Homeಮುಖಪುಟಅಮೆಜಾ಼ನ್‌ ಹೆಸರಿನ ಗಿಫ್ಟ್‌ಲಿಂಕ್‌ ನಿಮ್ಮ ವಾಟ್ಸ್‌ಅಪ್‌ಗೆ ಬಂದಿದೆಯೇ? ಹಾಗಾದರೆ ಎಚ್ಚರ!

ಅಮೆಜಾ಼ನ್‌ ಹೆಸರಿನ ಗಿಫ್ಟ್‌ಲಿಂಕ್‌ ನಿಮ್ಮ ವಾಟ್ಸ್‌ಅಪ್‌ಗೆ ಬಂದಿದೆಯೇ? ಹಾಗಾದರೆ ಎಚ್ಚರ!

- Advertisement -
- Advertisement -

ಈಸ್ಟರ್‌‌ ದಿನದ ನೆಪದಲ್ಲಿ ಖಾಸಗೀ ವಿವರಗಳನ್ನು ಕದಿಯುವ ಬೆಳವಣಿಗೆ ಬೆಳಕಿಗೆ ಬಂದಿದೆ. ಅಮೆಜಾ಼ನ್‌ ಸ್ಪೆಷಲ್ ಗಿಫ್ಟ್‌ ಹೆಸರಲ್ಲಿ ವಾಟ್ಸ್‌ಆಪ್‌ನಲ್ಲಿ ಬರುತ್ತಿರುವ ಮೋಸದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಇರುವುದೇ ಇದಕ್ಕೆ ಉತ್ತರ.

ಹೌದು. ಯಾವುದಾದರೂ ಹಬ್ಬ, ಆಚರಣೆಗಳು ಬಂದಾಗ ಈ ರೀತಿಯ ಲಿಂಕ್‌ಗಳು ವಾಟ್ಸ್‌ಅಪ್‌ನಲ್ಲಿ ಬರುತ್ತವೆ. ಅವುಗಳನ್ನು ಕ್ಲಿಕ್ ಮಾಡಿದರೆ ಅಪಾಯ ಕಾದಿರುತ್ತದೆ. ನಮ್ಮ ಬ್ಯಾಂಕ್ ವಿವರಗಳೂ ಸೋರಿಯಾಗುವ ಸಾಧ್ಯತೆ ಇರುತ್ತದೆ.

ಕಳೆದ ಪ್ರೇಮಿಗಳ ದಿನದ ಸಂದರ್ಭದಲ್ಲಿ ಇಂಥದ್ದೇ  ಲಿಂಕ್ ಹರಿದಾಡಿತ್ತು. ‘ಅಮೆಜಾನ್‌ ವ್ಯಾಲೆಂಟೈನ್ಸ್ ಡೇ’ ಭಾಗವಾಗಿ ಉಚಿತ ಉಡುಗೊರೆಯನ್ನು ಗೆಲ್ಲುವ ಅವಕಾಶ ಎಂದು ನಕಲಿ ಲಿಂಕ್‌ ಹರಿದಾಡಿತ್ತು. ಈ ಕುರಿತು ‘ದಿ ಕ್ವಿಂಟ್’ ಜಾಲತಾಣ ವಿಶೇಷ ವರದಿ ಮಾಡಿತ್ತು.

ಈ ಲಿಂಕ್‌ಗಳನ್ನು ನೀವು ಪ್ರವೇಶಿಸಿದರೆ, ಇಲ್ಲಿನ ಸೂಚನೆಗಳನ್ನು ಅನುಸರಿಸಿದರೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಮೂರನೇ ವ್ಯಕ್ತಿ ಕದಿಯಬಹುದು ಅಥವಾ ಮಾಲ್‌ವೇರ್‌ (ವೈರಸ್‌ ಸಾಫ್ಟ್‌ವೇರ್) ನಿಮ್ಮ ಮೊಬೈಲ್ ಪ್ರವೇಶಿಸಬಹುದು ಎಂದು CyberPeace Foundation ಮತ್ತು Autobot Infosec ಸಂಸ್ಥೆಗಳು ಎಚ್ಚರಿಸಿದ್ದವು. ಈಗ ಈಸ್ಟರ್‌‌ ದಿನದ ನೆಪದಲ್ಲಿ ಮತ್ತದೇ ಲಿಂಕ್‌ ಹರಿದಾಡುತ್ತಿದೆ.

“ಒಬ್ಬ ಬಳಕೆದಾರನು ಈ ಬಲೆಗೆ ಸಿಲುಕಿದರೆ, ಅದು ಮೈಕ್ರೊಫೋನ್, ಕ್ಯಾಮೆರಾ, ಪಠ್ಯ ಸಂದೇಶಗಳು, ಸಂಪರ್ಕಗಳು, ಚಿತ್ರಗಳು, ವೀಡಿಯೊಗಳು, ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಇತ್ಯಾದಿಗಳಿಗೆ ಅನ್ಯರು ಪ್ರವೇಶಿಸಲು ಸಾಧ್ಯವಾಗಬಹುದು. ಜೊತೆಗೆ ಹಣಕಾಸಿನ ನಷ್ಟಗಳು ಉಂಟಾಗಬಹುದು” ಎಂದು ಸೈಬರ್‌ ಸಂಸ್ಥೆಗಳು ಎಚ್ಚರಿಸಿವೆ.

ನೀವು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಜಾಲತಾಣ (https://tinyurl2.ru/m754089054/) ಅಮೆಜಾನ್ ಬ್ಯಾನರ್‌ ಜೊತೆಗೆ ಗಿಫ್ಟ್‌ಬಾಕ್ಸ್‌ ತೋರಿಸುತ್ತದೆ. ವಿಶೇಷ ಉಡುಗೊರೆಯನ್ನು ಗೆಲ್ಲಲು ಸಣ್ಣ ರಸಪ್ರಶ್ನೆಯನ್ನು ಪೂರ್ಣಗೊಳಿಸಲು ಸೂಚಿಸುತ್ತದೆ. (ನೆನಪಿಡಿ, ಮೊಬೈಲ್‌ನಲ್ಲಿ ಮಾತ್ರ ಈ ಲಿಂಕ್ ಓಪನ್ ಆಗುತ್ತದೆ. ಸಿಸ್ಟಮ್‌ನಲ್ಲಿ ಕ್ಲಿಕ್ ಮಾಡಿದರೆ ‘ಫೇಜ್‌ ನಾಟ್ ಫೌಂಡ್‌’ ಎಂದು ತೋರಿಸುತ್ತದೆ.)

ಇದರ ಕೆಳಭಾಗದಲ್ಲಿ ನಕಲಿ ಕಾಮೆಂಟ್‌ಗಳ ವಿಭಾಗವಿದೆ. ಗಿಫ್ಟ್‌ ಕೊಡುತ್ತಿರುವುದು ನಿಜವೆಂದು ಕೆಲವರು ದೃಢೀಕರಿಸುವ ನಕಲಿ ಕಮೆಂಟ್‌ಗಳಿರುತ್ತವೆ. ಅಲ್ಲಿ ಕಮೆಂಟ್ ಮಾಡಿರುವವರು ಈ ಲಿಂಕ್‌ ನಿಜವೆಂದು ಪ್ರತಿಪಾದಿಸುತ್ತಾರೆ.

ಒಮ್ಮೆ ನೀವು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರೆ (ನಿಮಗೆ ಅಮೆಜಾ಼ನ್‌ ತಿಳಿದಿದೆಯೇ? ನಿಮ್ಮ ವಯಸ್ಸು ಎಷ್ಟು?) ಅಭಿನಂದನಾ ಸಂದೇಶ ನಿಮಗೆ ಕಾಣಿಸಿಕೊಳ್ಳುತ್ತದೆ. ಅದರ ನಂತರ ಬಳಕೆದಾರರು ಉಡುಗೊರೆಯನ್ನು ಆಯ್ಕೆ ಮಾಡಿ ಬಹುಮಾನಗಳನ್ನು ಗೆಲ್ಲಲು ಮೂರು ಅವಕಾಶಗಳನ್ನು ನೀಡಲಾಗುತ್ತದೆ.

ಈ ಹಿಂದೆ ಪ್ರೇಮಿಗಳ ದಿನಗಳ ಸಮಯದಲ್ಲಿ ಬಂದ ಲಿಂಕ್‌ ಕ್ಲಿಕ್ ಮಾಡಿ ರಸಪ್ರಶ್ನೆಯನ್ನು ಪೂರೈಸಿದಾಗ, ನೀವು “Apple iPhone 11 128GB” ಅನ್ನು ಗೆದ್ದಿರುವಿರಿ ಎಂದು ತೋರಿಸಲಾಗುತ್ತಿತ್ತು. ನಂತರ WhatsApp ನಲ್ಲಿ ಈ ಅಭಿಯಾನವನ್ನು ಹಂಚಿಕೊಳ್ಳಲು ಸೂಚಿಸಲಾಗಿತ್ತು.

PC: The Quint

ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಳಕೆದಾರರು ವಾಟ್ಸಾಪ್ ಬಟನ್ ಅನ್ನು ಹಲವು ಬಾರಿ ಕ್ಲಿಕ್ ಮಾಡಬೇಕಾಗುತ್ತದೆ ಎಂಬುದನ್ನು ತಜ್ಞರು ಗಮನಿಸಿದ್ದಾರೆ. ನಿಮ್ಮ “ನೋಂದಣಿ”ಯನ್ನು ನೀವು ಪೂರ್ಣಗೊಳಿಸಿದ ನಂತರ, ಅದು ನಿಮ್ಮನ್ನು ಬಹು ಜಾಹೀರಾತು ವೆಬ್‌ಪುಟಗಳಿಗೆ ಕರೆದೊಯ್ಯುತ್ತದೆ.

ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ ಅಂತಹ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಲು ಮತ್ತು ಬ್ಯಾಂಕಿಂಗ್ ಮಾಹಿತಿಯಂತಹ ಗೌಪ್ಯ ವಿವರಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ತಜ್ಞರು ಎಚ್ಚರಿಸಿದ್ದಾರೆ. ಜನರು ಯಾವುದೇ ಲಿಂಕ್‌ಗಳನ್ನು ಪರಿಶೀಲಿಸದೆ ಹಂಚಿಕೊಳ್ಳುವುದೂ ಸರಿಯಲ್ಲ.


ಇದನ್ನೂ ಓದಿರಿ: ಸೈಬರ್‌ ದಾಳಿಯ ಬಗ್ಗೆ 20 ಲಕ್ಷ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಮೆಜಾನ್ ನಲ್ಲಿ ಮಾತ್ರ ಅಲ್ಲ, ಇತರ ಹಲವೆಡೆ ಇದು ಅವ್ಯಾಹತವಾಗಿ ನಡೆಯುತ್ತಿದೆ. ಉದಾಹರಣೆಗೆ, ಪೇಟಿಎಂ ನಲ್ಲಿ ಕೂಡಾ ಇದು ಬರುತ್ತಿದೆ. ಸಾರ್ವಜನಿಕರನ್ನು ಎಚ್ಚರಿಸುವ ನಿಮ್ಮ ಕಳಕಳಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...