Homeಮುಖಪುಟಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಯತ್ನ: ಸಂಜಯ್ ರಾವತ್

ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಯತ್ನ: ಸಂಜಯ್ ರಾವತ್

- Advertisement -
- Advertisement -

ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಲು ಭಾರತೀಯ ಜನತಾ ಪಕ್ಷ ಪ್ರಯತ್ನಿಸುತ್ತಿದೆ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ರಾಜ್ಯಸಭಾ ಸಂಸದ ಸಂಜಯ್ ರಾವತ್ ಬುಧವಾರ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಮುಸ್ಲಿಂ ಸಮುದಾಯದವರು ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಮಂಗಳವಾರ ವಿಶೇಷ ತನಿಖಾ ತಂಡವನ್ನು ರಚಿಸಿದ ಬಳಿಕ ಆ ಬಗ್ಗೆ ಮಾತನಾಡಿದ ಸಂಸದ ರಾವತ್, ”ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಮುಸ್ಲಿಮರು ಹಿಂದೂ ದೇವತೆ ಶಿವನಿಗೆ ಚಾದರ್ – ಧಾರ್ಮಿಕ ಶ್ಲೋಕಗಳೊಂದಿಗೆ ಮುದ್ರಿತವಾದ ಸಾಂಪ್ರದಾಯಕ ಬಟ್ಟೆಯನ್ನು ಅರ್ಪಿಸಲು ಪ್ರಯತ್ನಿಸಿದರು ಎಂದು ಆರೋಪಿಸಿ ದೇವಾಲಯದ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಮುಸ್ಲಿಂರನ್ನು ಬಂಧಿಸಲಾಗಿದೆ.

ದಶಕಗಳ ಹಿಂದಿನಿಂದಲೂ ಈ ದೇವಾಲಯದ ಪ್ರವೇಶದ್ವಾರದಲ್ಲಿ ಧೂಪದ್ರವ್ಯವನ್ನು ಅರ್ಪಿಸುವ ಆಚರಣೆಯನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಹೇಳಿದ್ದಾರೆ.. ಅಂತಹ ಯಾವುದೇ ಸಂಪ್ರದಾಯ ಅಸ್ತಿತ್ವದಲ್ಲಿಲ್ಲ ಎಂದು ದೇವಾಲಯದ ಅಧಿಕಾರಿಗಳು ನಿರಾಕರಿಸಿದ್ದಾರೆ.

”ಸೂಫಿ ಸಂತ ಗುಲಾಬ್ ಶಾ ಸ್ಯಾಂಡಲ್ ಅವರ ಭಕ್ತರು ತಮ್ಮ ಮೆರವಣಿಗೆಯ ಸಮಯದಲ್ಲಿ ತ್ರಯಂಬಕೇಶ್ವರ ದೇವಸ್ಥಾನದ ಮೆಟ್ಟಿಲುಗಳಲ್ಲಿ ಸುಗಂಧದ್ರವ್ಯವನ್ನು ಅರ್ಪಿಸಿ ಮತ್ತು ಹಾದುಹೋಗುವ 100 ವರ್ಷಗಳ ಸಂಪ್ರದಾಯವಿದೆ. ಯಾರೂ ಬಲವಂತವಾಗಿ ದೇವಸ್ಥಾನಕ್ಕೆ ಪ್ರವೇಶಿಸಲು ಪ್ರಯತ್ನಿಸಲಿಲ್ಲ” ಎಂದು ರಾವತ್ ಬುಧವಾರ ಹೇಳಿದ್ದಾರೆಂದು ದಿ ಹಿಂದೂ ವರದಿ ಮಾಡಿದೆ.

”ಕೋಮು ಸೌಹಾರ್ದತೆ ಸಾರುವ ಇಂತಹ ಸಂಪ್ರದಾಯಗಳು ದೇಶಾದ್ಯಂತ ಸಾಮಾನ್ಯವಾಗಿದೆ. ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ಮಹಾರಾಷ್ಟ್ರದಲ್ಲಿ ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ” ಎಂದು ಹೇಳಿದರು.

”ಗಣಪತಿ ಹಬ್ಬದ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಏರಿಯಾಗಳ ಮೂಲಕ ಮೆರವಣಿಗೆ ಸಾಗಿದಾಗ ಮುಸ್ಲಿಂ ಸಮುದಾಯವೂ ಮುಂಬೈನ ಪ್ರಸಿದ್ಧ ಲಾಲ್ಬೌಚಾ ರಾಜಾ (ಗಣಪತಿ) ನನ್ನು ಗೌರವಿಸುತ್ತದೆ. ಅವರು ಮೆರವಣಿಗೆ ಮೇಲೆ ಹೂಗಳನ್ನು ಸುರಿಯುತ್ತಾರೆ” ಎಂದು ರಾವತ್ ಹೇಳಿದರು.

ಶಿವಸೇನೆ (ಯುಬಿಟಿ) ಮುಸ್ಲಿಮರನ್ನು ಓಲೈಸುತ್ತಿದೆ ಎಂಬ ಬಿಜೆಪಿ ಶಾಸಕ ನಿತೇಶ್ ರಾಣೆ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ರಾವತ್, ”ಬಾಳಾಸಾಹೇಬ್ ಠಾಕ್ರೆ ಅವರು ದೇಶದ ಶ್ರೇಷ್ಠ ಹಿಂದುತ್ವ ನಾಯಕರಲ್ಲಿ ಒಬ್ಬರು. ಅವರು ಎಂದಿಗೂ ಮುಸ್ಲಿಮರ ಮೇಲೆ ವಿನಾಕಾರಣ ದಾಳಿಗೆ ಆದೇಶ ನೀಡಲಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಹಿಂದೂ-ಮುಸ್ಲಿಂ ಗಲಭೆಗಳನ್ನು ಪ್ರಚೋದಿಸಲು ನಂಬಲಿಲ್ಲ. ಇದು ನಮ್ಮ ‘ಹಿಂದುತ್ವ’ ಅಲ್ಲ. ನಾವು ಇದನ್ನು ಇತರ ಕೆಲವು ಪಕ್ಷಗಳಂತೆ ರಾಜಕೀಯ ಮೈಲೇಜ್ ಗಳಿಸುವ ಸಾಧನವಾಗಿ ಬಳಸಿಕೊಂಡಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read