HomeದಿಟನಾಗರFACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ ಹಾಕುತ್ತೇವೆಂದು...

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ ಹಾಕುತ್ತೇವೆಂದು ರಾಹುಲ್ ಗಾಂಧಿ ಹೇಳಿಲ್ಲ

- Advertisement -
- Advertisement -

“ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಬಲಪಂಥೀಯ ಫೇಸ್‌ಬುಕ್ ಖಾತೆ ಪೋಸ್ಟ್‌ ಕಾರ್ಡ್‌ ಕನ್ನಡದಲ್ಲಿ “ಇದು ಯುವಜನತೆಯ ಸಬಲೀಕರಣವೋ ಅಥವಾ ಸರ್ವನಾಶವೋ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಅನ್ನು ಹಂಚಿಕೊಂಡಿದೆ. 24*7 ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗುವ ಯುವಕರ ಖಾತೆಗಳಿಗೆ ನಾವು ಪ್ರತಿ ವರ್ಷ ಒಂದು ಲಕ್ಷ ರೂ ಅಥವಾ ಪ್ರತಿ ತಿಂಗಳೂ 8,500 ರೂಪಾಯಿ ಹಾಕುತ್ತೇವೆ. ಎಲ್ಲರೂ ಕೆಲಸ ಬಿಟ್ಟು ಮನೆಯಲ್ಲಿ ಕೂರಲು ಸಿದ್ದರಾಗಿ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದಿದೆ.

Megh Updates (@MeghUpdates) ಎಂಬ ಬಲಪಂಥೀಯ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, “ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಅನ್ನು 24×7 ವೀಕ್ಷಿಸುವ ಮೂಲಕ ಬೇಸರದ ಕೆಲಸವನ್ನು ಮಾಡುತ್ತಿರುವ ಸಾಮಾನ್ಯ ಯುವಕರ ಖಾತೆಗಳಿಗೆ ಪ್ರತಿ ತಿಂಗಳು 8,500 ರೂಗಳನ್ನು ಟಕಾ ಟಕ್ ಟಕಾ ಟಕ್‌ ಜಮಾ ಮಾಡುತ್ತೇವೆ” ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಸದಾ ಸುಳ್ಳು ಸುದ್ದಿಗಳನ್ನೇ ಹಬ್ಬುವ Rishi Bagree (@rishibagree)ಎಂಬ ಬಲ ಪಂಥೀಯ ಎಕ್ಸ್ ಬಳಕೆದಾರ ಕೂಡ ವಿಡಿಯೋ ಹಂಚಿಕೊಂಡಿದ್ದು, “ನಿರುದ್ಯೋಗವನ್ನು ತೊಡೆದುಹಾಕಲು ರಾಹುಲ್ ಗಾಂಧಿಯವರ ಆಲೋಚನೆಯು ಹಣದ ಮೂಲಕ ನಿರುದ್ಯೋಗವನ್ನು ಉತ್ತೇಜಿಸುವುದು” ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಮಾತನಾಡಿರುವ ವೈರಲ್ ವಿಡಿಯೋದ ಸತ್ಯಾಸತ್ಯೆ ತಿಳಿಯುವ ಸಲುವಾಗಿ ನಾವು ಮೂಲ ವಿಡಿಯೋ ಹುಡುಕಾಡಿದ್ದೇವೆ. ಈ ವೇಳೆ 20 ಏಪ್ರಿಲ್‌ 2024ರಂದು ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾದ “LIVE: Lok Sabha 2024 Campaign | Public Meeting | Bhagalpur, Bihar” ಎಂಬ ಶೀರ್ಷಿಕೆಯ ನೇರ ಪ್ರಸಾರದ ವಿಡಿಯೋ ದೊರೆತಿದೆ.

ವಿಡಿಯೋ ಲಿಂಕ್ ಇಲ್ಲಿದೆ 

ಮೂಲ ವಿಡಿಯೋದಲ್ಲಿ “ನರೇಂದ್ರ ಮೋದಿಯವರು ದೇಶವನ್ನು ನಿರುದ್ಯೋಗದ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ. ಯುವ ಜನರಲ್ಲಿ ಕೇಳಿ ನೀವು ಏನು ಮಾಡುತ್ತಿದ್ದೀರಾ? ಎಂದು ಅದಕ್ಕೆ ಅವರ ಉತ್ತರ ಏನೂ ಇಲ್ಲ ಎಂದು ಇರುತ್ತದೆ. ಇಂದು ಭಾರತದಲ್ಲಿ ಯುವಕರು ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ನೋಡಿಕೊಂಡು ಬೀದಿಗಳಲ್ಲಿ ತಿರುಗುತ್ತಿದ್ದಾರೆ. ಏಕೆಂದರೆ, ಅವರಿಗೆ ಉದ್ಯೋಗವಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಕೆಲ ತಿಂಗಳು ವೇತನ ಸಹಿತ ತರಬೇತಿಯನ್ನು ನಾವು ಕೊಡುತ್ತೇವೆ. ಒಂದು ವೇಳೆ ಉದ್ಯೋಗದ ಕೊರತೆ ಎದುರಾದರೆ, ಅವರಿಗೆ ಹಣದ ನೆರವನ್ನು ನೀಡುವ ಮೂಲಕ ಸ್ವಉದ್ಯೋಗಕ್ಕೆ ಪ್ರೇರಣೆ ನೀಡುತ್ತೇವೆ” ಎಂದು ತಿಳಿಸಿದ್ದಾರೆ.

ಮುಂದುವರೆಸಿದ ರಾಹುಲ್ ಗಾಂಧಿ “ಪ್ರಧಾನಿ ಮೋದಿಯಿಂದಾಗಿ ಇವತ್ತು ಯಾರೆಲ್ಲ ನಿರುದ್ಯೋಗದಿಂದ ಬೀದಿಯಲ್ಲಿ ಇನ್ಸ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ನೋಡುತ್ತಾ ಕುಳಿತಿರುತ್ತಾರೋ ಅವರ ಖಾತೆಗೆ ನಾವು ವರ್ಷಕ್ಕೆ 1 ಲಕ್ಷ ರೂ. ತಿಂಗಳಿಗೆ 8,500 ರೂ. ಹಾಕುತ್ತೇವೆ” ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿಡಿಯೋವನ್ನು ಎಡಿಟ್‌ ಮಾಡಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ : FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ ಮೋದಿ ಹೇಳಿಕೆ ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...