Homeಮುಖಪುಟವಿನಾಯಕ ಚತುರ್ಥಿ: ತಮಿಳುನಾಡಿನಲ್ಲಿ ಮಿತ್ರಪಕ್ಷಗಳಾದ AIADMK ಮತ್ತು BJP ಟ್ವೀಟ್ ಸಮರ

ವಿನಾಯಕ ಚತುರ್ಥಿ: ತಮಿಳುನಾಡಿನಲ್ಲಿ ಮಿತ್ರಪಕ್ಷಗಳಾದ AIADMK ಮತ್ತು BJP ಟ್ವೀಟ್ ಸಮರ

ಬಿಜೆಪಿ ಪಕ್ಷದ ರಾಜ್ಯ ಕನ್ವೀನರ್ ಐಟಿ ಮತ್ತು ಸಾಮಾಜಿಕ ಜಾಲತಾಣದ ಸಿ.ಟಿ. ನಿರ್ಮಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಎಐಎಡಿಎಂಕೆ ನಾಯಕರು 30 ವರ್ಷಗಳ ಕಾಲ ‘ಸೀರೆಯ’ ಹಿಂದೆ ಅಡಗಿಕೊಂಡಿದ್ದಾರೆ ಎಂದು ಹೇಳಿ, ದಿವಂಗತ ಜೆ. ಜಯಲಲಿತಾ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

- Advertisement -
- Advertisement -

ಆಗಸ್ಟ್ 14 ರಂದು ತಮಿಳುನಾಡು ಸರ್ಕಾರವು ಕೊರೊನಾ ಹಿನ್ನಲೆಯಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡುವ ಸಾರ್ವಜನಿಕ ಆಚರಣೆಗಳು, ಮೆರವಣಿಗೆಗಳನ್ನು ನಿಷೇಧಿಸಿದೆ. ಇದು ಸಾಂಸ್ಕೃತಿಕ ಹಬ್ಬವಾಗಿರುವುದರಿಂದ ನಿಯಮಗಳನ್ನು ಸಡಿಲಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ.

ಮೇ 2021 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ತನಕ ತಮಿಳುನಾಡಿನ ಎಐಎಡಿಎಂಕೆ ಜೊತೆ ಸೌಹಾರ್ದಯುತ ಸಂಬಂಧವನ್ನು ಹೊಂದಲು ಬಿಜೆಪಿ ಬಯಸುತ್ತಿದೆ, ಆದರೆ ಗಣೇಶ ಚತುರ್ಥಿಗೆ ಸಂಬಂಧಿಸಿದಂತೆ ಆಡಳಿತರೂಢ AIADMK ಮತ್ತು BJP ನಡುವೆ ಟ್ವಿಟ್ಟರ್‌‌ನಲ್ಲಿ ಯುದ್ದ ನಡೆಯುತ್ತಿದೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ಕೇಂದ್ರವು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಈ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ (ಆಗಸ್ಟ್ 20) ತನ್ನ ಸ್ಪಷ್ಟನೆಯಲ್ಲಿ ಹೇಳಿದೆ. ಅಲ್ಲದೆ ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಮದ್ರಾಸ್ ಹೈಕೋರ್ಟ್ ಸಾರ್ವಜನಿಕರಿಗೆ ನಿರ್ದೇಶನ ನೀಡಿದೆ.

AIADMK ಲಾಂಛನ (PC: Money Control)

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್.ರಾಜಾ, ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಿರುವ ಕರ್ನಾಟಕದ ರಾಜ್ಯ ಸರ್ಕಾರವನ್ನು “ಗಂಡು ಸರ್ಕಾರ” ಎಂದು ಟ್ವೀಟ್ ಮಾಡುವ ಮೂಲಕ ತಮಿಳುನಾಡು ಸರ್ಕಾರವನ್ನು ಅಣಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಎಐಎಡಿಎಂಕೆ ಐಟಿ ವಿಭಾಗದ ಕಾರ್ಯದರ್ಶಿಗಳಾದ ರಾಜ್ ಸತ್ಯನ್ ಮತ್ತು ಕೋವಾಯ್ ಸತ್ಯನ್, “ಎಚ್. ರಾಜಾ ಕನಿಷ್ಠ ಸ್ಕೌಟ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತನ್ನ ‘ಪುರುಷತ್ವವನ್ನು’ ಸಾಬೀತುಪಡಿಸಬೇಕು” ಎಂದು ತಿರುಗೇಟು ನೀಡಿದ್ದಾರೆ.

ಎಚ್‌. ರಾಜಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ (ತಮಿಳುನಾಡು) ನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಫರ್ಧಿಸಿ ಕೇವಲ 52 ಮತ ಪಡೆದು ಸೋತಿದ್ದರು.

ಬಿಜೆಪಿ ಪಕ್ಷದ ರಾಜ್ಯ ಕನ್ವೀನರ್ ಐಟಿ ಮತ್ತು ಸಾಮಾಜಿಕ ಜಾಲತಾಣದ ಸಿ.ಟಿ. ನಿರ್ಮಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಎಐಎಡಿಎಂಕೆ ನಾಯಕರು 30 ವರ್ಷಗಳ ಕಾಲ ‘ಸೀರೆಯ’ ಹಿಂದೆ ಅಡಗಿಕೊಂಡಿದ್ದಾರೆ ಎಂದು ಹೇಳಿ, ದಿವಂಗತ ಜೆ. ಜಯಲಲಿತಾ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ಈ ಟ್ವೀಟ್ ಯುದ್ದವು ಇಲ್ಲಿಗೆ ಮುಗಿಯದೆ ಎಐಎಡಿಎಂಕೆ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡಾ ಯುದ್ಧಕ್ಕೆ ಸೇರಿದ್ದು, ಚುನಾವಣೆಯಲ್ಲಿ ’ನೋಟಾ’ವನ್ನು ಸೋಲಿಸಲು ಸಾಧ್ಯವಾಗದ ಒಬ್ಬರ ಕೋಮು ಹಿತಾಸಕ್ತಿಗಳಿಗಾಗಿ ತಮಿಳುನಾಡು ಸರ್ಕಾರ ತನ್ನ ಜನರ ಜೀವನವನ್ನು ಗಿರವಿಗೆ ಇಡುವುದಿಲ್ಲ ಎಂದು ಹೇಳಿದೆ. “ಅವರು ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡಲಿ ಮತ್ತು ಕನಿಷ್ಠ ತಮ್ಮ ಠೇವಣಿಗಳನ್ನು ಉಳಿಸಲಿ. ಈ ರೀತಿಯಾಗಿ ತಮ್ಮ ಪುರುಷತ್ವವನ್ನು ಸಾಬೀತುಪಡಿಸಲಿ” ಎಂದು ಅದು ಹೇಳಿದೆ.

ಈ ಎಲ್ಲ ಕಾದಾಟಗಳ ಮಧ್ಯೆ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್‌ ಸೆಲ್ವಂ ಸೇರಿದಂತೆ ಪಕ್ಷದ ಉನ್ನತ ಮಟ್ಟದ ಮೌನವಾಗಿದ್ದಾರೆ. 2017 ರಲ್ಲಿ ತಮಿಳು ವಾರಪತ್ರಿಕೆ ತುಘ್ಲಕ್ ಸಂಪಾದಕರಾದ ಗುರುಮೂರ್ತಿ ಇದೇ ರೀತಿಯಲ್ಲಿ ಆಪಾದನೆ ಮಾಡಿದಾಗಲೂ ಉನ್ನತ ಮಟ್ಟದ ನಾಯಕರು ಮೌನವಾಗಿದ್ದರು.

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ (PC: New Indian Express.)

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೀನುಗಾರಿಕೆ ಸಚಿವ ಡಿ.ಜಯಕುಮಾರ್, “ಎಐಎಡಿಎಂಕೆ ಸರ್ಕಾರ ಗಂಡಸು ಸರ್ಕಾರ. ಎಚ್. ರಾಜಾ ನಮ್ಮನ್ನು ತಪ್ಪು ದಾರಿಗೆ ತಳ್ಳಬಾರದು.” ಎಂದು ಹೇಳಿದ್ದಾರೆ. ವಿಶೇಷವೆಂದರೆ, 2017 ರಲ್ಲಿ ಪಕ್ಷದ ಉನ್ನತ ನಾಯಕರ ಪರವಾಗಿ ಗುರುಮೂರ್ತಿಯನ್ನು ಡಿ. ಜಯಕುಮಾರ್‌ ಎದುರಿಸಿದ್ದರು.

ಇಷ್ಟೆ ಅಲ್ಲದೆ ಹಿಂದೂ ಮುನ್ನನಿ ಎಂಬ ಬಲಪಂಥೀಯ ಸಂಘಟನೆಯೊಂದು ರಾಜ್ಯದ ಆದೇಶವನ್ನು ಧಿಕ್ಕರಿಸಿ ರಾಜ್ಯದಲ್ಲಿ ಸುಮಾರು 1.5 ಲಕ್ಷ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದಾಗಿ ಹೇಳಿದೆ.

ಆಗಸ್ಟ್ 18 ರಂದು ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯು ಸಾರ್ವಜನಿಕ ಸಂಭ್ರಮಾಚರಣೆಗೆ ಅನುಮತಿ ನಿಡುವಂತೆ ಹಿಂದು ಮುನ್ನನಿ ಕೋರಿತ್ತು. ನ್ಯಾಯಾಲಯವು ಅನುಮತಿಯನ್ನು ನಿರಾಕರಿಸಿದ್ದಲ್ಲದೆ, ಅರ್ಜಿಯನ್ನು ಹಿಂಪಡೆಯದಿದ್ದರೆ ಅರ್ಜಿದಾರರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದೆ.

ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷ ಎಲ್ ಮುರುಗನ್ ಮತ್ತು ಇತರ ಹಿರಿಯ ಮುಖಂಡರು ಮುಖ್ಯಮಂತ್ರಿ ಪಳನಿಸ್ವಾಮಿಯನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕೆಲವು ನಿರ್ಬಂಧಗಳನ್ನು ಸರಾಗಗೊಳಿಸಿವಂತೆ ಕೇಳಿದ್ದರೂ ಅವರು ಒಪ್ಪಿಲ್ಲ.

ಹಿಂದೂ ಮುನ್ನನಿಯ ಹೇಳಿಕೆಯನ್ನು ಬೆಂಬಲಿಸಿದ ಬಿಜೆಪಿಯು “ಸಣ್ಣ ದೇವಾಲಯಗಳಲ್ಲಿ ಸಾರ್ವಜನಿಕ ಪೂಜೆಯನ್ನು ಮತ್ತು ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯವು ಅನುಮತಿ ನೀಡಿದಾಗ, ವಿನಾಯಕ ಚತುರ್ಥಿ ಆಚರಣೆಯನ್ನು ಸಾರ್ವಜನಿಕವಾಗಿ ಸರ್ಕಾರ ಏಕೆ ನಿರಾಕರಿಸುತ್ತಿದೆ. ಕೊರೊನಾ ಪ್ರಕರಣ ಮತ್ತು ಸಾವುಗಳು ಹೆಚ್ಚಿರುವ ಮಹಾರಾಷ್ಟ್ರ ಚತುರ್ಥಿ ರ್‍ಯಾಲಿಗಳಿಗೆ ಅವಕಾಶ ನೀಡಿದಾಗ, ತಮಿಳುನಾಡು ಸರ್ಕಾರವು ನಮಗೆ ಏಕೆ ಅನುಮತಿ ನೀಡಲು ಸಾಧ್ಯವಿಲ್ಲ?” ಎಂದು ಹೇಳಿದೆ.

ಆದರೆ ತಮಿಳುನಾಡು ಸರ್ಕಾರ ತಮ್ಮ ಮನೆಗಳಲ್ಲೇ ವಿನಾಯಕ ಚತುರ್ಥಿಯನ್ನು ಆಚರಿಸುವಂತೆ ರಾಜ್ಯದ ಜನತೆಯಲ್ಲಿ ವಿನಂತಿಸಿದೆ. ಕೇಂದ್ರದ ಸೂಚನೆಯಂತೆ ಧಾರ್ಮಿಕ ಹಬ್ಬಗಳು ಮತ್ತು ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಲಾಗಿದೆ ಎಂದು ಅದು ಪುನರುಚ್ಚರಿಸಿದೆ.


ಓದಿ: ’ಥೂ… ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ’; ಸಚಿವ ಸುಧಾಕರ್‌ಗೆ ಮಹಿಳಾ ವೈದ್ಯೆ ಛೀಮಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...