Homeಮುಖಪುಟಬಿಜೆಪಿ ದೇಶಕ್ಕೆ ವಿನಾಶಕಾರಿ ಶಕ್ತಿ: ಅಮಿತ್ ಶಾಗೆ ಪಿಣರಾಯಿ ವಿಜಯನ್ ತಿರುಗೇಟು

ಬಿಜೆಪಿ ದೇಶಕ್ಕೆ ವಿನಾಶಕಾರಿ ಶಕ್ತಿ: ಅಮಿತ್ ಶಾಗೆ ಪಿಣರಾಯಿ ವಿಜಯನ್ ತಿರುಗೇಟು

- Advertisement -
- Advertisement -

ಕೇರಳದ ಸುರಕ್ಷತೆ ಬಗ್ಗೆ ಇತ್ತೀಚೆಗೆ ಚುನಾವಣಾ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು  ಮಾತನಾಡಿದ್ದರು. ಅದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಜೆಪಿ ದೇಶಕ್ಕೆ ವಿನಾಶಕಾರಿ ಶಕ್ತಿಯಾಗಿ ಪರಿಣಮಿಸಿದೆ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ, ”ನಿಮಗೆ [ಕರ್ನಾಟಕ] ಸಮೀಪದಲ್ಲಿ ಕೇರಳವಿದೆ” ಎಂದು ಅಮಿತ್ ಶಾ ಹೇಳಿದ್ದರು. “ನಾನು ಹೆಚ್ಚು ಹೇಳಲು ಬಯಸುವುದಿಲ್ಲ. ಕರ್ನಾಟಕವನ್ನು ಸುರಕ್ಷಿತವಾಗಿಡಬೇಕಾದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ಮಾತ್ರ ಇದನ್ನು ಮಾಡಲು ಸಾಧ್ಯ. ತಮ್ಮ ಪಕ್ಷದಿಂದ ಮಾತ್ರ ರಾಜ್ಯವನ್ನು ಸುರಕ್ಷಿತವಾಗಿಡಲು ಸಾಧ್ಯ ಎಂದು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿತ್ತು.

ಕೇರಳದ ಉಲ್ಲೇಖದ ಅರ್ಥವನ್ನು ಗೃಹ ಸಚಿವರು ವಿವರಿಸಲಿಲ್ಲ. ಆದಾಗ್ಯೂ, ಕಳೆದ ವರ್ಷ ಐದು ವರ್ಷಗಳ ಕಾಲ ನಿಷೇಧಕ್ಕೊಳಗಾದ ಇಸ್ಲಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಕೇಂದ್ರದ ಶಿಸ್ತುಕ್ರಮದ ಹಿನ್ನೆಲೆಯಲ್ಲಿ ಅವರು ಈ ರೀತಿ ಮಾತನಾಡಿದ್ದಾರೆ. ನವೆಂಬರ್ 2006ರಲ್ಲಿ ಕೇರಳದ ಕೋಝಿಕ್ಕೋಡ್‌ನಲ್ಲಿ ಈ ಸಂಘಟನೆಯನ್ನು ರಚಿಸಲಾಯಿತು.

ಇದನ್ನೂ ಓದಿ: ಹೈದರಾಬಾದ್ ಕೇಂದ್ರೀಯ ವಿ.ವಿಯಲ್ಲಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ ಯಶಸ್ವಿ: JNU, ಕೇರಳದಲ್ಲಿ ಇಂದು

ಅಮಿತ್ ಶಾ ಅವರ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ವಿಜಯನ್, ”ಕೇರಳ ಶಾಂತಿ ಮತ್ತು ಜಾತ್ಯತೀತತೆಯ ಓಯಸಿಸ್ ಎಂದು ಹೇಳಿದ್ದಾರೆ ಮತ್ತು ಸಂಘ ಪರಿವಾರದ ಕಾರ್ಯಸೂಚಿಯು ರಾಜ್ಯದಲ್ಲಿ ಸ್ವಲ್ಪಮಟ್ಟಿನ ಎಳೆತವನ್ನು ಕಂಡುಕೊಂಡಿದೆ ಎಂದು ಹೇಳರುವುದಾಗಿ ದಿ ಹಿಂದೂ ವರದಿ ಮಾಡಿದೆ.

”ಮಂಗಳೂರಿನಲ್ಲಿ 2021ರ ಕ್ರಿಸ್‌ಮಸ್ ಸಮಯದಲ್ಲಿ 150 ವರ್ಷಗಳಷ್ಟು ಹಳೆಯದಾದ ಚರ್ಚ್‌ನ್ನು ಧ್ವಂಸ ಮಾಡಿದ ಶ್ರೀರಾಮ ಸೇನೆ ಕೇರಳದಲ್ಲಿ ಇಲ್ಲ” ಎಂದು ವಿಜಯನ್ ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಬಡತನ ಮತ್ತು ಹಸಿವು, ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಬೆರಳಣಿಕೆ ಜನರ ಸಂಪತ್ತು ಹೆಚ್ಚುತ್ತಿರುವ ವಿಚಾರಗಳ ಬಗ್ಗೆ ಸಾರ್ವಜನಿಕರ ಗಮನ ಬೇರೆಡೆಗೆ ತಿರುಗಿಸಲು ಕರ್ನಾಟಕದ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರನ್ನು ರಾಕ್ಷಸೀಕರಿಸುವ ಮೂಲಕ ರಾಜಕೀಯ ಲಾಭಕ್ಕಾಗಿ ಕೋಮು ವಿಭಜನೆಯನ್ನು ಪ್ರಚೋದಿಸಿದೆ ಎಂದು ಅವರು ಹೇಳಿದರು.

“ಮಂಗಳೂರು ಸೇರಿದಂತೆ ಕರ್ನಾಟಕದ ನಮ್ಮ ಗಡಿ ಪ್ರದೇಶಗಳು ಅನೇಕ ಕೋಮುಗಲಭೆಗೆ ಸಾಕ್ಷಿಯಾಗಿದೆ” ಎಂದು ವಿಜಯನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ”2021ರ ಕ್ರಿಸ್‌ಮಸ್ ಋತುವಿನಲ್ಲಿ ಚಿಕ್ಕಮಗಳೂರಿನ 150 ವರ್ಷ ಹಳೆಯ ಚರ್ಚ್ ಮೇಲೆ ಸಂಘಪರಿವಾರ ದಾಳಿ ನಡೆಸಿತ್ತು. ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತರು ಸಂಘಪರಿವಾರದಿಂದ ಇಂತಹ ಅನೇಕ ದಾಳಿಗಳನ್ನು ಎದುರಿಸಿದ್ದಾರೆ. ಆದರೆ ಕೇರಳದ ಪರಿಸ್ಥಿತಿ ಹೀಗಿದೆಯೇ? ಕೇರಳದಲ್ಲಿ ಯಾರೂ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಏಕೆಂದರೆ ಅವರಿಗೆ ನಮ್ಮ ಸರ್ಕಾರದ ಮೇಲೆ ನಂಬಿಕೆ ಇದೆ” ಎಂದರು.

”ಬಿಜೆಪಿ ದೇಶಕ್ಕೆ ವಿನಾಶಕಾರಿ ಶಕ್ತಿಯಾಗಿ ಪರಿಣಮಿಸಿದೆ. ಬಿಜೆಪಿಗೆ ಇನ್ನೂ ಒಂದು ಅವಕಾಶ ನೀಡಿದರೆ, ಅದು ಈ ದೇಶಕ್ಕೆ ದುರಂತವಾಗಲಿದೆ” ಎಂದು ಮುಖ್ಯಮಂತ್ರಿ ವಿಜಯನ್ ಹೇಳಿರುವ ಬಗ್ಗೆ ಪಿಟಿಐ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಗುಜರಾತ್‌ನ ಅದಾನಿ ಬಂದರಿನ ಮೂಲಕ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ...

0
ಗುಜರಾತ್‌ನ ಅದಾನಿ ಬಂದರಿನ ಮೂಲಕ ಟ್ರಕ್‌ಗಳಲ್ಲಿ ಸಾವಿರಾರು ಹಸುಗಳನ್ನು ತುಂಬಿ ವಧೆಗಾಗಿ ಅರಬ್‌ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿನಾಯಕ್ ಕಟ್ಟಿಕ್ಕರ ಕನ್ನಡಿಗ ಎಂಬ ಫೇಸ್‌ಬುಕ್ ಬಳಕೆದಾರ...