Homeಕರ್ನಾಟಕದ್ವೇಷ ಸಾಧಿಸುವ ಮೋದಿಯವರು ವಾಜಪೇಯಿ ಹೇಳಿದ್ದ "ರಾಜಧರ್ಮ"ದ ಪಾಠ ನೆನಪಿಸಿಕೊಳ್ಳಲಿ: ಕಾಂಗ್ರೆಸ್

ದ್ವೇಷ ಸಾಧಿಸುವ ಮೋದಿಯವರು ವಾಜಪೇಯಿ ಹೇಳಿದ್ದ “ರಾಜಧರ್ಮ”ದ ಪಾಠ ನೆನಪಿಸಿಕೊಳ್ಳಲಿ: ಕಾಂಗ್ರೆಸ್

- Advertisement -
- Advertisement -

ಕರ್ನಾಟಕದ ಮೇಲೆ ದ್ವೇಷ ಸಾಧಿಸುವ ನರೇಂದ್ರ ಮೋದಿ ಅವರು ವಾಜಪೇಯಿಯವರು ಹೇಳಿದ್ದ “ರಾಜಧರ್ಮ”ದ ಪಾಠವನ್ನು ನೆನಪಿಸಿಕೊಳ್ಳಲಿ ಎಂದು ರಾಜ್ಯ ಕಾಂಗ್ರೆಸ್ ಘಟಕ ಹೇಳಿದೆ.

ಕೇಂದ್ರ ಪುರಸ್ಕೃತ 61 ಯೋಜನೆಗಳಿಗೆ ಅನುದಾನ ಬಿಡುಗಡೆಯಾಗದಿರುವ ಕುರಿತು ಕೇಂದ್ರ ಅನುದಾನ ಶೂನ್ಯ ಎನ್ನುವ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಟ್ವೀಟ್ ಮಾಡಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ‘ಕಾಂಗ್ರೆಸ್ ಗೆದ್ದರೆ ಕೇಂದ್ರದ ಅನುದಾನ ನಿಲ್ಲಲಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭದರಿಕೆ ಹಾಕಿದ್ದರು. ಇಂದು ಅದೇ ಬೆದರಿಕೆಯಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆಯೇ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

23 ಇಲಾಖೆಗಳ 61 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಈ ಹಿಂದೆ ಜೆಪಿ ನಡ್ಡಾ ಅವರು ಕಾಂಗ್ರೆಸ್ ಗೆದ್ದರೆ ಕೇಂದ್ರದ ಅನುದಾನ ನಿಲ್ಲಲಿದೆ ಎಂದು ಬೆದರಿಕೆ ಹಾಕಿದ್ದರು, ಇಂದು ಅದೇ ಬೆದರಿಕೆಯಂತೆ ನಡೆದುಕೊಳ್ಳುತ್ತಿದೆಯೇ ಕೇಂದ್ರ ಸರ್ಕಾರ?” ಎಂದು ಪ್ರಶ್ನೆ ಮಾಡಿದೆ.

”ರಾಜ್ಯದ 25 ಬಿಜೆಪಿ ಸಂಸದರ ಕೆಲಸವೇನು? ಕರ್ನಾಟಕಕ್ಕೆ ಆಗುತ್ತಿರುವ ಈ ಅನ್ಯಾಯವನ್ನು ಏಕೆ ಪ್ರಶ್ನಿಸುತ್ತಿಲ್ಲ? ಕರ್ನಾಟಕದ ಮೇಲೆ ಈ ರೀತಿ ದ್ವೇಷ ಸಾಧಿಸುವ ನರೇಂದ್ರ ಮೋದಿ ಅವರು ವಾಜಪೇಯಿಯವರು ಹೇಳಿದ್ದ “ರಾಜಧರ್ಮ”ದ ಪಾಠವನ್ನು ನೆನಪಿಸಿಕೊಳ್ಳಲಿ” ಎಂದಿದೆ.

ಇದನ್ನೂ ಓದಿ: ಗೌರಿ ಲಂಕೇಶ್ ನೆನಪು: ಗೌರವ ನಮನ, ಸಂವಾದ ಕಾರ್ಯಕ್ರಮ – ಸಿಎಂ ಸಿದ್ದರಾಮಯ್ಯ ಭಾಗಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...