Homeಮುಖಪುಟಜೈಪುರ: ಸರಕಾರಿ ಶಾಲಾ ಶಿಕ್ಷಕನಿಗೆ ಥಳಿತ

ಜೈಪುರ: ಸರಕಾರಿ ಶಾಲಾ ಶಿಕ್ಷಕನಿಗೆ ಥಳಿತ

- Advertisement -
- Advertisement -

ಜೈಪುರದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನಿಗೆ ಅಪ್ರಾಪ್ತ ಬಾಲಕಿಯ ಕುಟುಂಬಸ್ಥರು ಥಳಿಸಿ ಆತನ ತಲೆ ಮತ್ತು ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದೆ.

ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 16 ವರ್ಷದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪಿ ಶಿಕ್ಷಕ ರಾಜೇಶ್ ವಿರುದ್ಧ ವಿದ್ಯಾರ್ಥಿನಿಯ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ. ತನಗೆ ಥಳಿಸಿರುವ ಬಾಲಕಿಯ ಮನೆಯವರ ವಿರುದ್ಧ ರಾಜೇಶ್ ಕೂಡ ಎಫ್‌ಐಆರ್ ದಾಖಲಿಸಿದ್ದಾರೆ.

ಕಾರನ್‌ಪುರ ವೃತ್ತಾಧಿಕಾರಿ ಸುಧಾ ಪಲಾವತ್‌ ಈ ಕುರಿತು ಮಾತನಾಡಿದ್ದು, ಕಿರುಕುಳದ ವಿಷಯ ತಿಳಿದ ವಿದ್ಯಾರ್ಥಿಯ ಕುಟುಂಬಸ್ಥರು ಶಾಲೆಗೆ ತೆರಳಿ ಆರೋಪಿಗೆ ಥಳಿಸಿದ್ದಾರೆ ಮತ್ತು ಆರೋಪಿತ ಶಿಕ್ಷಕನ  ತಲೆ ಮತ್ತು ಮುಖಕ್ಕೆ ಬಣ್ಣವನ್ನು ಎರಚಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರಿ ಶಿಕ್ಷಕನ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿದ್ದು, ಶಿಕ್ಷಕ ಕೂಡ ಎಫ್‌ಐಅರ್‌ ದಾಖಲಿಸಿದ್ದಾರೆ. ಈ ಕುರಿತು  ತನಿಖೆ ಮಾಡಲಾಗುತ್ತಿದೆ ಆದರೆ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ: ಸೌಜನ್ಯಳಿಗಾದ ಗತಿಯೇ ನಿನ್ನ ಮಗಳಿಗೂ ಆಗುತ್ತೆ’- ವ್ಯಕ್ತಿಯೋರ್ವರಿಗೆ ಮಹೇಶ್ ವಿಕ್ರಮ್ ಹೆಗಡೆ ಬೆದರಿಕೆ: FIR ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಮಾರಾಟವಾಗಲು ನಿರಾಕರಿಸಿದ್ದಕ್ಕೆ ಜೈಲಿನಲ್ಲಿ ಹೊಡೆದು, ಚಿತ್ರಹಿಂಸೆ ನೀಡಿದ್ದರು: ಟಿಎಂಸಿ ನಾಯಕ ಸಾಕೇತ್ ಗೋಖಲೆ

0
ಬಿಜೆಪಿಗೆ ಸೇರಲು ಅಥವಾ ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು ಚಿತ್ರಹಿಂಸೆ ನೀಡಲಾಗಿತ್ತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ. ದಿ ವೈರ್‌ ಪ್ರಕಟಿಸಿದ ಹಿರಿಯ ವಕೀಲ ಕಪಿಲ್ ಸಿಬಲ್...