Homeಮುಖಪುಟಬಿಜೆಪಿಗೆ ತಾಕತ್ತಿದ್ದರೆ ಮಾಂಸಾಹಾರಿಗಳ ವೋಟ್ ಬೇಕಿಲ್ಲವೆಂದು ಘೋಷಿಸಲಿ: ಉಗ್ರಪ್ಪ ಸವಾಲು

ಬಿಜೆಪಿಗೆ ತಾಕತ್ತಿದ್ದರೆ ಮಾಂಸಾಹಾರಿಗಳ ವೋಟ್ ಬೇಕಿಲ್ಲವೆಂದು ಘೋಷಿಸಲಿ: ಉಗ್ರಪ್ಪ ಸವಾಲು

- Advertisement -
- Advertisement -

ಮಾಂಸಹಾರಿಗಳನ್ನು ತುಚ್ಛವಾಗಿ ಕಾಣುವ ಬಿಜೆಪಿ ಪಕ್ಷವು ತಾಕತ್ತಿದ್ದರೆ ನಮಗೆ ಮಾಂಸಾಹಾರಿಗಳ ವೋಟ್ ಬೇಕಿಲ್ಲವೆಂದು ಘೋಷಿಸಲಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪನವರು ಸವಾಲು ಹಾಕಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರ್‌ಎಸ್‌ಎಸ್‌ನವರು ಮಾಂಸಾಹಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಧಮ್ ಇದ್ದರೆ ಮಾಂಸಾಹಾರಿಗಳು ನಮ್ಮ ಶಾಖೆಗಳಿಗೆ ಬರುವುದು ಬೇಡ, ಬಿಜೆಪಿ ಕಾರ್ಯಕ್ರಮಗಳಿಗೆ ಬರುವುದು ಬೇಡ ಎಂದು ಘೋಷಿಸಬೇಕು” ಎಂದು ಒತ್ತಾಯಿಸಿದರು.

ಮಾಂಸಾಹಾರವು ಭಕ್ತರ ದೇವರೆಡೆಗಿನ ಭಕ್ತಿಯನ್ನು ಹಾಳು ಮಾಡುವುದಿಲ್ಲ. ಆದರೆ ಮಾಂಸಹಾರಿಗಳನ್ನು ದ್ವೇ‍ಷಿಸುವವರು ನಿಜವಾಗಿ ದೇವರನ್ನು ಪ್ರೀತಿಸಲಾರರು ಎಂದು ಉಗ್ರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಮಿತಿ ಮೀರಿದ ಭ್ರಷ್ಟಾಚಾರದಿಂದ ಅಭಿವೃದ್ಧಿ ಕುಂಠಿತವಾಗಿದೆ. ಕೋಮು ಪ್ರಚೋದನೆಗಳಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪ್ರವಾಹದಿಂದ 74 ಜನ ಸತ್ತಿರುವುದಾಗಿ ಕಂದಾಯ ಸಚಿವರು ಹೇಳಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಸರ್ಕಾರ ವಿಫಲವಾಗಿರುವ ಸಮಯದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಜನರ ಸಮಸ್ಯೆ ಆಲಿಸುತ್ತಿರುವಾ ಜನರ ದಾರಿ ತಪ್ಪಿಸಲು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿಯವರು ಅಸಂಬದ್ಧ ವಿಚಾರಗಳನ್ನು ಮುನ್ನಲೆಗೆ ತರುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಶಿವನಿಗೆ ಬೇಡರ ಕಣ್ಣಪ್ಪ ಮಾಂಸಾಹಾರವನ್ನು ನೈವೇಧ್ಯವಾಗಿ ನೀಡಿದ ಉಲ್ಲೇಖವಿದೆ. ರಾಮಾಯಣದಲ್ಲಿ ಸೀತೆ, ರಾಮ ಸೇರಿದಂತೆ ಹಲವರು ಮಾಂಸಾಹಾರದ ಪೂಜೆ ಮಾಡುವ ಹರಕೆ ಹೊರುವ ಪ್ರಸಂಗಗಳಿವೆ. ಇಂದು ಬಹುತೇಕ ಜನರು ಮಾಂಸಾಹಾರವನ್ನು ಎಡೆ ಇಟ್ಟು ಪೂಜೆ ಮಾಡುತ್ತಾರೆ. ಇವರನ್ನೆಲ್ಲ ಹಂಗಿಸಲು ಬಿಜೆಪಿ ಹೊರಟಿರುವುದು ಸರಿಯಲ್ಲ ಎಂದರು.

ದೇಶದ ಶೇ.79 ರಷ್ಟು ಜನ ಮಾಂಸಾಹಾರಿಗಳು. ಅವರನ್ನು ಅವಹೇಳನ ಮಾಡುವುದು ಯಾವ ಕಾರಣಕ್ಕೂ ಸರಿಯಲ್ಲ. ಆಹಾರ ಅವರವರ ಇಚ್ಛೆ. ಇದನ್ನು ಬಿಜೆಪಿ ಅರ್ಥ ಮಾಡಿಕೊಳ್ಳದಿದ್ದರೆ ಜನರೆ ಪಾಠ ಕಲಿಸುತ್ತಾರೆ ಎಂದರು.

ಇದನ್ನೂ ಓದಿ: ಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕಾಂಗ್ರೆಸ್ ನವರು ಅದೇ ರೀತಿ ಹಿಂದೂಗಳ ಮತ ಬೇಡ ನಮಗೆ ಅಂತ ಹೇಳಲಿ ,ಈ ರೀತಿಯಾಗಿ ಹಿಂದೂ ವಿರೋಧಿ ಹೇಳಿಕೆ ಕೊಡುವ ಬದಲು ನಾನು ಗೌರಿ ಪತ್ರಿಕೆಯ ಸಂಪಾದಕರೇ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...