Homeಕರ್ನಾಟಕಸರ್ಕಾರಿ ಕಾರ್ಯಕ್ರಮದಲ್ಲಿ ಹಿಂದುತ್ವದ ಘೋಷಣೆ - ಕಾರ್ಯಕ್ರಮ ಮೊಟಕುಗೊಳಿಸಿದ ಜಿಲ್ಲಾಧಿಕಾರಿ

ಸರ್ಕಾರಿ ಕಾರ್ಯಕ್ರಮದಲ್ಲಿ ಹಿಂದುತ್ವದ ಘೋಷಣೆ – ಕಾರ್ಯಕ್ರಮ ಮೊಟಕುಗೊಳಿಸಿದ ಜಿಲ್ಲಾಧಿಕಾರಿ

- Advertisement -
- Advertisement -

ವಿಜಯ ನಗರ ಜಿಲ್ಲಾ ಉದ್ಘಾಟನೆಯ ಸಮಾರೋಪ ಸಮಾರಂಭದಲ್ಲಿ, ವೇದಿಕೆಯಲ್ಲಿ ಹಾಡು ಹಾಡುತ್ತಿದ್ದ ಗಾಯಕಿ ಹಿಂದುತ್ವದ ಪರವಾಗಿ ಘೋಷಣೆ ಕೂಗಿದ ಕಾರಣಕ್ಕೆ, ಕಾರ್ಯಕ್ರಮವನ್ನು ಮೊಟಕುಗೊಳಿಸಿರುವ ಘಟನೆ ಭಾನುವಾರ ವಿಜಯನಗರದಲ್ಲಿ ನಡೆದಿದೆ.

ನೂತನ ಜಿಲ್ಲೆ ಉದ್ಘಾಟನೆಯ ಸಮಾರೋಪ ಸಮಾರಂಭವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಪ್ರದರ್ಶನಗಳನ್ನೂ ಏರ್ಪಡಿಸಲಾಗಿತ್ತು. ಆದರೆ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಹಾಡುಗಾರ್ತಿ ಲಕ್ಷ್ಮಿದುಬೆ ಅವರು ಹಿಂದುತ್ವದ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌‌ ಕಾರ್ಯಕ್ರಮವನ್ನು ಮೊಟಕುಗೊಳಿಸಲು ಆದೇಶಿದ್ದಾರೆ.

ಇದನ್ನೂ ಓದಿ: ಯುಪಿ ಸರ್ಕಾರದ ದಬ್ಬಾಳಿಕೆ ತಡೆಯಲು ಜಂಟಿ ವಿರೋಧದ ಅವಶ್ಯಕತೆಯಿದೆ- ಸಂಜಯ್ ರಾವತ್

ಲಕ್ಷ್ಮಿ ದುಬೆ ಅವರನ್ನು ಭಕ್ತಿಗೀತೆ ಹಾಡಿಸುವುದಾಗಿ ಗೊತ್ತು ಮಾಡಲಾಗಿತ್ತು. ಆದರೆ ಅವರು ವೇದಿಕೆಗೆ ಬರುವ ಮೊದಲೆ ಅವರದೇ ಕಲಾವಿದನೊಬ್ಬ ಲಕ್ಷ್ಮಿ ದುಬೆ ಮತ್ತು ಹಿಂದುತ್ವದ ಬಗ್ಗೆ ಹೊಗಳುವುದು ಸೇರಿದಂತೆ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದನು. (ವಿಡಿಯೊ ನೋಡಿ)

ನಂತರ ವೇದಿಕೆಗೆ ಆಗಮಿಸಿದ ಲಕ್ಷ್ಮಿ ದುಬೆ ಅವರು, ಅವಕಾಶ ನೀಡಿದ ಆನಂದ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹಾಡುವುದಕ್ಕೆ ಮುಂಚೆಯೆ, ಅವರು ಕೂಡಾ ಹಿಂದುತ್ವದ ಗುಣಗಾಣ ಮಾಡುವುದಾಗಿ ಹೇಳಿದ್ದಾರೆ.

ಇದಾದ ನಂತರ ಹಾಡುವುದಕ್ಕೆ ಶುರುಮಾಡಿದ ಲಕ್ಷ್ಮಿ ಅವರು, ಹಾಡಿನ ಮಧ್ಯೆ, ‘‘ಶ್ರೀರಾಮನ ದರ್ಶನ ಪಡೆಯಲು ಸ್ವಲ್ಪ ಹೊತ್ತಾಗುತ್ತದೆ. ಭಗವಾಧ್ವಜದ ಬಲದ ಎದುರು ಬ್ರಹ್ಮಾಂಡವೆ ತಲೆಬಾಗಿಸುತ್ತದೆ. ಹೀಗಾಗಿಯೆ ನನ್ನ ಭಗವಾಧ್ವಜ ಎತ್ತರದಲ್ಲಿ ಹಾರಾಡುತ್ತಾ ಇರುತ್ತದೆ. ಕಣಕಣದಲ್ಲೂ ಶ್ರೀರಾಮ್‌ ಎಂದು ಬರೆಯುತ್ತೇವೆ. ಇಲ್ಲಿ ನನ್ನ ಅಣ್ಣ ಆನಂದ್ ಸಿಂಗ್‌ ಕೂತಿದ್ದಾರೆ” ಎಂದೆಲ್ಲಾ ಹೇಳಿದ್ದಾರೆ. (ವಿಡಿಯೊ ನೋಡಿ)

ಇದನ್ನೂ ಓದಿ: ಲಖಿಂಪುರ್‌ ಖೇರಿ ಹತ್ಯಾಕಾಂಡ: ಮರಣೋತ್ತರ ಪರೀಕ್ಷೆ ವರದಿ ಬರುವವರೆಗೂ ಅಂತ್ಯಸಂಸ್ಕಾರಕ್ಕೆ ಒಪ್ಪದ ಕುಟುಂಬ

ನಂತರ ಮತ್ತೆ ಹಾಡಲು ಶುರು ಮಾಡಿದ ಲಕ್ಷ್ಮಿ ಹಾಡಿನ ಮಧ್ಯೆ, “ಗೋ ಹತ್ಯೆಯನ್ನು ನಿಲ್ಲಿಸಿ, ಇದು ಪ್ರತಿ ಹಿಂದೂಗಳ ಮಾತಾಗಿದೆ. ಹಿಂದೂಸ್ಥಾನದಲ್ಲಿ ಇರಬೇಕೆಂದರೆ ವಂದೇ ಮಾತರಂ ಹೇಳಬೇಕು” ಎಂದು ಹೇಳಿದ್ದಲ್ಲದೆ, ಬಹಳ ದೇಶದ್ರೋಹಿಗಳು ಭಾರತದಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಇದರ ನಂತರ ಹಾಡು ಮುಗಿಸಿದ ಅವರು, “ಕರ್ನಾಟಕದಲ್ಲಿ ಮೊದಲ ಬಾರಿಗೆ ಹಿಂದುತ್ವದ ದೀಪ ಬೆಳಗಿಸಲು ನನ್ನ ಅಣ್ಣ ಆನಂದ್‌ ಸಿಂಗ್‌ ನನಗೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

“ಶ್ರೀರಾಮನ ಮಂದಿರ ನಿರ್ಮಾಣದ ಬಗ್ಗೆ ಜನ ಹಲವು ವರ್ಷಗಳಿಂದ ಕನಸು ಕಾಣುತ್ತಿದ್ದರು. ಅದನ್ನು ಪ್ರಧಾನಿ ಮೋದಿಯವರು ಸಾಧ್ಯವಾಗಿಸಿದ್ದಾರೆ. ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಿದ್ದಾರೆ… ಮೋದಿಯವರಿಗೆ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರ ಮಾಡುವೆ. ಭಾರತದಲ್ಲಿ ಇರುವ ಶತ್ರುಗಳನ್ನು ಒದ್ದೋಡಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ. ಇದಕ್ಕೆ ಕಾರ್ಯಕ್ರಮದ ಸಂಘಟಕರು ಆಕ್ಷೇಪ ವ್ಯಕ್ತಪಡಿಸಿ, ಪದ ಬಳಕೆ ಮಾಡಬಾರದು ಎಂದು ಸೂಚಿಸಿದ್ದಾರೆ.

ಅದಾಗ್ಯೂ, ಇಷ್ಟಕ್ಕೆ ನಿಲ್ಲದ ಲಕ್ಷ್ಮಿ ಅವರು, ಮತ್ತೆ ಎರಡು ಲೈನ್ ಭಜನೆ ಹಾಡುವುದಾಗಿ ಅನುಮತಿ ಕೇಳಿದ್ದಾರೆ. ಈ ಸಮಯದಲ್ಲೂ ಲಕ್ಷ್ಮಿ ಅವರು, “ಎಲ್ಲೆಡೆ ಗೋ ಹತ್ಯೆ ನಿಲ್ಲಿಸುತ್ತೇವೆ, ಅದು ನಮ್ಮ ಸಂಕಿಲ್ಪ. ಅದು ಭಾರತದ ಫೋಷಣೆಯೂ ಹೌದು. ಭಾರತದ ಅಭಿಮಾನ ಹಿಂದೂ” ಎಂದು ಹಾಡಿದ್ದಾರೆ. (ವಿಡಿಯೊ ನೋಡಿ)

ಇದನ್ನೂ ಓದಿ: ನರೇಂದ್ರ ಮೋದಿಯವರೆ ಈ ವಿಡಿಯೋ ನೋಡಿದ್ದೀರಾ? ಪ್ರಿಯಾಂಕ ಗಾಂಧಿ ಆಕ್ರೋಶ

ಈ ವೇಳೆ ಬಹಳ ಸಿಟ್ಟಾದ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಅವರು ಅವರ ಕಾರ್ಯಕ್ರಮ ಮೊಟಕುಗೊಳಿಸಲು ಆದೇಶ ನೀಡಿದ್ದಾರೆ. ಜೊತೆಗೆ ಮುಖ್ಯವೇದಿಕೆಯ ವಿದ್ಯುತ್‌ ದೀಪ ಆರಿಸಲಾಗಿದೆ. ಬಳಿಕ ಲಕ್ಷ್ಮಿದುಬೆ ಮತ್ತು ಅವರ ತಂಡದವರು ವೇದಿಕೆಯಿಂದ ನಿರ್ಗಮಿಸಿದರು ಎಂದು ವರದಿಯಾಗಿದೆ. ಇದರ ನಂತರ ಕಾರ್ಯಕ್ರಮ ಮುಗಿದಿದೆ ಎಂದು ಸಂಘಟಕರು ಘೋಷಿಸಿದ್ದಾರೆ.

“ಲಕ್ಷ್ಮಿ ದುಬೆ ಅವರು ಭಕ್ತಿ ಗೀತೆ ಹಾಡುವುದಾಗಿ ಹೇಳಿದ್ದರು. ಆದರೆ ವೇದಿಕೆಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಈ ಬಗ್ಗೆ ಅವರನ್ನು ವಿವರಣೆ ಕೇಳಲಾಗಿದೆ” ಎಂದು ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಅನಿರುದ್ದ್ ಪಿ. ಶ್ರವಣ್ ಹೇಳಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಉಂಟಾಗಿದ್ದು ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಘೋಷಣೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ವೈರುಧ್ಯಗಳ ನಡುವೆ ’ಪರ್ಯಾಯವಾಗಲು ಹೆಣಗುತ್ತಿರುವ’ ಕಾಂಗ್ರೆಸ್; ’ಪ್ರಾದೇಶಿಕ ಪಕ್ಷವಾಗದ’ ಜೆಡಿಎಸ್

ಇದನ್ನೂ ಓದಿ: ಬೆಳಗಾವಿ ಮುಸ್ಲಿಂ ಯುವಕನ ಬರ್ಬರ ಕೊಲೆ: 7 ಹಿಂದುತ್ವ ಕಾರ್ಯಕರ್ತರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...