Homeಚಳವಳಿಲೋಡಿಂಗ್‌-ಅನ್‌ಲೋಡಿಂಗ್‌ ಕಾರ್ಮಿಕರ ವೇತನ ಹೆಚ್ಚಳಕ್ಕೆ ಆಗ್ರಹ: ಫೆ.15ರಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ

ಲೋಡಿಂಗ್‌-ಅನ್‌ಲೋಡಿಂಗ್‌ ಕಾರ್ಮಿಕರ ವೇತನ ಹೆಚ್ಚಳಕ್ಕೆ ಆಗ್ರಹ: ಫೆ.15ರಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ

- Advertisement -
- Advertisement -

2023-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು, ಲೋಡಿಂಗ್‌-ಅನ್‌ಲೋಡಿಂಗ್‌ ಕಾರ್ಮಿಕರ ವೇತನ ಹೆಚ್ಚಿಸಬೇಕು, ಕಾರ್ಮಿಕರನ್ನು ನೇರಪಾವತಿ ವ್ಯವಸ್ಥೆಯಡಿ ತುರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.15ರಿಂದ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಲೋಡಿಂಗ್‌ ಹಾಗೂ ಅನ್‌ಲೋಡಿಂಗ್‌ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವರದರಾಜೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರ ಈಗಾಗಲೇ ”ಬಿಬಿಎಂಪಿ, ನಗರಸಭೆ, ಪುರಸಭೆಯ ಪೌರಕಾರ್ಮಿಕರ ವೇತನವನ್ನು ನೇರ ಪಾವತಿ ವ್ಯವಸ್ಥೆಗೆ ತರಲಾಗಿದೆ. ಅದೇ ಮಾದರಿಯಲ್ಲಿ ಅನ್ನಭಾಗ್ಯ ಕಾರ್ಮಿಕರನ್ನು ಸಹ ನೇರ ಪಾವತಿ ವ್ಯವಸ್ಥೆಗೆ ಒಳಪಡಿಸಬೇಕು. ಈ ಕಾರ್ಮಿಕರು ವಾರದ ರಜೆ, ಸಾರ್ವತ್ರಿಕ ರಾಜೆ ದಿನ, ಹಬ್ಬದ ಸಂದರ್ಭಗಳಲ್ಲೂ ದುಡಿಯುತ್ತಿದ್ದಾರೆ. ಹಾಗಾಗಿ ಕಾನೂನು ಪ್ರಕಾರ ಸಿಗಬೇಕಾದ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಸಿಗುವಂತೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

”ನಮ್ಮ ಸಂಘಟನೆಯ ನಿರಂತರ ಹೋರಾಟದ ಫಲವಾಗಿ ಈ ಹಿಂದಿನ ಸರ್ಕಾರಗಳು ಆಗಿಂದಾಗ್ಗೆ ಅನ್‌ ಲೋಡಿಂಗ್‌ ಕೂಲಿ ದರವನ್ನು ಹೆಚ್ಚಿಸುತ್ತಾ ಬಂದಿವೆ. ಈ ಹಿಂದೆ 2011-(ಪ್ರತಿಕ್ವಿಂಟಾಲ್‌ಗೆ) 4ರೂಗಳಿಂದ 6ರೂ.ಗೆ ಹೆಚ್ಚಿಸಲಾಗಿತ್ತು. 2016-10ರೂ.ಗಳಿಂದ 14ರೂ., 2018- 14ರೂ.ಗಳಿಂದ 16ರೂ.ಗೆ ಹೆಚ್ಚಳ ಮಾಡಿ ಆಯಾ ಸರ್ಕಾರಗಳು ಆದೇಶ ಮಾಡಿರುತ್ತವೆ. ಆದರೆ 2018ರ ನಂತರದಲ್ಲಿ 5ವರ್ಷ ಕಳೆದರೂ ಆಹಾರಧಾನ್ಯಗಳ ಗ್ರಾಮಾಂತರ ಸಾಗಾಣಿಕೆಯ ಲೋಡಿಂಗ್ ಮತ್ತು ಅನ್‌ ಲೋಡಿಂಗ್ ಕೂಲಿ ದರವನ್ನು ಸರ್ಕಾರ ಹೆಚ್ಚಳ ಮಾಡಿಲ್ಲ.”

”ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು 2022-2024ರ ಗ್ರಾಮಾಂತರ ಚಿಲ್ಲರೆ ಸಾಗಾಣಿಕೆ ಟೆಂಡರ್ ಕರೆದು ಅಂತಿಮಗೊಳಿಸಿದ ಟೆಂಡರ್‌ನಲ್ಲಿ ಹಮಾಲಿ ಕಾರ್ಮಿಕರ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೂಲಿದರ ಬೆಂಚ್ ಮಾರ್ಕ್ ದರ ಕ್ವಿಂಟಾಲ್16ರೂ ನಿಗದಿ ಮಾಡಿದೆ. ಆದರೆ ಅದು2018ರಲ್ಲಿ ನಿಗದಿ ಮಾಡಿದ ಕೂಲಿ ದರದಷ್ಟೇ ಇದೆ. ಕಾರ್ಮಿಕ ಇಲಾಖೆಯು ಪ್ರತಿ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆದೇಶ ಮಾಡುವ ತುಟ್ಟಿ ಭತ್ಯೆಯನ್ನು ಕೂಡಾ ಇದರಲ್ಲಿ ಒಳಗೊಂಡಿಲ್ಲ, ಅಷ್ಟೇ ಅಲ್ಲದೆ, ಟೆಂಡರ್‌ನಲ್ಲಿ ಕೂಲಿ ದರವನ್ನು ಕಡಿಮೆ ಮಾಡುವ ವಿಚಾರ ಎಲ್ಲಿಯೂ ಪ್ರಸ್ತಾಪವಾಗಿಲ್ಲವಾದರೂ ಕೂಡ ಹಲವಾರು ಗುತ್ತಿಗೆದಾರರು ಈಗಿರುವ ಕೂಲಿ ದರವನ್ನು ಕಾನೂನು ಬಾಹಿರವಾಗಿ ಇನ್ನೂ ಇಳಿಸಿ 16ರ ಬದಲು 14 ರೂಗಳನ್ನು ನೀಡಿ ಕಾರ್ಮಿಕರಿಗೆ ವಂಚನೆ ಮಾಡುತ್ತಿದ್ದಾರೆ. ಈ ವಿಚಾರವನ್ನು ಹಲವಾರು ಬಾರಿ ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಇದನ್ನು ತಡೆಗಟ್ಟಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದಿರುವುದು ಕಾರ್ಮಿಕರಲ್ಲಿ ಅಪಾರವಾದ ಆಕ್ರೋಶವನ್ನು ಮೂಡಿಸಿದೆ.”

ಇದನ್ನೂ ಓದಿ: ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ ಸಂಘಟನೆಯಿಂದ ಬೃಹತ್ ರ್‍ಯಾಲಿ

”ಸಾಂಕ್ರಾಮಿಕ ರೋಗ ಕೋವಿಡ್‌ ಕಾರಣಕ್ಕಾಗಿ 2020ರ ಮಾರ್ಚ್‌ತಿಂಗಳಿನಲ್ಲಿ ದಿಢೀರೆಂದು ಲಾಕ್‌ಡೌನ್ ಮತ್ತು 2021ರ ಏಪ್ರಿಲ್‌ನಲ್ಲಿ 2ನೇ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ಯಾವುದೇ ಸೌಲಭ್ಯಗಳು ನಮಗೆ ಸಿಗದಿದ್ದರು ಜೀವದ ಹಂಗನ್ನು ತೊರೆದು ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಆಹಾರ ಧಾನ್ಯಗಳ ಸರಬರಾಜು ಮಾಡುವುದು ನಮ್ಮ ಕರ್ತವ್ಯವೆಂದು ಭಾವಿಸಿ ಕೆಲಸವನ್ನು ನಿರ್ವಹಿಸಿಕೊಂಡು ಬಂದಿರುತ್ತೇವೆ. ಈ ಲಾಕ್‌ಡೌನ್ ಸಂದರ್ಭದಲ್ಲಿ ಅನ್ನಭಾಗ್ಯ ಪಡಿತದ ಜಾರಿ ಮಾಡುವ ಹಮಾಲಿ ಕಾರ್ಮಿಕರನ್ನು ಕೋವಿಡ್ ವಾರಿಯ‌ರ್ ಎಂದು ಘೋಷಿಸಲು ಹಲವು ಮನವಿ ಪತ್ರಗಳನ್ನು ನೀಡಿದ್ದರೂ ಸರ್ಕಾರ ಕೋವಿಡ್ ವಾರಿಯರ್ಸ್ ಎಂದು ಕೊನೆಗೂ ಘೋಷಣೆ ಮಾಡಲಿಲ್ಲ ಬದಲಿಗೆ ಪೋಲಿಸರ ಲಾಟಿ ಏಟು ತಿನ್ನಬೇಕಾಗಿ ಬಂದದ್ದೇ ನಮ್ಮ ಭಾಗ್ಯವಾಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಗೋದಾಮುಗಳಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಇಲ್ಲವಾಗಿದೆ. ಇದರ ಜೊತೆಗೆ ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ನಡೆಸುವವರು ಆಯುಕ್ತರೇ, ಕೆಎಫ್‌ಸಿಎಸ್ಸಿ ನಿಗಮದ ವ್ಯವಸ್ಥಾಪಕರೇ ಅಥವಾ ಜಿಲ್ಲಾಧಿಕಾರಿಗಳೇ ಎಂಬುದು ಗೊತ್ತಾಗುತ್ತಿಲ್ಲ. ಈ ಗೊಂದಲವನ್ನು ನಿವಾರಿಸಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ಹಕ್ಕೋತ್ತಾಯಗಳು:-

  1. ಗ್ರಾಮಾಂತರ ಸಾಗಾಣಿಕೆ ಆಹಾರ ಧಾನ್ಯಗಳ ಗೋದಾಮಿನಿಂದ ಸ್ಕೇಲ್‌ಗೆ, ಸ್ಕೇಲ್‌ನಿಂದ ಲಾರಿಗೆ, ಲಾರಿಯಿಂದ ನ್ಯಾಯಬೆಲೆ ಅಂಗಡಿಗೆ ಅನ್‌ಲೋಡಿಂಗ್‌ ಮಾಡುವ ಮೂರು ಕೆಲಸಕ್ಕೆ ಕ್ವಿಂಟಲ್‌ಗೆ ಕನಿಷ್ಟ 36ರೂ.ನಿಗದಿ ಮಾಡಬೇಕು.
  2. ಅನ್ನಭಾಗ್ಯ ಹಮಾಲಿ ಕಾರ್ಮಿಕರಿಗೆ ಆಹಾರ ಇಲಾಖೆಯಿಂದಲೇ ನೇರವಾಗಿ ಸಂಬಳ ಪಾವತಿಯಾಗುವಂತೆ(ಡಿಪಿಎಸ್‌) ಕಾರ್ಮಿಕರನ್ನು ನೇರಪಾವತಿ ವ್ಯವಸ್ಥೆಯಡಿ ತರಬೇಕು.
  3. ರಜಾ ದಿನಗಳಲ್ಲಿ ಕೆಲಸ ಮಾಡುವಾಗ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು.
  4. ಕೆಲಸ ಮಾಡುವ ಜಾಗದಲ್ಲಿ ಮೂಲಭೂತ ಸೌಲಭ್ಯ ಹೆಚ್ಚಿಸಬೇಕು.
  5. ತುಟ್ಟಿಭತ್ಯೆಗೆ ಅನುಗುಣವಾಗಿ ಪ್ರತಿವರ್ಷ ಎ.1ರಿಂದ ಜಾರಿಗೆ ಬರುವಂತೆ ಪ್ರತಿವರ್ಷ ಕೂಲಿದರ ಹೆಚ್ಚಿಸಬೇಕು.
  6. ಗುತ್ತಿಗೆದಾರರ ಪಾಲಿನ ಇಎಸ್‌ಐ ಮತ್ತು ಪಿಎಫ್‌ ವಂತಿಗೆಯನ್ನು ಪಾವತಿಸಲು ಸೂಕ್ತಕ್ರಮ ವಹಿಸಬೇಕು. ಅನ್ನಭಾಗ್ಯ ಯೋಜನೆಯ ಹಮಾಲಿ ಕಾರ್ಮಿಕರಿಗೆ ಗ್ರಾಚ್ಯುಟಿ ಪಾವತಿಸಲು ಕ್ರಮ ವಹಿಸಬೇಕು.
  7. ಆಹಾರ ಇಲಾಖೆಯಿಂದ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಢಿಕ್ಕಿ: ಇಬ್ಬರು ಮೃತ್ಯು

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಪುತ್ರ ಕೈಸರ್‌ಗಂಜ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಣ್‌ ಭೂಷಣ್‌ ಸಿಂಗ್‌ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ...