Homeಮುಖಪುಟಚೀನಾ ಲಿಂಕ್: 44 ಅರೆಹೈಸ್ಪೀಡ್ ವಂದೇ ಭಾರತ್‌ ರೈಲು ಟೆಂಡರ್‌‌ ರದ್ದು

ಚೀನಾ ಲಿಂಕ್: 44 ಅರೆಹೈಸ್ಪೀಡ್ ವಂದೇ ಭಾರತ್‌ ರೈಲು ಟೆಂಡರ್‌‌ ರದ್ದು

- Advertisement -
- Advertisement -

44 ಅರೆಹೈಸ್ಪೀಡ್ ವಂದೇ ಭಾರತ್‌ ರೈಲು ತಯಾರಿಕೆಗೆ ಕರೆದಿದ್ದ ಟೆಂಡರ್‌‌ ರದ್ದುಪಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಿಸಿದೆ. ಇದರ ಹೊಸ ಟೆಂಡರ್‌ ಒಂದು ವಾರದೊಳಗೆ ಕರೆಯುವುದಾಗಿ ಅದು ಹೇಳಿದೆ.

ಹೊಸ ಟೆಂಡರ್‌‌ನಲ್ಲಿ ಕೇಂದ್ರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಸ್ಥಳೀಯ ತಯಾರಕರಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಹಿಂದಿನ ಟೆಂಡರ್‌ನಲ್ಲಿ ಚೀನಾದ ಜಂಟಿ ಸಹಭಾಗಿತ್ವದ ಸಿಆರ್‌ಆರ್‌ಸಿ ಪ್ರವರ್ತಕ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆರು ಕಂಪನಿಗಳ ಪೈಕಿ ಏಕೈಕ ವಿದೇಶಿ ಕಂಪನಿಯಾಗಿತ್ತು.

ಚೀನಾದ ಸಿಆರ್‌ಆರ್‌ಸಿ, ಎಲೆಕ್ಟ್ರಿಕಲ್ ಕಂಪನಿ ಮತ್ತು ಗುರುಗ್ರಾಮದ ಪಯೋನಿಯರ್ ಫಿಲ್-ಮೆಡ್ ಪ್ರೈವೇಟ್ ಲಿಮಿಟೆಡ್ 2015ರಲ್ಲಿ ಸಹಭಾಗಿತ್ವದ ಕಂಪನಿ ರಚಿಸಿಕೊಂಡಿದ್ದವು.

ಪಿಟಿಐ ವರದಿಯಲ್ಲಿ ಟೆಂಡರ್‌ನಲ್ಲಿ ಚೀನಾದ ಜಂಟಿ ಉದ್ಯಮವು ಮುಂಚೂಣಿಯಲ್ಲಿದೆ ಎಂದು ತಿಳಿದುಬಂದ ನಂತರ ಸಚಿವಾಲಯ ಯೋಜನೆಯನ್ನು ರದ್ದುಪಡಿಸಿದೆ ಎಂದು ಹೇಳಿದೆ.


ಓದಿ: ರೈಲ್ವೇ ಖಾಸಗೀಕರಣಕ್ಕೆ ಚಾಲನೆ: ಮುಂದಿನ ಕರಾಳ ದಿನಗಳಿಗೆ ಹಸಿರು ನಿಶಾನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...