Homeಮುಖಪುಟ2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವ್ಯಯಿಸಿದ್ದು ಬರೋಬ್ಬರಿ 1,264 ಕೋಟಿ ರೂ.

2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವ್ಯಯಿಸಿದ್ದು ಬರೋಬ್ಬರಿ 1,264 ಕೋಟಿ ರೂ.

ಚುನಾವಣಾ ಖರ್ಚಿಗೆ ಇನ್ನೂ 3562 ಕೋಟಿ ರೂ. ಬಿಜೆಪಿ ಬಳಿ ಉಳಿತಾಯವಿದೆ.

- Advertisement -
- Advertisement -

ಬಿಜೆಪಿ ತನ್ನ 2019 ರ ಲೋಕಸಭಾ ಚುನಾವಣಾ ಪ್ರಚಾರಕ್ಕೆ 1,264 ಕೋಟಿ ರೂ. ಹಣಕಾಸು ಒದಗಿಸಿದೆ ಎಂದು ಬಿಜೆಪಿಯ ಪ್ರಧಾನ ಕಚೇರಿ ಸಲ್ಲಿಸಿದ ಅಫಿಡವಿಟ್ ಆಧಾರದ ಮೇಲೆ ಚುನಾವಣಾ ಆಯೋಗವು ಮಾಹಿತಿಯನ್ನು ಬಹಿರಂಗಪಡಿಸಿದೆ.

ಬ್ಯಾಂಕುಗಳಲ್ಲಿ 3,515 ಕೋಟಿ ರೂ. ಹಾಗೂ ಕೈಯ್ಯಲ್ಲಿರುವ 46 ಕೋಟಿ ರೂ. ಸೇರಿ ಚುನಾವಣಾ ಖರ್ಚಿಗೆ ಇನ್ನೂ 3562 ಕೋಟಿ ರೂ. ಬಿಜೆಪಿ ಬಳಿ ಉಳಿತಾಯವಿದೆ.

2019 ರಲ್ಲಿ ಒಟ್ಟು 1,078 ಕೋಟಿ ರೂ. ಪ್ರಚಾರ ಅಭಿಯಾನಕ್ಕೆ ಖರ್ಚು  ಮಾಡಿದೆ, ಅದರಲ್ಲಿ 657 ಕೋಟಿ ರೂ.ಗಳನ್ನು ಅದರ ರಾಜ್ಯ ಘಟಕಗಳಾದ್ಯಂತ ವಿತರಣೆ ಮಾಡಲಾಗಿದೆ ಮತ್ತು ಪಕ್ಷದ ಚಟುವಟಿಕೆಗಳಿಗಾಗಿ 186 ಕೋಟಿ ರೂ. ಖರ್ಚು ಮಾಡಲಾಗಿದೆ. ಸಮೀಕ್ಷೆಗಳು, ಕಾಲ್ ಸೆಂಟರ್ ಮತ್ತು ಚುನಾವಣಾ ಮೇಲ್ವಿಚಾರಣೆಗೆ 212 ಕೋಟಿ ರೂ. ವ್ಯಯಿಸಲಾಗಿದೆ.

ಗುಜರಾತ್‌ನಲ್ಲಿ ಪ್ರಚಾರಕ್ಕಾಗಿ 100.33 ಕೋಟಿ ರೂ. ಖರ್ಚು ಮಾಡಲಾಗಿದ್ದು, ಇದು ಪ್ರಚಾರಕ್ಕಾಗಿ ಮಾಡಿದ ಹಣದ ಮೊತ್ತದಲ್ಲಿ ಅತಿದೊಡ್ಡ ಭಾಗವಾಗಿದೆ.

ಕೇವಲ ಪ್ರಚಾರಕ್ಕೆ, 65 ಕೋಟಿ ರೂ. 42 ಸಂಸದೀಯ ಸ್ಥಾನಗಳಿರುವ ಪಶ್ಚಿಮ ಬಂಗಾಳಕ್ಕೆ, 35 ಕೋಟಿ ರೂ. 80 ಸಂಸದೀಯ ಸ್ಥಾನಗಳಿರುವ ಉತ್ತರ ಪ್ರದೇಶಕ್ಕೆ ಖರ್ಚು ಮಾಡಲಾಗಿದೆ. ವಿಶೇಷವೆಂದರೆ ಕೇರಳಕ್ಕೆ 24.53 ಕೋಟಿ ರೂ. ಖರ್ಚು ಮಾಡಲಾಗಿದೆ.

ಮಧ್ಯಪ್ರದೇಶದಿಂದ ಹುಟ್ಟಿಕೊಂಡ ಕೋರ್ ಮಾಧ್ಯಮ ಮತ್ತು ಜಾಹೀರಾತು ಪ್ರಚಾರಕ್ಕಾಗಿ 325 ಕೋಟಿ ರೂ. ಖರ್ಚು ಮಾಡಲಾಗಿದೆ.

ವಿಶೇಷವಾಗಿ ಬಾಡಿಗೆ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗಾಗಿ 175 ಕೋಟಿ ರೂ. ವ್ಯಯಿಸಲಾಗಿದ್ದು, ಧ್ವಜ, ಕ್ಯಾಪ್, ಬ್ಯಾಡ್ಜ್‌ ಇತ್ಯಾದಿಗಳಿಗೆ 25 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

ಸರಣಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು 15 ರೂ. ಕೋಟಿಯನ್ನು ಬಿಜೆಪಿ ವ್ಯಯಿಸಿದೆ.


ಓದಿ: ತಮಿಳುನಾಡಿನಲ್ಲಿ ಮಿತ್ರಪಕ್ಷಗಳಾದ AIADMK ಮತ್ತು BJP ಟ್ವೀಟ್ ಸಮರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...