Homeಕರ್ನಾಟಕ7 ದಿನಗಳಲ್ಲಿ 6ನೇ ಬಾರಿ ಇಂಧನ ದರ ಏರಿಕೆ, ಚಿಕ್ಕಮಗಳೂರಿನಲ್ಲಿ ಪೆಟ್ರೋಲ್‌ 107.11 ರೂ. ರಾಜ್ಯದಲ್ಲೇ...

7 ದಿನಗಳಲ್ಲಿ 6ನೇ ಬಾರಿ ಇಂಧನ ದರ ಏರಿಕೆ, ಚಿಕ್ಕಮಗಳೂರಿನಲ್ಲಿ ಪೆಟ್ರೋಲ್‌ 107.11 ರೂ. ರಾಜ್ಯದಲ್ಲೇ ಅತೀ ಹೆಚ್ಚು!

ರಾಜ್ಯದ ಹಲವು ಜಿಲ್ಲೆಗಳ ಬೆಲೆ ಏರುಪೇರಿದ್ದು, ಜಿಲ್ಲಾವಾರು ಪಟ್ಟಿ ಇಲ್ಲಿದೆ

- Advertisement -
- Advertisement -

ಪೆಟ್ರೋಲ್‌ ಮತ್ತು ಡೀಸೆಲ್ ದರವನ್ನು ಸೋಮವಾರ ಮತ್ತೆ ಏರಿಕೆ ಮಾಡಲಾಗಿದೆ. ಕಳೆದ ಏಳು ದಿನಗಳಲ್ಲಿ ಇಂಧನ ದರಗಳನ್ನು ಇದುವರೆಗೂ ಆರು ಬಾರಿ ಹೆಚ್ಚಿಸಲಾಗಿದೆ. ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ದರವನ್ನು ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 35 ಪೈಸೆ ಹೆಚ್ಚಿಸಲಾಗಿದೆ.

ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಈಗ 99.11 ರೂ. ನಿಂದ 99.41 ರೂ. ಗೆ ಹೆಚ್ಚಳವಾಗಿದ್ದರೆ, ಡೀಸೆಲ್‌ ಬೆಲೆ ಲೀಟರ್‌ಗೆ 90.42 ರೂ. ನಿಂದ 90.77 ರೂ.ಗೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯನ್ನು ಭಾನುವಾರಕ್ಕಿಂತ 32 ಪೈಸೆ ಹೆಚ್ಚಿಸಲಾಗಿದ್ದು, 104.78 ರೂ. ಗೆ ತಲುಪಿದೆ. ಡೀಸೆಲ್ ಬೆಲೆ 89.02 ರೂ. ಗೆ ತಲುಪಿದ್ದು, 0.35 ಪೈಸೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಸಿದ್ದತೆ: ಕಾಂಗ್ರೆಸ್ ವಿರೋಧ

ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ ಐದು ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ನಾಲ್ಕು ತಿಂಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿರಲಿಲ್ಲ. ನಾಲ್ಕುವರೆ ತಿಂಗಳ ನಂತರ ಮಾರ್ಚ್‌ 22 ರಂದು ಮತ್ತೆ ದರ ಹೆಚ್ಚಳ ಪ್ರಾರಂಭವಾಗಿತ್ತು. ಇದು ಇದರ ನಂತರ ಮಾಡಲಾದ ಆರನೇ ದರ ಹೆಚ್ಚಳವಾಗಿದೆ.

ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದ್ದು, ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರಗಳು ಬದಲಾಗುತ್ತವೆ. ರಾಜ್ಯದಲ್ಲಿ ಕಳೆದ ಹತ್ತು ದಿನಗಳಲ್ಲಿ ಇಂಧನ ದರ ಏರಿಕೆ ಚಿತ್ರ ಕೆಳಗಿದೆ. ಗಮನಿಸಿ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಪೆಟ್ರೋಲ್ ಬೆಲೆ 98 ಪೈಸೆಗೆ ಹೆಚ್ಚಿಸಲಾಗಿದ್ದು, ಅಲ್ಲಿ ಪೆಟ್ರೋಲ್ ಬೆಲೆ 107.11 ರೂ.ಗೆ ತಲುಪಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಡೀಸೆಲ್ ಬೆಲೆ ಕೂಡಾ ಜಿಲ್ಲೆಯಲ್ಲಿ 93 ಪೈಸೆ ಹೆಚ್ಚಾಗಿದ್ದು, ಇದರೊಂದಗೆ ಅಲ್ಲಿ ಡೀಸೆಲ್ ಬೆಲೆ 91.02 ರೂ. ಗೆ ಏರಿಕೆಯಾಗಿದೆ.

ಈ ಮೂಲಕ ರಾಜ್ಯದಲ್ಲೇ ಪೆಟ್ರೋಲ್‌ ಮತ್ತು ಡೀಸೆಲ್‌‌ ಬೆಲೆಯ ಹಚ್ಚಿರುವ ಜಿಲ್ಲೆಯಾಗಿ ಚಿಕ್ಕಮಗಳೂರು ಜಿಲ್ಲೆ ಸೋಮವಾರ ಹೊರಹೊಮ್ಮಿದೆ. ಉಳಿದಂತೆ ಬಾಕಿ ಜಿಲ್ಲೆಗಳ ಬೆಲೆಗಳು ಕೆಳಗಿನಂತಿವೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ಮುಗಿದಿರುವುದರಿಂದ ಇಂಧನ ಬೆಲೆ ಏರಿಕೆಯಾಗಬಹುದು ಎಂಬ ಊಹಾಪೋಹಗಳಿದ್ದವು.

ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಬೆಲೆಗಳಿಂದ ಪರಿಹಾರವನ್ನು ನೀಡಲು ಕೇಂದ್ರವು ನವೆಂಬರ್ 4, 2021 ರಂದು ಅಬಕಾರಿ ಸುಂಕವನ್ನು ಕಡಿತಗೊಳಿಸಿತು. ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಸುಂಕವನ್ನು 5 ರೂ. ಮತ್ತು ಡೀಸೆಲ್‌ಗೆ 10 ರೂ. ನಷ್ಟು ಕಡಿತಗೊಳಿಸಿತ್ತು. ಇದರಿಂದಾಗಿ ಇಂಧನ ದರಗಳು ಇಳಿಕೆಯಾಗಿತ್ತು.

ಇದನ್ನೂ ಓದಿ: ಲೀಟರ್‌ ಪೆಟ್ರೋಲ್ ಮೇಲೆ 50 ರೂ ಕಡಿತ ಮಾಡಲಿ: ಲಾಲು ಪ್ರಸಾದ್ ಯಾದವ್ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...