Homeಕರ್ನಾಟಕಕರ್ನಾಟಕದಲ್ಲಿ 34 ಜಿಲ್ಲೆ ಮಾಡಿದ ನಳೀನ್‌ಕುಮಾರ್ ಕಟೀಲ್: 36ಕ್ಕೆ ಏರಿಸಿದ ರಾಜ್ಯ ಬಿಜೆಪಿ...

ಕರ್ನಾಟಕದಲ್ಲಿ 34 ಜಿಲ್ಲೆ ಮಾಡಿದ ನಳೀನ್‌ಕುಮಾರ್ ಕಟೀಲ್: 36ಕ್ಕೆ ಏರಿಸಿದ ರಾಜ್ಯ ಬಿಜೆಪಿ…

ಅಸಲಿಗೆ ಪ್ರವಾಹ ಸಂಭವಿಸಿರುವುದು 17 ಜಿಲ್ಲೆಗಳಲ್ಲಿ ಮಾತ್ರ. ಅಷ್ಟು ಜಿಲ್ಲೆಗಳಿಗೆ ಸಮರ್ಪಕ ಪರಿಹಾರ ಕೊಟ್ಟರೆ ಸಾಕು, ಈ 32, 34, 36 ಜಿಲ್ಲೆಗಳ ನಾಟಕ ನಿಲ್ಲಿಸಿ ಎಂಬ ಕೂಗು ಜೋರಾಗಿ ಕೇಳಿಬಂದಿದೆ

- Advertisement -
- Advertisement -

’ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎನ್ನುವವರನ್ನು ನೋಡಿರುತ್ತೀರಿ. ಆದರೆ ಇಡೀ ಮಣ್ಣಿನಲ್ಲಿ ಹೂತು ಹಾಕಿದರೂ ಕೂಡ ಮೀಸೆ ಮಣ್ಣಾಗಲ್ಲಿಲ್ಲ ಎಂಬುವವರನ್ನು ನೀವು ನೋಡಿದ್ದೀರಾ? ಇಲ್ಲವಾದರೆ ಬನ್ನಿ ತೋರಿಸುತ್ತೇವೆ ಅವರೆ ಕರ್ನಾಟಕ ರಾಜ್ಯ ಬಿಜಿಪಿ ಘಟಕ…

ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವ ಭರದಲ್ಲಿ ಮೊದಲಿಗೆ 31 ಜಿಲ್ಲೆಗಳಲ್ಲಿ ಪ್ರವಾಹ ಪರಿಹಾರ ವೀಕ್ಷಣೆ ಮುಗಿದಿದೆ ಈಗ 32ನೇ ಜಿಲ್ಲೆಗೆ ಬಂದಿದ್ದೀವಿ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದ್ದನ್ನು ಇಡೀ ರಾಜ್ಯವೇ ನೋಡಿ ನಕ್ಕಿದೆ. ಇನ್ನು ಮುಂದುವರೆದು ಮಧ್ಯಾಹ್ನದ ವೇಳೆಗೆ ಕರ್ನಾಟಕದ 34 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ ಎಂದು ಹೇಳಿ ಮತ್ತೆ ನಗೆಪಾಟಿಲೀಗಿದ್ದಾರು ಮಾನ್ಯ ಅಧ್ಯಕ್ಷರು..

ಮೂರು ಬಾರಿ ಸಂಸದರು, ದೊಡ್ಡ ಪಕ್ಷವೊಂದರ ರಾಜ್ಯಧ್ಯಕ್ಷರು ಆದ ನಳಿನ್‌ ಕುಮಾರ್‌ ಕಟೀಲ್ ಪ್ರಚಾರದ ಹಪಾಹಪಿಗೆ ಬಿದ್ದು ಬಾಯಿಗೆ ಬಂದ ಸುಳ್ಳು ಹೇಳಿ ಸಿಕ್ಕಿಬಿದ್ದಿರೂ ಮೀಸೆ ಮಣ್ಣಗಲಿಲ್ಲ ಎಂದುಕೊಂಡು ಸುಮ್ಮನಿದ್ದಾರೆ. ಆದರೆ ರಾಜ್ಯ ಬಿಜೆಪಿ ಘಟಕ ಮಾತ್ರ ಸುಮ್ಮನಿರಲು ಸಿದ್ದರಿಲ್ಲ. ಘಟನೆಗೆ ತೇಪೆ ಹಚ್ಚಲು ಮತ್ತಷ್ಟು ನಗೆಪಾಟಿಲಿಗೀಡಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ಕರ್ನಾಟಕವೂ “ಪಕ್ಷ ಎಂದರೆ ನಕಲಿ ಗಾಂಧಿ ಪರಿವಾರ, ಸಂಘಟನೆ ಎಂದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರುಗಳ ಆರಾಧನೆ ಹಾಗೂ ದೆಹಲಿಗೆ ಹೋಗುವುದೇ ಸಂಘಟನಾತ್ಮಕ ಪ್ರವಾಸ ಎಂದು ತಿಳಿದಿರುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಜೆಪಿಯ 36 ಸಂಘಟನಾತ್ಮಕ ಜಿಲ್ಲೆಗಳ ವಿಚಾರ ಹೇಗೆ ಅರ್ಥವಾದೀತು? ಅಪಪ್ರಚಾರ ಮಾಡುವುದನ್ನು ಬಿಟ್ಟು ಪಕ್ಷದ ಸಂಘಟನೆ ಕಡೆ ಗಮನ ಹರಿಸಲಿ.” ಎಂದು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಲು ಮುಂದಾಗಿದೆ.

ಅಂದರೆ ಈ ಬಿಜೆಪಿಯವರಷ್ಟು ಸುಳ್ಳು ಹೇಳುವವರು ಈ ದೇಶದಲ್ಲಿ ಯಾರೂ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪ್ರವಾಹ ಸಂಭವಿಸಿ 2 ತಿಂಗಳು ಕಳೆದಿದ್ದರೂ ಸಮರ್ಪಕ ಪರಿಹಾರ, ಪುನರ್ವಸತಿ ನೀಡದೇ ಜನ ಬೀದಿಗೆ ಬಿದ್ದಿದ್ದರೂ ಸಹ ಮಾಡಬೇಕಾದ ಕೆಲಸ ಬಿಟ್ಟು ಪ್ರಚಾರ ಮುಂದಾಗಿರುವ ಬಿಜೆಪಿ ಅಲ್ಲಿಯೂ ಕಾಂಗ್ರೆಸ್‌ ಅನ್ನು ಟೀಕಿಸುವ ಮೂಲಕ ತಮ್ಮ ನೀಚ ಬುದ್ಧಿ ಪ್ರದರ್ಶಿಸಿದೆ ಎಂದು ಹಲವಾರು ಜನ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ.

ಅಸಲಿಗೆ ಬಿಜೆಪಿಗೆ ಇಬ್ಬರು ಉಪಮುಖ್ಯಮಂತ್ರಿಗಳು ಮಹರಾಷ್ಟ್ರ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಇನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲಿಸಿದರೆ ಆಲಮಟ್ಟಿಯಿಂದ ನಿಮಗೆ ನೀರು ಬಿಡುತ್ತೇವೆಂದು ಕರ್ನಾಟಕ ದ್ರೋಹಿ ಕೆಲಸ ಮಾಡುತ್ತಿದ್ದಾರೆ. ಸಾಲದು ಎಂಬಂತೆ 36 ಸಂಘಟನಾತ್ಮಕ ಜಿಲ್ಲೆಗಳೆಂದು ನಾಟಕ ಆಡುತ್ತಿದ್ದಾರೆ. ಅಸಲಿಗೆ ಪ್ರವಾಹ ಸಂಭವಿಸಿರುವುದು 17 ಜಿಲ್ಲೆಗಳಲ್ಲಿ ಮಾತ್ರ. ಅಷ್ಟು ಜಿಲ್ಲೆಗಳಿಗೆ ಸಮರ್ಪಕ ಪರಿಹಾರ ಕೊಟ್ಟರೆ ಸಾಕು, ಈ 32, 34, 36 ಜಿಲ್ಲೆಗಳ ನಾಟಕ ನಿಲ್ಲಿಸಿ ಎಂಬ ಕೂಗು ಜೋರಾಗಿ ಕೇಳಿಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...