Homeಮುಖಪುಟಅಕ್ರಮ, ಅನೈತಿಕ, ಅಶ್ಲೀಲ ಮಾರ್ಗಗಳ ಮೂಲಕ ಸಿಎಎ ಪರ ಮಿಸ್‌ಕಾಲ್‌ ಸಂಗ್ರಹಣೆ: ಬೆಳಿಕಿಗೆ ಬಂದ ಬಿಜೆಪಿ...

ಅಕ್ರಮ, ಅನೈತಿಕ, ಅಶ್ಲೀಲ ಮಾರ್ಗಗಳ ಮೂಲಕ ಸಿಎಎ ಪರ ಮಿಸ್‌ಕಾಲ್‌ ಸಂಗ್ರಹಣೆ: ಬೆಳಿಕಿಗೆ ಬಂದ ಬಿಜೆಪಿ ಕಾರ್ಯಕರ್ತರ ಬಂಡವಾಳ

ಒಟ್ಟಿನಲ್ಲಿ ಬಿಜೆಪಿ ವಿರುದ್ಧ ಜನ ತಿರುಗಿಬಿದ್ದಾಗ ಅದನ್ನು ಮುರಿಯಲು, ಭಾರತದ ಹೆಚ್ಚಿನ ಜನ ಬಿಜೆಪಿ ಕಡೆ ಇದ್ದಾರೆ ಎಂದು ತೋರಿಸಲು ಎಂಥ ನೀಚಮಟ್ಟಕ್ಕೂ ಬಿಜೆಪಿ ಕಾರ್ಯಕರ್ತರು ಇಳಿಯಬಲ್ಲರು ಎಂಬುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ..

- Advertisement -
- Advertisement -

ಇಡೀ ಭಾರತದ ವಿರೋಧ ಪಕ್ಷಗಳು ಒಂದಾದರೂ ಸರಿಯೇ ಪೌರತ್ವ ಕಾಯ್ದೆ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ. ಆದರೆ ಸಿಎಎ, ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೇಳುತ್ತಿದ್ದು ದಿನೇ ದಿನೇ ವ್ಯಾಪಿಸುತ್ತಿವೆ.

ಈ ನಡುವೆ ಆನ್‌ಲೈನ್‌ನಲ್ಲಿ ಸಿಎಎ ಪರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವ ಬಿಜೆಪಿಯು ಮಿಸ್‌ಕಾಲ್ ಅಭಿಯಾನವನ್ನು ಆರಂಭಿಸಿದೆ. ಆದರೆ ಬಿಜೆಪಿ ಘೋಷಿಸಿರುವ ನಂಬರ್‌ಗೆ ಮಿಸ್‌ಕಾಲ್‌ ಕೊಡಿಸಲು ಅನೈತಿಕ ಮಾರ್ಗ ಹಿಡಿದಿರುವುವುದು ಬೆಳಕಿಗೆ ಬಂದಿದೆ.

ನಿನ್ನೆ ರಾಜಸ್ಥಾನದಲ್ಲಿ ಸಿಎಎ ಪರ ರ್‍ಯಾಲಿಯಲ್ಲಿ ಮಾತನಾಡಿದ ಅಮಿತ್‌ ಶಾ ಪೌರತ್ವ ಕಾಯ್ದೆಗೆ ಬೆಂಬಲ ನೀಡಲು 8866288662 ನಂಬರ್‌ಗೆ ಮಿಸ್‌ ಕಾಲ್‌ ಕೊಡಿ ಎಂದು ಮನವಿ ಮಾಡಿದ್ದರು.

ಆದರೆ ನಿರೀಕ್ಷಿತ ಮಿಸ್‌ಕಾಲ್‌ಗಳು ಆ ನಂಬರ್‌ಗೆ ಬಂದಿಲ್ಲ. ಏಕೆಂದರೆ ಬಹುತೇಕ ಜನ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧವಿದ್ದಾರೆ. ಹಾಗಾಗಿ ಬಿಜೆಪಿ ಮನವಿಗೆ ಯಾರೂ ಕಿವಿಗೊಟ್ಟಿಲ್ಲ. ಇದರಿಂದ ಬಿಜೆಪಿಗೆ ಭಾರೀ ಮುಖಭಂಗವಾಗಲಿದೆ. ತುಂಬಾ ಕಡಿಮೆ ಮಿಸ್‌ಕಾಲ್‌ಗಳು ಬಂದಿರುವುದರಿಂದ ಬಿಜೆಪಿ ಅದನ್ನು ಸಾರ್ವಜನಿಕವಾಗಿ ತೋರಿಸಲು ಆಗುವುದಿಲ್ಲ. ಇತ್ತೀಚೆಗೆ ನಡೆದ ಎಲ್ಲಾ ಪೋಲ್‌ಗಳು ಕೂಡ ಜನಾಭಿಪ್ರಾಯ ಸಿಎಎ ಎನ್‌ಆರ್‌ಸಿ ವಿರುದ್ಧವಿರುವುದನ್ನು ತೋರಿಸಿವೆ.

ಇದರಿಂದ ಕಂಗಾಲಾಗಿರುವ ಬಿಜೆಪಿ ಕಾರ್ಯಕರ್ತರು, ಐಟಿ ಸೆಲ್‌ ಪಡೆ ಅಡ್ಡಹಾದಿಗಿಳಿಗಿದೆ. ಅಶ್ಲೀಲತೆಗೆ ಇಳಿದಿದೆ. ಅದು ಅಂದದ ಹೆಣ್ಣುಮಕ್ಕಳ ಫೋಟೊ ಹಾಕಿ ಫೇಕ್‌ ಐಡಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ತೆರೆದು ಬೋರ್‌ ಹಾಗಿದ್ರೆ ನನ್ನೊಡನೆ ಮಾತಾಡಲು ಈ ನಂಬರ್‌ಗೆ ಕಾಲ್‌ ಮಾಡಿ, ಉಚಿತ ನೆಟ್‌ಫ್ಲಿಕ್ಸ್ ಚಂದಾ ಬೇಕೆ ಈ ನಂಬರ್‌ ಕಾಲ್‌ ಮಾಡಿ ಎಂದು ಸಿಎಎ ಬೆಂಬಲಿಸಲು ಇರುವ 8866288662 ನಂಬರ್‌ ಅನ್ನೆ ಕೊಡಲಾಗಿದೆ..!

ಕೆಲಸ ಬೇಕಾದರೆ ಕಾಲ್‌ ಮಾಡಿ, ನನ್ನೊಡನೆ ಚಾಟ್ ಮಾಡಲು ಕಾಲ್‌ ಮಾಡಿ ಎಂಬರ್ಥದ ಅಶ್ಲೀಲ ಪದಗಳಲ್ಲಿ ಯುವಕರನ್ನು ಸೆಳೆಯುವ ರೀತಿಯ ಪೋಸ್ಟರ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡು.ವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಒಂದಷ್ಟು ಪೋಸ್ಟರ್‌ಗಳು ಮತ್ತು ಟ್ವೀಟ್‌ಗಳು ಕೆಳಗಿನಂತಿವೆ ನೋಡಿ.

ಇವೆಲ್ಲವೂ ಫೋಟೋಶಾಪ್‌ ಮಾಡಿದ ಚಿತ್ರಗಳಾಗಿದ್ದು ಟ್ವಿಟ್ಟರ್‌ನಲ್ಲಿ ಹುಡುಕಿದರೆ ಆ ಅಕೌಂಟ್‌ಗಳೇ ಸಿಗುವುದಿಲ್ಲ. ಆದರೂ ಒಂದಷ್ಟು ಯುವಕರು ಈ ನಂಬರ್‌ಗೆ ಮಿಸ್‌ಕಾಲ್‌ ಕೊಟ್ಟಿರುವುದು ಕಂಡುಬಂದಿದೆ.

ಇನ್ನು ನೆಟ್‌ಫ್ಲಿಕ್ಸ್‌ ಉಚಿತ ಚಂದಾ ಮತ್ತು ಪಾಸ್‌ವರ್ಡ್‌ ಪಡೆಯಲು ಮಿಸ್‌ಕಾಲ್‌ ಕೊಡಿ ಎಂದು ಟ್ವಿಟ್ಟರ್‌ನಲ್ಲಿ ಅಧಿಕೃತವಾಗಿ ವೈರಲ್‌ ಮಾಡಿದ್ದಾರೆ. ಇದಕ್ಕೆ ನೆಟ್‌ಫ್ಲಿಕ್ಸ್‌ ತನ್ನ ಅಧಿಕೃತ ಅಕೌಂಟ್‌ನಿಂದ ಟ್ವೀಟ್‌ ಮಾಡಿ ಇದು ಫೇಕ್‌ನ್ಯೂಸ್‌ ಎಂದು ಸ್ಪಷ್ಟಪಡಿಸಿದೆ.

ಇನ್ನು ಹಲವಾರು ಜನ ಕೆಟ್ಟಕೊಳಗಾಗಿ ಬರೆದು ಈ ನಂಬರ್‌ಗೆ ಮಿಸ್‌ಕಾಲ್ ಕೊಡಿ ಎಂದು ಅಂಗಾಲಾಚಿಕೊಳ್ಳುತ್ತಿದ್ದಾರೆ. ಇದನ್ನು ನೋಡಿ ಕೆಲವರು ಬಿಜೆಪಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ವ್ಯಂಗ್ಯವಾಡುತ್ತಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ವಿರುದ್ಧ ಜನ ತಿರುಗಿಬಿದ್ದಾಗ ಅದನ್ನು ಮುರಿಯಲು, ಭಾರತದ ಹೆಚ್ಚಿನ ಜನ ಬಿಜೆಪಿ ಕಡೆ ಇದ್ದಾರೆ ಎಂದು ತೋರಿಸಲು ಎಂಥ ನೀಚಮಟ್ಟಕ್ಕೂ ಬಿಜೆಪಿ ಕಾರ್ಯಕರ್ತರು ಇಳಿಯಬಲ್ಲರು ಎಂಬುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ..

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಎಎಪಿಯನ್ನು ಹತ್ತಿಕ್ಕಲು ಬಿಜೆಪಿ ಆಪರೇಷನ್ ಜಾದು ಆರಂಭಿಸಿದೆ..’; ಅರವಿಂದ್ ಕೇಜ್ರಿವಾಲ್

0
"ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರೊಂದಿಗೆ ಇಂದು ಬಿಜೆಪಿ ಕೇಂದ್ರ ಕಚೇರಿಗೆ ಯೋಜಿತ...