Homeಮುಖಪುಟಬಿಲ್ಕಿಸ್ ಬಾನೊ ಅತ್ಯಾಚಾರಿಗಳು ಕಾಲ ಮುಂದೂಡಲು ಯತ್ನಿಸುತ್ತಿದ್ದಾರೆ: ಸುಪ್ರೀಂ ಕೋರ್ಟ್

ಬಿಲ್ಕಿಸ್ ಬಾನೊ ಅತ್ಯಾಚಾರಿಗಳು ಕಾಲ ಮುಂದೂಡಲು ಯತ್ನಿಸುತ್ತಿದ್ದಾರೆ: ಸುಪ್ರೀಂ ಕೋರ್ಟ್

- Advertisement -
- Advertisement -

2002ರಲ್ಲಿ ನಡೆದ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಅತ್ಯಾಚಾರ ಮತ್ತು ಅವರ ಕುಟುಂಬ ಸದಸ್ಯರ ಕೊಲೆ ಪ್ರಕರಣದ ಅಪರಾಧಿಗಳು, ನ್ಯಾಯ ಪೀಠದ ಮುಂದೆ ಹಾಜರಾಗದಿರಲು ಕಾಲವನ್ನು ಮುಂದೂಡುವ ಸಲುವಾಗಿ ಆಕ್ಷೇಪಗಳನ್ನು ಎತ್ತುತ್ತಿರುವುದು ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಬಿಲ್ಕಿಸ್ ಪ್ರಶ್ನಿಸಿದ್ದು, ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. “ಜೀವಾವಧಿ ಶಿಕ್ಷೆಗೊಳಗಾಗಿ ಮುಂಚಿತವಾಗಿಯೇ ಬಿಡುಗಡೆಗೊಂಡ ಅಪರಾಧಿಗಳು ನ್ಯಾಯಪೀಠವನ್ನು ತಪ್ಪಿಸಲು ಸತತ ನ್ಯಾಯಾಲಯದ ವಿಚಾರಣೆಗಳಲ್ಲಿ ಕಾರ್ಯವಿಧಾನದ ಆಕ್ಷೇಪಣೆಗಳ ಜಟಿಲತೆಯನ್ನು ಮುಂದೆ ತರುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ’’ ಎಂದು ಜಸ್ಟಿಸ್ ಕೆ.ಎಂ.ಜೋಸೆಫ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಸಮಯ ಮೀರಿ ಹೋಗುತ್ತಿದೆ ಎಂಬುದನ್ನು ಗಂಭೀರವಾಗಿ ಪ್ರಸ್ತಾಪಿಸಿರುವ ಜಸ್ಟಿಸ್ ಜೋಸೆಫ್ ಇನ್ನು ಕೆಲವೇ ದಿನಗಳಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ.

”ಏನಾಗುತ್ತಿದೆ ಎಂಬುದು ನಿಮಗೆ ಹೆಚ್ಚು ಸ್ಪಷ್ಟವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ನನಗೆ ಸಮಸ್ಯೆಯೆಂದರೆ ನಾನು ಜೂನ್ 16 ರಂದು ನಿವೃತ್ತನಾಗುತ್ತಿದ್ದೇನೆ, ಆದರೆ ನನ್ನ ಕೊನೆಯ ಕೆಲಸದ ದಿನವು ಮೇ 19 ಆಗಿದೆ [ಜುಲೈ 2 ರವರೆಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ನ್ಯಾಯಾಲಯ ತೆರೆದಿರುವುದಿಲ್ಲ.]… ನಾವು ವಿಷಯವನ್ನು ಕೇಳಲು ಅವರು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಹೆಚ್ಚು ಸ್ಪಷ್ಟವಾಗಿದೆ” ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಪೀಠದಲ್ಲಿನ ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ. ಬಿಸ್ಕಿಸ್ ಅವರನ್ನು ಪ್ರತಿನಿಧಿಸುವ ವಕೀಲೆ ಶೋಭಾ ಗುಪ್ತಾ ಅವರನ್ನು ಉದ್ದೇಶಿಸಿ ಈ ಮಾತುಗಳನ್ನು ಆಡಿದ್ದಾರೆ.

ಬಿಡುಗಡೆಯಾದ 11 ಅಪರಾಧಿಗಳ ಪರ ವಕೀಲರು ಸಲ್ಲಿಸಿದ ಮನವಿಗಳ ಸಂದರ್ಭದಲ್ಲಿ ನ್ಯಾಯಾಧೀಶರ ಮೌಖಿಕ ಹೇಳಿಕೆ ಬಿದ್ದಿತು. ಪ್ರಕರಣದ ನೋಟಿಸ್ ನಮಗೆ ಬಂದಿಲ್ಲ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.

ಜೀವಾವಧಿ ಶಿಕ್ಷೆಯನ್ನು ವಾಪಸ್ ತೆಗೆದುಕೊಳ್ಳಲು ಕೇಂದ್ರ ಸರ್ಕಾರದ ಅನುಮೋದನೆ ಮತ್ತು ಗುಜರಾತ್ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳಿಗೆ ಅಫಿಡವಿಟ್ಗಳನ್ನು ಸಲ್ಲಿಸಲು ಕನಿಷ್ಠ ಎರಡು ವಾರಗಳ ಅವಕಾಶವನ್ನು ಆರೋಪಿಗಳು ಕೋರಿದ್ದಾರೆ.

“ಏನಾಗುತ್ತಿದೆ ಎಂಬುದು ನಮಗೆಲ್ಲರಿಗೂ ಹೆಚ್ಚು ಸ್ಪಷ್ಟವಾಗಿದೆ” ಎಂದು ವಕೀಲೆ ಗುಪ್ತಾ ನ್ಯಾಯಾಧೀಶರಿಗೆ ತಿಳಿಸಿದರು.

”ಹಾಗಾದರೆ ಅವರು ಯಶಸ್ವಿಯಾಗಬಾರದು ಎಂಬುದು ಹೆಚ್ಚು ಮುಖ್ಯವಾಗಿದೆ … ಅಂತಹ ಬಿದಿರಿನ ಜೋಲಿ ತಂತ್ರಗಳನ್ನು ನ್ಯಾಯಾಲಯದಲ್ಲಿ ಬಳಸಬಾರದು” ಎಂದು ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಪೀಠವನ್ನು ಉದ್ದೇಶಿಸಿ ಹೇಳಿದರು.

ಬಿಡುಗಡೆಯಾದ ಅಪರಾಧಿಗಳು “ಈ ರೀತಿಯಲ್ಲಿ ನ್ಯಾಯಕ್ಕೆ ಅಡ್ಡಿಪಡಿಸಲು ಬಿಡಬಾರದು” ಎಂದು ವಕೀಲೆ ವೃಂದಾ ಗ್ರೋವರ್ ವಾದಿಸಿದರು.

”ಪ್ರತಿಕ್ರಿಯೆಯನ್ನು ಸಲ್ಲಿಸಲು ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿದ್ದೇವೆ. ಮುಂದಿನ ವಿಚಾರಣೆಯ ದಿನಾಂಕವು ಮೇ 17  ಆಗಿದೆ. ಈ ಜನರು ಈಗಾಗಲೇ ಜೈಲಿನಿಂದ ಹೊರಬಂದಿದ್ದಾರೆ. ನಿಮ್ಮ ವಿಷಯದಲ್ಲಿ ಅರ್ಹತೆ ಇದ್ದರೆ, ನೀವು ಯಶಸ್ವಿಯಾಗುತ್ತೀರಿ. ಯಾವುದೇ ಅರ್ಹತೆ ಇಲ್ಲದಿದ್ದರೆ, ನೀವು ಯಶಸ್ವಿಯಾಗುವುದಿಲ್ಲ … ಈ ವಿಷಯವು ಮೊದಲೇ ನನ್ನ ನ್ಯಾಯಾಲಯಕ್ಕೆ ಬಂದಿದ್ದರೆ ಬೇರೆ ತಿರುವು ತೆಗೆದುಕೊಳ್ಳುತ್ತಿತ್ತು… ” ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ.

ಅಪರಾಧಿಗಳನ್ನು ಆಗಸ್ಟ್ 15, 2022 ರಂದು ಬಿಡುಗಡೆ ಮಾಡಲಾಗಿತ್ತು.

ಈ ಅರ್ಜಿಯನ್ನು ನವೆಂಬರ್ 2022 ರಲ್ಲಿ ಸಲ್ಲಿಸಲಾಗಿದೆ ಎಂದು ಶೋಭಾ ಗುಪ್ತಾ ಹೇಳಿದ್ದಾರೆ. ಇದು ಡಿಸೆಂಬರ್ 13 ರಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ತ್ರಿವೇದಿ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತು. ನ್ಯಾಯಮೂರ್ತಿ ತ್ರಿವೇದಿ ಅವರು ರಾಜೀನಾಮೆ ನೀಡಿದ್ದಾರೆ. ನಂತರ ಮೂರು ತಿಂಗಳ ಕಾಲ ವಿರಾಮವಿತ್ತು, ಈ ಸಂದರ್ಭದಲ್ಲಿ ಶೋಭಾ ಅವರು ಅವರು ಪ್ರಕರಣವನ್ನು ಪಟ್ಟಿ ಮಾಡುವಂತೆ ಭಾರತದ ಮುಖ್ಯ ನ್ಯಾಯಾಧೀಶರ ಮುಂದೆ ಪದೇ ಪದೇ ಪ್ರಸ್ತಾಪಿಸದ್ದಾರೆ. ಅಂತಿಮವಾಗಿ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಜೋಸೆಫ್ ಮತ್ತು ನಾಗರತ್ನ ಅವರಿಗೆ ಉಲ್ಲೇಖಿಸಲಾಯಿತು ಮತ್ತು ಮಾರ್ಚ್ 27 ರಂದು ವಿಚಾರಣೆಗೆ ಬಂದಿತು. ಪೀಠವು ಅದೇ ದಿನ ನೋಟಿಸ್ ಜಾರಿಗೊಳಿಸಿತು ಮತ್ತು ಪರಿಹಾರಕ್ಕೆ ಸಂಬಂಧಿಸಿದ ಅಧಿಕೃತ ಕಡತಗಳೊಂದಿಗೆ ಸಿದ್ಧವಾಗಿರುವಂತೆ ಸರ್ಕಾರಕ್ಕೆ ಸೂಚಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...