HomeಮುಖಪುಟSC, ST, OBCಗಳ ಮೀಸಲಾತಿ ದುರ್ಬಲಗೊಳಿಸುವುದು ಬಿಜೆಪಿ-RSS ಕಾರ್ಯಸೂಚಿ: ಪ್ರಕಾಶ್ ಅಂಬೇಡ್ಕರ್‌

SC, ST, OBCಗಳ ಮೀಸಲಾತಿ ದುರ್ಬಲಗೊಳಿಸುವುದು ಬಿಜೆಪಿ-RSS ಕಾರ್ಯಸೂಚಿ: ಪ್ರಕಾಶ್ ಅಂಬೇಡ್ಕರ್‌

- Advertisement -
- Advertisement -

ಸಾರ್ವಜನಿಕ ವಲಯದ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ SC, ST ಮತ್ತು OBCಗಳ ಮೀಸಲಾತಿಯನ್ನು ದುರ್ಬಲಗೊಳಿಸುವುದು ಮತ್ತು ಕೊನೆಗೊಳಿಸುವುದು ಬಿಜೆಪಿ-ಆರ್‌ಎಸ್‌ಎಸ್‌ನ ಕಾರ್ಯಸೂಚಿಯಾಗಿದೆ ಎಂದು ಪ್ರಕಾಶ್ ಅಂಬೇಡ್ಕರ್‌ ಅವರು ಆರೋಪಿಸಿದ್ದಾರೆ.

ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಮಹಾರಾಷ್ಟ್ರ ಸರ್ಕಾರವು, ಸರ್ಕಾರಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಸಿಬ್ಬಂದಿಯನ್ನು ನೇಮಿಸಲು  9 ಖಾಸಗಿ ಏಜೆನ್ಸಿಗಳನ್ನು ನೋಂದಾಯಿಸಲು ನಿರ್ಧರಿಸಿದ್ದು, ಸರ್ಕಾರಿ ವಲಯದಲ್ಲಿ SCಗಳು, STಗಳು ಮತ್ತು OBCಗಳಿಗೆ ಮೀಸಲಾತಿಗಳನ್ನು ಕೊನೆಗೊಳಿಸುವ ಹಲವು  ತಂತ್ರಗಳಲ್ಲಿ ಇದು ಒಂದಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ-ಆರ್‌ಎಸ್‌ಎಸ್‌ನ ಮೀಸಲಾತಿ ವಿರೋಧಿ ಸಂಘವು ಭಾರತದ ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳು ಶಿಕ್ಷಣ ಪಡೆಯುವುದು, ಸಾಮಾಜಿಕ ಆರ್ಥಿಕ ಉನ್ನತಿ ಸಾಧಿಸುವುದು ಮತ್ತು ಸವರ್ಣಿಯರಿಗೆ ಹೆಗಲಿಗೆ ಹೆಗಲು ಕೊಟ್ಟು ಬೆಳೆಯುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ನಾನು ಪುನರಾವರ್ತಿಸುತ್ತೇನೆ, ಈ ನೀತಿಯು ಶುದ್ಧ ರೂಪದಲ್ಲಿ ಜಾತಿವಾದವಾಗಿದೆ ಮತ್ತು ಮೀಸಲಾತಿಗಳನ್ನು ದುರ್ಬಲಗೊಳಿಸುವ ಮತ್ತು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಾಶ್‌ ಅಂಬೇಡ್ಕರ್‌ ಅವರು ಹೇಳಿದ್ದಾರೆ.

ಇದನ್ನು ಓದಿ: ಅಣ್ಣಾಮಲೈ ವಿರುದ್ಧ ಆಕ್ರೋಶ: ಬಿಜೆಪಿ ಜೊತೆಗಿನ ಮೈತ್ರಿ ಮುರಿದ ಎಐಎಡಿಎಂಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ: ಇಂದು ಭಾರತದಲ್ಲಿ ಶೋಕಾಚರಣೆ

0
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿಗೆ ಗೌರವಾರ್ಥವಾಗಿ ಮಂಗಳವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ಭಾರತದಾದ್ಯಂತ ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ...