Homeಮುಖಪುಟ‘ಹಲೋ’ ಪಾಶ್ಚಿಮಾತ್ಯ; ಮೊಬೈಲ್ ಸಂಭಾಷಣೆ ವೇಳೆ ‘ವಂದೇ ಮಾತರಂ’ ಬಳಸಿ!: ಮಹಾರಾಷ್ಟ್ರ ಸರ್ಕಾರ

‘ಹಲೋ’ ಪಾಶ್ಚಿಮಾತ್ಯ; ಮೊಬೈಲ್ ಸಂಭಾಷಣೆ ವೇಳೆ ‘ವಂದೇ ಮಾತರಂ’ ಬಳಸಿ!: ಮಹಾರಾಷ್ಟ್ರ ಸರ್ಕಾರ

- Advertisement -
- Advertisement -

ರಾಜ್ಯ ಸರ್ಕಾರದ ಸಂಸ್ಥೆಗಳು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿನ ಎಲ್ಲಾ ಉದ್ಯೋಗಿಗಳು ಫೋನ್ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಹೇಳುವುದನ್ನು ಮಹಾರಾಷ್ಟ್ರ ಸರ್ಕಾರ ಶನಿವಾರ ಕಡ್ಡಾಯಗೊಳಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

‘ಹಲೋ’ ಎಂಬುವುದು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಾಗಿದ್ದು, ಇದು ಯಾವುದೇ ಭಾವನೆಯನ್ನು ಉಂಟುಮಾಡುವುದಿಲ್ಲ ಎಂದು ಬಿಜೆಪಿ ಸರ್ಕಾರ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಆದೇಶದಲ್ಲಿ ಅಧಿಕಾರಿಗಳು ತಮ್ಮ ಕಚೇರಿಗಳಿಗೆ ಭೇಟಿ ನೀಡುವವರಲ್ಲಿ ‘ವಂದೇ ಮಾತರಂ’ ಅನ್ನು ಶುಭಾಶಯವಾಗಿ ಬಳಸಲು ಜಾಗೃತಿ ಮೂಡಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆಯಿಂದ ಆಯುಧ ತರಬೇತಿ ಆರೋಪ: ಟ್ವಿಟರ್‌ನಲ್ಲಿ ಕನ್ನಡಿಗರ ಆಕ್ಷೇಪ

‘ಹಲೋ’ ನಂತಹ ಅರ್ಥಹೀನ ಶುಭಾಶಯವನ್ನು ‘ವಂದೇ ಮಾತರಂ’ ಎಂದು ಬದಲಿಸುವುದು ರಾಷ್ಟ್ರೀಯ ಹೆಮ್ಮೆ ವಿಷಯವಗಿದೆ ಎಂದು ಆದೇಶವು ಹೇಳಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

“ಫೋನ್ ಮತ್ತು ವೈಯಕ್ತಿಕವಾಗಿ ಸಂಭಾಷಣೆಗಳು ‘ವಂದೇ ಮಾತರಂ’ ನೊಂದಿಗೆ ಪ್ರಾರಂಭವಾದರೆ, ಅದು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ” ಎಂದು ಆದೇಶವು ಉಲ್ಲೇಖಿಸಿದೆ

ಈ ಆದೇಶವು ಅಕ್ಟೋಬರ್ 2 ರಿಂದ ಸರ್ಕಾರಿ, ಅರೆ ಸರ್ಕಾರಿ, ಸ್ಥಳೀಯ ನಾಗರಿಕ ಸಂಸ್ಥೆಗಳು, ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಇತರ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ಪತ್ರಿಕೆ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಹಿಂದುತ್ವದ ಘೋಷಣೆ – ಕಾರ್ಯಕ್ರಮ ಮೊಟಕುಗೊಳಿಸಿದ ಜಿಲ್ಲಾಧಿಕಾರಿ

ಈ ನಿರ್ದೇಶನವನ್ನು ಮೊದಲ ಬಾರಿಗೆ ಆಗಸ್ಟ್‌ನಲ್ಲಿ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಅವರು ಪ್ರಸ್ತಾಪಿಸಿದ್ದರು. “ಹಲೋ ಎಂಬುದು ಇಂಗ್ಲಿಷ್ ಪದ ಮತ್ತು ಅದನ್ನು ತ್ಯಜಿಸುವುದು ಮುಖ್ಯ. ಆದರೆ ‘ವಂದೇ ಮಾತರಂ’ ಕೇವಲ ಪದವಲ್ಲ, ಪ್ರತಿಯೊಬ್ಬ ಭಾರತೀಯನ ಭಾವನೆ” ಎಂದು ಮುಂಗಂಟಿವಾರ್ ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...