Homeಕರ್ನಾಟಕಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

ಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

- Advertisement -
- Advertisement -

“ನೀನು ಯಾವನಯ್ಯಾ ನಾನ್‌ವೆಜ್‌ ತಿನ್ನಲ್ವೇನಯ್ಯ? ನಾನು ಏನು ತಿಂದೆ ಅಂತ ಕೇಳಲು ನೀನ್ಯಾವನು?” ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತನೊಬ್ಬನಿಗೆ ತರಾಟೆ ತೆಗೆದುಕೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ‘ಬಾಡಿನ ಘಮಲು’ ಜೋರಾಗಿದೆ.

‘ಬಾಡು ತಿಂದ ಬಳಿಕ ದೇವಾಸ್ಥಾನಕ್ಕೆ ಸಿದ್ದರಾಮಯ್ಯ ಹೋಗಿದ್ದಾರೆ’ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದಾರೆಂದು ಸಿದ್ದರಾಮಯ್ಯನವರ ಆಹಾರ ಹಕ್ಕನ್ನು ಕೆಣಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾಂಸಾಹಾರ ಕೇಂದ್ರಿತ ಶೂದ್ರ, ದಲಿತ ಸಂಸ್ಕೃತಿಯ ಕುರಿತು ಜನರೇ ಈಗ ಬಿಜೆಪಿಗೆ ಪಾಠ ಹೇಳುತ್ತಿದ್ದಾರೆ.

‘ನಮ್ಮ ಆಹಾರ ನಮ್ಮ ಹಕ್ಕು. ನಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಕೇಳಲು ನೀವ್ಯಾರು?’ ಎಂಬ ಪ್ರಶ್ನೆ ಬಿರುಸು ಪಡೆದಿದೆ. ‘ಬಾಡೇ ನಮ್‌ ಗಾಡು’ ಅಭಿಯಾನದ ಎರಡನೇ ಆವೃತ್ತಿಯೂ ಚಾಲನೆ ಪಡೆದಿದೆ.

ಹಂಸಲೇಖ ಅವರು ಮಾಂಸಾಹಾರದ ಕುರಿತು ಮಾತನಾಡಿದ್ದ ಸಂದರ್ಭದಲ್ಲಿ ಮಾಂಸಾಹಾರಿಗಳ ಕುರಿತು ಕೆಲವರು ಕುಹಕವಾಡಿದ್ದರು. ಇದರಿಂದ ಸಿಟ್ಟಿಗೆದ್ದ ಬಹುಸಂಖ್ಯಾತ ಮಾಂಸಪ್ರಿಯರು, ‘ಬಾಡೇ ನಮ್‌ ಗಾಡು’ ಅಭಿಯಾನವನ್ನು ಆರಂಭಿಸಿ, ಯಶಸ್ವಿಯಾಗಿದ್ದರು. ಸಿದ್ದರಾಮಯ್ಯನವರು ತಮ್ಮ ಆಹಾರ ಸಂಸ್ಕೃತಿ ಹಾಗೂ ಹಕ್ಕನ್ನು ಪ್ರತಿಪಾದಿಸಿದ ಬಳಿಕ ಮತ್ತೊಮ್ಮೆ ‘ಬಾಡೇ ನಮ್‌ ಗಾಡು’ ಎಂದು ಜನರು ಹೇಳತೊಡಗಿದ್ದಾರೆ.

“ನಾಳೆಯಿಂದ ಬರುವ ಅಮಾವಾಸ್ಯೆವರೆಗೂ #ಬಾಡೇ_ನಮ್_ಗಾಡು ಬೃಹತ್ ಅಭಿಯಾನ. ಈ Hashtag ಬಳಸಿ ಬಾಡೂಟದ ಫೋಟೋ ಪೋಸ್ಟ್ ಮಾಡಬೇಕು. ಬಾಡು ತಿನ್ನದದವರಿಗೂ ನೋಡೋಕೆ ಮುಕ್ತ ಅವಕಾಶವಿದೆ. ಶ್ರಾವಣ, ಸೋಮವಾರ, ಶುಕ್ರವಾರ ಅಂತ ಕಥೆ ಹೊಡೆಯೋ ದಲಿತ ಮತ್ತು ಶೂದ್ರ $#%% ಕ್ಕೆ ಪ್ರವೇಶ ನಿಷಿದ್ಧ. ಇನ್ನುಳಿದಂತೆ ಸರ್ವರಿಗೂ ಮುಕ್ತ ಪ್ರವೇಶ. ಪ್ರಕಟಣೆ : ಅಖಿಲ ಕರ್ನಾಟಕ ಬಾಡು ಪ್ರಿಯ ಸಂಘ” ಎಂಬ ಸಂದೇಶ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಕೆಲವು ಪ್ರತಿಕ್ರಿಯೆಗಳ ಝಲಕ್‌ ಹೀಗಿದೆ:

ರಾಜ್ಯ ಸರ್ಕಾರ ತಕ್ಷಣ ಒಂದು ಆದೇಶ ಹೊರಡಿಸಿ ಎಲ್ಲ ದೇವಸ್ಥಾನಗಳ ಮುಂದೆ ಅಲ್ಲಿಗೆ ಭೇಟಿ ನೀಡುವ ಭಕ್ತರ ಹೊಟ್ಟೆಯಲ್ಲಿ ಏನಿದೆ ಎಂದು ಪರೀಕ್ಷೆ ಮಾಡಲು ಸ್ಕಾನಿಂಗ್ ಮೆಷಿನ್ ಅಳವಡಿಸುವುದನ್ನು ಕಡ್ಡಾಯಗೊಳಿಸ ಬೇಕು.

– ದಿನೇಶ್ ಅಮೀನ್‌ ಮಟ್ಟು

***

ಮಾಂಸಾಹಾರದ ಕುರಿತಾದ ಕೀಳರಿಮೆಯನ್ನು ಮೊದಲು ತೊಡೆದು ಹಾಕಿ. ನಮ್ಮ ಬದುಕು ,ನಮ್ಮ ಊಟ, ನಮ್ಮ ಆಚರಣೆ- ಇದೊಂದು ‘ಪುಷ್ಕಳ’ ಕಂ ಸಮೃದ್ಧ ದ್ರಾವಿಡ ಸಂಸ್ಕೃತಿ. ಮಾಂಸದೂಟದ ಜತೆಗಿನ ಸುಂದರ ನೆನಪುಗಳನ್ನು ಚಿತ್ರ ಬರೆಹಗಳ ಮೂಲಕ ಆದಷ್ಟೂ ದಾಖಲಿಸಿ. ಇಲ್ಲಿ ಯಾವ ಸಂಪಾದಕನೂ ಇಲ್ಲ. ನಿಮ್ಮ ಗೋಡೆ ನಿಮ್ಮಿಷ್ಟ. ನಡೀರಿ. ಇದೊಂದು ಆಂದೋಲನವಾಗಲಿ.

– ದಿನೇಶ್ ಕುಕ್ಕುಜಡ್ಕ

*****

****

ದೇವಸ್ಥಾನಕ್ಕೆ ಹೋಗುವ ಮುನ್ನ ಮಾತ್ರೆ ತೆಗೆದುಕೊಂಡೋ, ಇನ್ಯಾವುದೋ ರೀತಿಯಲ್ಲಿಯೋ ಜಠರ, ಕರುಳು ಸಂಪೂರ್ಣ ಖಾಲಿ ಮಾಡಿ, ಸೋಪು ಸರ್ಫು ಹಾಕಿ ತೊಳೆದು ಹೊಟ್ಟೆಯೊಳಗೆ ಏನೂ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ಆಮೇಲೆ ಹೋಗಬೇಕಾಗಿ ವಿನಂತಿ. ಹಾಗೆಯೇ ಹೋದುದು ಕನ್ನಡ ಸುದ್ದಿವಾಹಿನಿಗಳಿಗೆ ಗೊತ್ತಾದರೆ ಕಷ್ಟ.

– ಶ್ರೀನಿವಾಸ ಕಾರ್ಕಳ

****

2016- ದನದ ಮಾಂಸ ತಿಂದ ಎಂದು ಬಡಿದು ಕೊಂದರು ಸೈಯದ್ ಅಕ್ಲಾಕ್‌‌ನನ್ನು. 2022- ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋದರೆಂದು ದಾಳಿ ನಡೆಸಿದರು ಸಿದ್ದರಾಮಯ್ಯ ಮೇಲೆ. ಬಿಜೆಪಿಯ ಈ ಕ್ರೊನಾಲಜಿ ಗಮನಿಸಿ. ನಿನ್ನೆ ಅಕ್ಲಾಕ್, ಇವತ್ತು ಸಿದ್ದರಾಮಯ್ಯ, ನಾಳೆ ನೀವು, ನೀವು. #ನಮ್ಮ_ಆಹಾರ_ನಮ್ಮ_ಹಕ್ಕು #ಕ್ರೊನಾಲಜಿ_ಸಂಝೇ #bjp_is_sick #my_food_my_right

-ಶಶಿ ಸಂಪಳ್ಳಿ

***

ಏಯ್, ನೀ ಯಾವನಯ್ಯಾ ಕೇಳಾಕೆ? ಆಹಾರ ಅವರವರ ಹಕ್ಕು. ಬಾಡು ನಮ್ಮ ಗಾಡು. ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂದು ಕೇಳೋಕೆ ನೀನು ಯಾವನಯ್ಯ.

– ಹನುಮೇಶ್‌ ಗುಂಡೂರು

***

ಮಾಂಸ ತಿನ್ನುವವರು
ಇವಿಎಂನಲ್ಲಿ
ಕಮಲದ ಮೇಲೆ
ಬೆರಳಿಡಬೇಡಿ,
ಮಡಿ ಕೆಟ್ಟು ಮೈಲಿಗೆಯಾದೀತು.

– ಡಾ.ಶ್ರೀನಿವಾಸ ಕಕ್ಕಿಲ್ಲಾಯ

***

ಮಾಂಸಾಹಾರ ತಿಂದವರು ದೇವಸ್ಥಾನಕ್ಕೆ ಬರಬಾರದೆಂದು ಯಾವ ದೇವರು ಬಂದು ಹೇಳಿದ್ದು ಅಂತ ಯಾರಾದರೂ ದಾಖಲೆ ಸಮೇತ ಹೇಳಿದರೆ ಒಳ್ಳೆಯದು. ಯಾಕಂದ್ರೆ ನಮ್ಮ ಮಾರಮ್ಮನಿಗೆ ನಾವು ಕುರಿ‌ ಕಡಿದೇ ಹಬ್ಬ ಮಾಡೋದು.‌ ಹಾಗಾದ್ರೆ ಮಾರಮ್ಮ ದೇವರಲ್ಲವೇ?

– ದೇಶಾದ್ರಿ ಹೊಸಮನೆ

***

ನಾನು ಮಾಂಸಹಾರಿ. ಮಾಂಸ ತಿನ್ನುತ್ತೇನೆ. ಇದು ನನ್ನ ಆಹಾರದ ಆಯ್ಕೆ ಮತ್ತು ಹಕ್ಕು.
ನೀನ್ಯಾವನಯ್ಯ ಕೇಳುವುದಕ್ಕೆ. #isupportsiddaramaiah

– ಶ್ರೀಪಾದ ಭಟ್‌

***

#ಬಾಡೇ_ನಮ್_ಗಾಡು

ಸುಮ್ನೆ ಮಾತಾಡೋದೇನು ಅಂತ ಬರುವಾಗ ಕೆ.ಎಂ.ದೊಡ್ಡೀಲಿ ಎರಡೂವರೆ ಕೆ.ಜಿ. ಹಂದಿ ಬಾಡು ತಂದು ಮೆಣಸುಪ್ಪಿನ ಕರಿ ಮಾಡಿ ಹೊಟ್ಟೆ ತುಂಬಾ ತಿಂದೊ. ನಾಳೆಗೂ ಇದೆ. ತಿಂಡಿಗೇ ಬನ್ನಿ.

– ಕೃಷ್ಣೇಗೌಡ ಟಿ.ಲಿಂಗಯ್ಯ

***

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಬಾಡು ಹಾಕು
ಐದು ಆರು
ಕೋಳಿ ಸಾರು
ಏಳು ಎಂಟು
ಮೀನು ಉಂಟು
ಒಂಬತ್ತು ಹತ್ತು
ಬಲು ರುಚಿ ಇತ್ತು
ಒಂದರಿಂದ ಹತ್ತು ಹೀಗಿತ್ತು
ಬಾಡಿನ ಗತ್ತು ಮುಗಿದಿತ್ತು.
( ಮೂಲ ಕವಿಗಳ ಕ್ಷಮೆ ಕೋರಿ)

– ಪುರುಷೋತ್ತಮ ಬಿಳಿಮಲೆ

****

***

***

ಹೀಗೆ ಸೋಷಿಯಲ್ ಮೀಡಿಯಾಗಳ ತುಂಬಾ ಬಾಡಿನ ಘಮಲು ಹೆಚ್ಚಾಗಿದೆ. ಮಾಂಸ ತಿನ್ನುವವರನ್ನು ಹಂಗಿಸುವ ಬಿಜೆಪಿಯವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...