Homeಮುಖಪುಟಪ್ರಿಯಾಂಕ್‌ ಖರ್ಗೆಗೆ ಶೂಟ್ ಮಾಡುವುದಾಗಿ ಬಿಜೆಪಿ ಮುಖಂಡನಿಂದ ಬೆದರಿಕೆ; ಕಾಂಗ್ರೆಸ್ ಆಕ್ರೋಶ

ಪ್ರಿಯಾಂಕ್‌ ಖರ್ಗೆಗೆ ಶೂಟ್ ಮಾಡುವುದಾಗಿ ಬಿಜೆಪಿ ಮುಖಂಡನಿಂದ ಬೆದರಿಕೆ; ಕಾಂಗ್ರೆಸ್ ಆಕ್ರೋಶ

- Advertisement -
- Advertisement -

ಕಾಂಗ್ರೆಸ್ ಯುವ ನಾಯಕ ಪ್ರಿಯಾಂಕ್‌ ಖರ್ಗೆಯವರ ಹೇಳಿಕೆಯನ್ನು ಟೀಕಿಸುವ ಭರದಲ್ಲಿ, “ನಿಮಗೆ ಶೂಟ್ ಮಾಡಲು ರೆಡಿ ಇದ್ದೇವೆ” ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ವಿವಾದಾತ್ಮಕ ಹೇಳಿಕೆ ನೀಡಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

“ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡಲು ನಾವು ರೆಡಿ ಇದ್ದೀವಿ” ಎಂದು ಮಣಿಕಂಠ ರಾಠೋಡ್‌ ಬೆದರಿಕೆ ಹಾಕಿದ್ದಾರೆ.

ಇತ್ತೀಚೆಗೆ ‘ಪ್ರಿಯಾಂಕ್‌ ಖರ್ಗೆ ನಾಪತ್ತೆ’ ಎಂಬ ಪೋಸ್ಟರ್ ಅಳವಡಿಸಿದ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ, “ನಾವು ಮತ್ತು ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಬಿಜೆಪಿ ಲೀಡರ್‌ಗಳು ತಿರುಗಾಡಲು ಬಿಡುವುದಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಸತ್ತೋಗಿಲ್ಲ” ಎಂದು ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿರುವ ಠಾಠೋಡ್‌, “ನೀವು ಎಕೆ-47ನಿಂದ ಶೂಟ್ ಮಾಡುವಿರಾ? ಅಥವಾ ತೋಪ್‌ನಿಂದ ಮಾಡೋದಿದೆಯಾ? ನೀವು ಶೂಟ್ ಮಾಡಿ, ನಾವು ಸಾಯೋಕು ರೆಡಿ ಇದ್ದೀವಿ. ನಾವೂ ನಿಮಗೆ ಶೂಟ್ ಮಾಡೋಕೂ ರೆಡಿ ಇದ್ದೀವಿ” ಎನ್ನುವ ಮೂಲಕ ಬಂದೂಕಿನ ಪ್ರತಿಕ್ರಿಯೆಯನ್ನು ಪ್ರಸ್ತಾಪಿಸಿದ್ದಾರೆ.

“ಪ್ರಿಯಾಂಕ್ ಅವರ ಗೊಡ್ಡು ಬೆರಿಕೆಗಳಿಗೆ ಹೆದರುವ ಆಸಾಮಿಯಲ್ಲ. ನಿಮಗೆ ಕೌಂಟರ್‌ ನೀಡಲು ನಾನೊಬ್ಬನೇ ಸಾಕು” ಎಂದು ತಿಳಿಸಿದ್ದಾರೆ. ಬಂದೂಕು ಬಳಸುವ ಪ್ರಸ್ತಾಪವನ್ನು ಮಾಡಿರುವ ಬಿಜೆಪಿ ಮುಖಂಡನ ಹೇಳಿಕೆಗೆ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿದೆ.

“ಭಯೋತ್ಪಾದಕ ಗೋಡೆ ಸಂತತಿಯವರಾದ ಬಿಜೆಪಿಯ ತಾಲಿಬಾನ್ ಮನಸ್ಥಿತಿ, ಸಂಸ್ಕೃತಿ ಹೊರಬಂದಿದೆ. ಹಿಂದೆ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಬಿಜೆಪಿ ಇಂದು ಪ್ರಿಯಾಂಕ್ ಖರ್ಗೆ ಅವರಿಗೆ ಶೂಟ್ ಮಾಡುವ ಬೆದರಿಕೆ ಹಾಕುತ್ತಿದೆ. ಬ್ರಿಟಿಷರ ಗುಂಡುಗಳಿಗೆ ಹೆದರದ ಕಾಂಗ್ರೆಸ್‌, ಐಸಿಸ್ ಉಗ್ರರಂತಿರುವ ಬಿಜೆಪಿ ಹೇಡಿಗಳಿಗೆ ಹೆದರುವುದೇ” ಎಂದು ಕಾಂಗ್ರೆಸ್ ಹರಿಹಾಯ್ದಿದೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ್, “ಪ್ರಿಯಾಂಕ್ ಖರ್ಗೆ ಅವರಿಗೆ ನಾವು ಎಕೆ47 ಗನ್ ನಿಂದು ಶೂಟ್ ಮಾಡತ್ತೇವೆ ಎಂದು ಭಾರತೀಯ ಜನತಾ ಪಾರ್ಟಿ ಸರ್ಕಾರ ತಮ್ಮ ಕಾರ್ಯಕರ್ತರ ಮೂಲಕ ಹೇಳಿಕೆ ಕೊಡಿಸಿದೆ. ಇದನ್ನು ನಾವು ಖಂಡಿಸುತ್ತೇವೆ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಪ್ರಿಯಾಂಕ ಖರ್ಗೆ ಅವರನ್ನು ಕೊಲೆ ಮಾಡೋದಕ್ಕೆ ಸಂಚು ರೂಪಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಸರ್ಕಾರದ ಅವ್ಯವಹಾರ ಅಕ್ರಮದ ಕುರಿತು ಧ್ವನಿ ಎತ್ತುತ್ತಿದ್ದಾರೆ‌. ಈ ಹೀಗಾಗಿ ಸರ್ಕಾರ ಪ್ರೀಯಾಂಕ್ ಖರ್ಗೆ ಅವರ ಧ್ವನಿ ಹಾಗೂ ಅವರನ್ನು ಸಹ ಮುಗಿಸುವ ಸಂಚು ಹೂಡಿದೆ” ಎಂದಿದ್ದಾರೆ.

“ಸಮಿಶ್ರ ಸರ್ಕಾರದಲ್ಲಿದ್ದಾಗ ಪ್ರಿಯಾಂಕ್ ಖರ್ಗೆ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಭದ್ರತೆಯನ್ನು ಹಿಂಪಡೆದು ಕೊಳ್ಳಲಾಗಿದೆ‌. ಭದ್ರತೆ ಹಿಂಪಡೆಯುವ ಮುಖಾಂತರ ರಾಜ್ಯ ಬಿಜೆಪಿ ಸರ್ಕಾರ ಪಿಎಸ್ಐ ಹಗರಣದ ಸೇಡು ತೀರಿಸಿಕೊಳ್ಳುತ್ತಿದೆ. ಇದೊಂದು ವ್ಯವಸ್ಥಿತ ಸಂಚು” ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸಿಪಿಐ(ಎಂ) ನಾಯಕನ ಹತ್ಯೆ: 11 ಮಂದಿ ಆರೆಸ್ಸೆಸ್‌‌ ದುಷ್ಕರ್ಮಿಗಳು ತಪ್ಪಿತಸ್ಥರೆಂದು ತೀರ್ಪು

2013ರಲ್ಲಿ ಕೇರಳದಲ್ಲಿ ನಡೆದಿದ್ದ ರಾಜಕೀಯ ಕೊಲೆಗೆ ಸಂಬಂಧಿಸಿದಂತೆ 11 ಮಂದಿ ಆರ್‌ಎಸ್‌ಎಸ್‌ ದುಷ್ಕರ್ಮಿಗಳನ್ನು ತಪ್ಪಿತಸ್ಥರೆಂದು ಕೇರಳದ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ತಿರುವನಂತಪುರಂ ಜಿಲ್ಲೆಯ ಅನವೂರಿನಲ್ಲಿ ನಡೆದ ಸಿಪಿಐ(ಎಂ) ನಾಯಕ ಅನವೂರ್ ನಾರಾಯಣನ್ ನಾಯರ್ ಹತ್ಯೆ ಪ್ರಕರಣದಲ್ಲಿ 11 ಮಂದಿ ಆರೆಸ್ಸೆಸ್‌ ದುಷ್ಕರ್ಮಿಗಳು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡಿದ್ದು, ಶಿಕ್ಷೆ‌ಯನ್ನು ಸೋಮವಾರ ಪ್ರಕಟವಾಗಲಿದೆ. ತಪ್ಪಿತಸ್ಥರಲ್ಲಿ ಬಿಜೆಪಿ ಬೆಂಬಲಿತ ಕಾರ್ಮಿಕ ಸಂಘಟನೆ ಬಿಎಂಎಸ್ (ಕೆಎಸ್‌ಆರ್‌ಟಿಸಿ ನೌಕರರ ಸಂಘ)ನ ರಾಜ್ಯ ಮಟ್ಟದ ನಾಯಕ ಕೂಡ ಸೇರಿದ್ದಾನೆ.

ಸಿಪಿಎಂ ಅನವೂರು ಶಾಖೆಯ ಕಾರ್ಯದರ್ಶಿ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಸ್ಟಾಫ್ ಯೂನಿಯನ್ ರಾಜ್ಯ ಸಮಿತಿಯ ಸದಸ್ಯರಾಗಿದ್ದ ನಾರಾಯಣನ್ ಅವರನ್ನು 2013 ರ ನವೆಂಬರ್ 4 ರಂದು ಅವರ ಮನೆಗೆ ನುಗ್ಗಿದ ಶಸ್ತ್ರಧಾರಿ ಆರೆಸ್ಸೆಸ್‌‌ ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿತ್ತು.

ನಾರಾಯಣನ್‌ ಅವರನ್ನು, ಅವರ ಪತ್ನಿ ಮತ್ತು ಇಬ್ಬರು ಪುತ್ರರ ಎದುರೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ನಾರಾಯಣನ್‌ ಅವರ ಮಕ್ಕಳಾದ ಶಿವಪ್ರಸಾದ್ ಹಾಗೂ ಮತ್ತೊಬ್ಬ ಪುತ್ರ ತೀವ್ರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿರಿ: ‘ಗುಜರಾತ್‌ ಮಾದರಿ’ ಅಭ್ಯರ್ಥಿ ಆಯ್ಕೆಗೆ ಸ್ವತಃ ಕರ್ನಾಟಕ ಬಿಜೆಪಿಯೆ ತಯಾರಾಗುವುದಿಲ್ಲ; ಯಾಕೆಂದರೆ…

ದಾಳಿಕೋರರ ಪ್ರಮುಖ ಗುರಿ ನಾರಾಯಣನ್ ಅವರ ಮಗ ಶಿವಪ್ರಸಾದ್ ಆಗಿದ್ದರು. ವಿದ್ಯಾರ್ಥಿ ಸಂಘಟನೆಯಾಗಿದ್ದ ಎಸ್‌ಎಫ್‌ಐನ ವೆಳ್ಳಾರಡ ಪ್ರದೇಶ ಕಾರ್ಯದರ್ಶಿಯಾಗಿದ್ದ ಅವರನ್ನು ಕೊಲ್ಲಲು ಆರೆಸ್ಸೆಸ್‌ನ ದುಷ್ಕರ್ಮಿಗಳು ಅವರ ಮನೆಗೆ ಬಂದಿದ್ದರು.

ತನ್ನ ಮಗನನ್ನು ಉಳಿಸಲು ಯತ್ನಿಸಿದಾಗ ನಾರಾಯಣನ್ ಅವರನ್ನು ಕಡಿದು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೂ ಮುನ್ನ ಎಸ್‌ಎಫ್‌ಐ ಸದಸ್ಯರು ಬಿಜೆಪಿ ಬೆಂಬಲಿತ ಕಾರ್ಮಿಕ ಸಂಘಟನೆಯ ಬಿಎಂಎಸ್‌‌‌ನ ಕಾರ್ಯಕರ್ತನಾಗಿದ್ದ ಬಸ್ ಚಾಲಕನೊಂದಿಗೆ ಘರ್ಷಣೆ ನಡೆಸಿದ್ದರು.

ಇದರ ಪ್ರತೀಕಾರವಾಗಿ, ಶಿವಪ್ರಸಾದ್ ಅವರನ್ನು ಗುರಿಯಾಗಿಸಿಕೊಂಡು ನಾರಾಯಣನ್ ಮನೆಗೆ ಆರೆಸ್ಸೆಸ್‌ ದುಷ್ಕರ್ಮಿಗಳ ಗುಂಪು ನುಗ್ಗಿತ್ತು. ಆದರೆ ಅವರನ್ನು ನಾರಾಯಣನ್ ತಡೆದಿದ್ದು, ಈ ವೇಳೆ ಹರಿತವಾದ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...