Homeಮುಖಪುಟಜಮ್ಮು ಕಾಶ್ಮೀರದ ಜನರಿಗೆ ಬೇಕಾಗಿದ್ದು ಉದ್ಯೋಗ, ಸಿಕ್ಕಿದ್ದು ಬಿಜೆಪಿಯ ಬುಲ್ಡೋಜರ್: ರಾಹುಲ್ ಗಾಂಧಿ

ಜಮ್ಮು ಕಾಶ್ಮೀರದ ಜನರಿಗೆ ಬೇಕಾಗಿದ್ದು ಉದ್ಯೋಗ, ಸಿಕ್ಕಿದ್ದು ಬಿಜೆಪಿಯ ಬುಲ್ಡೋಜರ್: ರಾಹುಲ್ ಗಾಂಧಿ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ ಜನರಿಗೆ ಉದ್ಯೋಗ ನೀಡಲು ಭಾರತೀಯ ಜನತಾ ಪಕ್ಷ ವಿಫಲವಾಗಿದೆ ಮತ್ತು ಈ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳನ್ನು ಹೊರಹಾಕಲು ಬುಲ್ಡೋಜರ್‌ಗಳನ್ನು ಕಳುಹಿಸಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಆಡಳಿತವು ಜನವರಿ 9 ರಂದು, ರಾಜ್ಯದಲ್ಲಿನ ಎಲ್ಲಾ ಅತಿಕ್ರಮಣಗಳನ್ನು ಜನವರಿ 31ರೊಳಗೆ ತೆಗೆದುಹಾಕುವುದಕ್ಕೆ ಕೇಂದ್ರಾಡಳಿತ ಪ್ರದೇಶದ ಉಪ ಆಯುಕ್ತರಿಗೆ ನಿರ್ದೇಶನ ನೀಡಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ 2.75 ಲಕ್ಷ ಎಕರೆ ಭೂಮಿಯನ್ನು (ಅಥವಾ ಸುಮಾರು 1,112.8 ಚದರ ಕಿಲೋಮೀಟರ್ ಭೂಮಿ) ಅತಿಕ್ರಮಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ನೆಲಸಮ ಮಾಡುವ ಕಾರ್ಯಾಚರಣೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗೊಂಡ ಅತಿ ದೊಡ್ಡ ಅತಿಕ್ರಮಣ ವಿರೋಧಿ ಕ್ರಮವಾಗಿದೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಪ್ರಧಾನಿ ಬಗ್ಗೆ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿಗೆ ನೋಟಿಸ್‌

”ಜಮ್ಮು ಮತ್ತು ಕಾಶ್ಮೀರದ ಜನರಿಗೆ ಉದ್ಯೋಗ, ಉತ್ತಮ ವ್ಯಾಪಾರ ಮತ್ತು ಪ್ರೀತಿ ಬೇಕಿತ್ತು, ಆದರೆ ಅವರಿಗೆ ಸಿಕ್ಕಿದ್ದೇನು? ಬಿಜೆಪಿಯ ಬುಲ್ಡೋಜರ್..” ಎಂದು ರಾಹುಲ್ ಗಾಂಧಿ ಭಾನುವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಹಲವು ದಶಕಗಳಿಂದ ಕಷ್ಟಪಟ್ಟು ಜನರು ನೀರಾವರಿ ಮಾಡಿಕೊಂಡಿದ್ದಾರೆ. ಆ ಭೂಮಿಯನ್ನುಇದೀಗ ಕಸಿದುಕೊಳ್ಳುತ್ತಿದ್ದಾರೆ. ಶಾಂತಿ ಮತ್ತು ಕಾಶ್ಮೀರವನ್ನು ಒಗ್ಗೂಡಿಸುವ ಮೂಲಕ ರಕ್ಷಿಸಬೇಕು, ಜನರನ್ನು ವಿಭಜಿಸುವ ಮತ್ತು ವಿಭಜನೆಯಿಂದ ಅಲ್ಲ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಜನವರಿ 31ರೊಳಗೆ ಸರ್ಕಾರಿ ಜಮೀನುಗಳಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ಜಮ್ಮು ಮತ್ತು ಕಾಶ್ಮೀರ ಆಡಳಿತದ ಸುತ್ತೋಲೆಗೆ ತಡೆ ನೀಡಲು ಜನವರಿ 20 ರಂದು ಸುಪ್ರೀಂ ಕೋರ್ಟ್ ನಿರಾಕರಿಸಿತು. ಇದೀಗ ಸ್ಥಳೀಯರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ.

ಪ್ರಭಾವಿ ವ್ಯಕ್ತಿಗಳಿಂದ ಮಾತ್ರ ಭೂಮಿಯನ್ನು ಹಿಂಪಡೆಯುತ್ತಾರೆ ಎಂದು ಕಳೆದ ವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭರವಸೆ ನೀಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

“ಅತಿಕ್ರಮಣ ವಿರೋಧಿ ಅಭಿಯಾನದಲ್ಲಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ ಎಂದು ಕೆಲವರು ತಪ್ಪು ಮಾಹಿತಿ ಹರಡಲು ಯತ್ನಿಸಿದ್ದಾರೆ” ಎಂದು ಸಿನ್ಹಾ ಹೇಳಿದರು. “ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಮತ್ತು ರಾಜ್ಯದ ಭೂಮಿಯನ್ನು ಅತಿಕ್ರಮಿಸಲು ಕಾನೂನನ್ನು ಉಲ್ಲಂಘಿಸಿದ ಪ್ರಭಾವಿ ಮತ್ತು ಶಕ್ತಿಯುತ ವ್ಯಕ್ತಿಗಳು ಮಾತ್ರ ದೇಶದ ಈ ಕಾನೂನನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಕಾಶ್ಮೀರದ ಮಾಜಿ ಸಚಿವರಾದ ಪೀರ್ಜಾದಾ ಮೊಹಮ್ಮದ್ ಸಯೀದ್, ಮಕ್ಬೂಲ್ ದಾರ್, ಹಸೀಬ್ ದ್ರಾಬು, ತಾಜ್ ಮೊಹಿಯುದ್ದೀನ್ ಮತ್ತು ಅಲಿ ಮೊಹಮ್ಮದ್ ಸಾಗರ್ ಅವರ ಭೂಮಿಯನ್ನು ಅಧಿಕಾರಿಗಳು ಹಿಂಪಡೆದಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ‘ಕೋಮು ದ್ವೇಷದ ಪೋಸ್ಟ್‌’ನ್ನು ತೆಗೆದು ಹಾಕುವಂತೆ ‘ಎಕ್ಸ್‌’ಗೆ ಸೂಚಿಸಿದ ಚು.ಆಯೋಗ

0
ಬಿಜೆಪಿ ಕರ್ನಾಟಕ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕೋಮು ದ್ವೇಷದ ಪೋಸ್ಟ್‌ನ್ನು ತೆಗೆದುಹಾಕಲು ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣ ಎಕ್ಸ್‌ಗೆ ಸೂಚನೆಯನ್ನು ನೀಡಿದೆ. ಭಾರತೀಯ ಚುನಾವಣಾ ಆಯೋಗ ಹೊರಡಿಸಿದ ಆದೇಶದಲ್ಲಿ ಜಂಟಿ ನಿರ್ದೇಶಕರು ಮತ್ತು...