಗೊಂದಲವನ್ನುಂಟುಮಾಡುತ್ತವೆ. ಇಂತಹ ಘಟನೆಗಳು ಈ ಪ್ರದೇಶದಲ್ಲಿ ಮೊದಲ ಬಾರಿ ಸಂಭವಿಸಿವೆ” ಎಂದು ಕುಮಾರ್ ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...