Homeರಂಜನೆಕ್ರೀಡೆಇಂದಿನ ಟೆಸ್ಟ್ ಅಭ್ಯಾಸ ಪಂದ್ಯದಲ್ಲಿ ಕ್ರೀಡಾಸ್ಪೂರ್ತಿ ಮೆರದು ಜನರ ಹೃದಯಗೆದ್ದ ಮೊಹಮ್ಮದ್ ಸಿರಾಜ್

ಇಂದಿನ ಟೆಸ್ಟ್ ಅಭ್ಯಾಸ ಪಂದ್ಯದಲ್ಲಿ ಕ್ರೀಡಾಸ್ಪೂರ್ತಿ ಮೆರದು ಜನರ ಹೃದಯಗೆದ್ದ ಮೊಹಮ್ಮದ್ ಸಿರಾಜ್

ಆ ಸಮಯದಲ್ಲಿ ತಾನು ರನೌಟ್‌ ಆಗಬಹುದು ಅಥವಾ ರನ್ ಗಳಿಸಬಹುದು ಎಂಬುದರ ಯಾವ ಪರಿವೆಯೂ ಅವರಿಗಿರಲಿಲ್ಲ. ಅವರಿಗಿದ್ದುದು ಬೌಲರ್ ಕ್ಯಾಮರೂನ್ ಗ್ರೀನ್‌ಗೆ ಏನೂ ಆಗಬಾರದೆಂಬ ಕಾಳಜಿಯಷ್ಟೆ

- Advertisement -
- Advertisement -

ಅಕ್ಟೋಬರ್ 21 ರಂದು ನಡೆದ ಕೋಲ್ಕತ್ತಾ ನೈಟ್‌ ರೈಡರ್ಸ್ ಮತ್ತು‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ದೇಶದ ಗಮನಸೆಳೆದಿದ್ದರು. ಬೆಂಗಳೂರು ಪರ ಬೌಲ್ ಮಾಡಿದ ಅವರು 4 ಓವರ್‌ಗಳಲ್ಲಿ ಕೇವಲ 8 ರನ್ ನೀಡಿ 2 ಮೇಡನ್ ಮತ್ತು 3 ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಅದೇ ಮೊಹಮ್ಮದ್ ಸಿರಾಜ್ ಇಂದು ಮತ್ತೊಮ್ಮೆ ಕ್ರೀಡಾಭಿಮಾನಿಗಳ ಹೃದಯಗೆದಿದ್ದಾರೆ. ಆದರೆ ಈ ಬಾರಿ ಬೌಲ್ ಮಾಡಿ ಅಲ್ಲ, ಬದಲಿಗೆ ಕ್ರೀಡಾಂಗಣದಲ್ಲಿ ಮಾನವೀಯತೆ ಪ್ರದರ್ಶಿಸುವ ಮೂಲಕ.

ಇಂದು ಭಾರತ ಆಸ್ಟ್ರೇಲಿಯಾ ಎ ನಡುವಿನ ಎರಡನೇ ಟೆಸ್ಟ್ ಅಭ್ಯಾಸ ಪಂದ್ಯ ಆರಂಭವಾಗಿದೆ. ಮೊದಲು ಬ್ಯಾಟ್ ಮಾಡಿದ ಭಾರತ ಅಲ್ಪ ಮೊತ್ತಕ್ಕೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 44 ಓವರ್‌ಗಳಲ್ಲಿ 165 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಕೊನೆಗೆ ಜಸ್ಪ್ರಿತ್ ಬೂಮ್ರ ಮತ್ತು ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದರು. ಆಗ 44 ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡಿದರು. ಬ್ಯಾಟಿಂಗ್ ಕ್ರೀಸ್‌ನಲ್ಲಿದ್ದ ಬೂಮ್ರ ತನ್ನತ್ತ ಬಂದ್ ಬೌಲ್‌ಗೆ ನೇರವಾಗಿ ಬಾರಿಸಿದಾಗ ಅದು ಸೀದಾ ಬೌಲರ್ ಕ್ಯಾಮರೂನ್ ಗ್ರೀನ್ ತಲೆಗೆ ಬಡಿಯಿತು. ಕ್ರೀಸ್‌ನ ಇನ್ನೊಂದು ಬದಿಯಲ್ಲಿದ್ದ ಮೊಹಮ್ಮದ್ ಸಿರಾಜ್ ಕ್ಷಣಮಾತ್ರದಲ್ಲಿ ಬ್ಯಾಟ್ ಕೈಬಿಟ್ಟು ಸೀದಾ ಕ್ಯಾಮರೂನ್ ಗ್ರೀನ್ ಬಳಿಗೆ ಓಡಿ ಅವರನ್ನು ಸಂತೈಸಿದರು. ಅವರಿಗೆ ಆ ಸಮಯದಲ್ಲಿ ತಾನು ರನೌಟ್‌ ಆಗಬಹುದು ಅಥವಾ ರನ್ ಗಳಿಸಬಹುದು ಎಂಬುದರ ಯಾವ ಪರಿವೆಯೂ ಅವರಿಗಿರಲಿಲ್ಲ. ಅವರಿಗಿದ್ದುದು ಬೌಲರ್ ಕ್ಯಾಮರೂನ್ ಗ್ರೀನ್‌ಗೆ ಏನೂ ಆಗಬಾರದೆಂಬ ಕಾಳಜಿಯಷ್ಟೆ.. ಆ ಕಾಳಜಿಗೆ ಕ್ರೀಡಾಭಿಮಾನಿಗಳು ಗೌರವದ ಮಳೆ ಸುರಿಸಿದ್ದಾರೆ.

ಈ ಘಟನೆ ನಡೆದ ತಕ್ಷಣ ಎಲ್ಲರೂ ಕ್ಯಾಮರೂನ್ ಗ್ರೀನ್ ಬಳಿ ಓಡಿದ್ದಾರೆ. ಅಂಪೈರ್ ಕೂಡ ತೆರಳಿ ಮೆಡಿಕಲ್ ಟೀಮ್‌ ಬರಲು ಸನ್ಹೆ ಮಾಡಿದರು. ಆದರೆ ಎಲ್ಲರಿಗಿಂತ ಮೊದಲು ತೆರಳಿದ್ದು ಮಾತ್ರ ನಾನ್‌ಸ್ಟ್ರೈಕರ್‌ ನಲ್ಲಿದ್ದ ಮೊಹಮ್ಮದ್ ಸಿರಾಜ್. ಆ ಕ್ಷಣಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.

“ಮೊಹಮ್ಮದ್ ಸಿರಾಜ್, ಸ್ವಾರ್ಥರಹಿತ ಕ್ರಿಕೆಟರ್ ಇಂದು ನನ್ನ ಹೃದಯ ಗೆದ್ದಿದ್ದಾರೆ. ಎಂಥ ಅದ್ಬುತ ಕ್ಷಣ” ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಜಸ್ಪ್ರಿತ್ ಬುಮ್ರಾ ಸ್ಟ್ರೈಟ್ ಡ್ರೈವ್‌ನಿಂದ ತಲೆಗೆ ಪೆಟ್ಟಾದ ಕ್ಯಾಮರೂನ್ ಗ್ರೀನ್‌ರನ್ನು ಪರೀಕ್ಷಿಸಲು ನಾನ್-ಸ್ಟ್ರೈಕರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಸಿರಾಜ್ ಬೇಗನೆ ಧಾವಿಸಿದರು ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಪೆಟ್ಟು ತಿಂದ ಕ್ಯಾಮರೂನ್ ಗ್ರೀನ್‌ರನ್ನು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಡ್ರೆಸ್ಸಿಂಗ್ ರೂಂಗೆ ಕರೆದೊಯ್ಯಲಾಯಿತು.


ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯ: ಮೈದಾನಕ್ಕೆ ನುಗ್ಗಿ ‘ಸ್ಟಾಪ್ ಅದಾನಿ’ ಎಂದ ಪ್ರತಿಭಟನೆಗಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...