Homeರಾಜಕೀಯಬಿಜೆಪಿ ರಾಜ್ಯಪಾಲರನ್ನು ಕಾರ್ಯಕರ್ತನಂತೆ ಬಳಸುತ್ತಿದೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ರಾಜ್ಯಪಾಲರನ್ನು ಕಾರ್ಯಕರ್ತನಂತೆ ಬಳಸುತ್ತಿದೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್. ರವಿ ನಡುವಿನ ಸಂಘರ್ಷದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯು ರಾಜ್ಯಪಾಲರನ್ನು ಪಕ್ಷದ ‘ಕಾರ್ಯಕರ್ತ’ನಂತೆ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲ ರವಿ ಅವರು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಭಾಷಣ ಮಾಡುತ್ತಿರುವ ವೇಳೆ ಸದನದಿಂದ ಹೊರನಡೆದಿದ್ದರು. ಇದು ಭಾರಿ ವಿವಾದವನ್ನುಂಟು ಮಾಡಿತ್ತು.

“ವಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಸಾಂವಿಧಾನಿಕ ಕಚೇರಿಯನ್ನು ‘ಕಾರ್ಯಕರ್ತ’ ಎಂಬ ರೀತಿ ಬಳಸಿಕೊಳ್ಳುವ ಮೂಲಕ ಬಿಜೆಪಿಯು ಉದ್ದೇಶಪೂರ್ವಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಕೆಲವು ರಾಜ್ಯಪಾಲರು ಸಂವಿಧಾನದ ಮೇಲೆ ಲಜ್ಜೆಗೆಟ್ಟ ಅತಿಕ್ರಮಣ ನಡೆಸಿ ನಮ್ಮ ರಾಜಕೀಯ ಒಕ್ಕೂಟ ರಚನೆಯನ್ನು ಕಳಂಕಗೊಳಿಸಿದ್ದಾರೆ” ಎಂದು ಖರ್ಗೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ರಾಜ್ಯಪಾಲರು ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಅಲ್ಲದೆ ಅವರು ಕೂಡಾ ಭಾಗವಾಗಿರುವ ಶಾಸಕಾಂಗವನ್ನು ಅವಮಾನಿಸಲು ಸಾಧ್ಯವಿಲ್ಲ. ಆದರೆ ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳು ಆಳುವ ರಾಜ್ಯಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಅಶಾಂತಿಯನ್ನು ಸೃಷ್ಟಿಸಲು ರಾಜ್ಯಪಾಲರನ್ನು ದೆಹಲಿಯ ಯಜಮಾನರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಇದು ಅಪಾಯಕಾರಿ” ಎಂದು ಕಾಂಗ್ರೆಸ್ ಖರ್ಗೆ ಹೇಳಿದ್ದಾರೆ.

ರಾಜಭವನವು ಪೊಂಗಲ್ ಹಬ್ಬದ ಆಹ್ವಾನ ಪತ್ರದಲ್ಲಿ ತಮಿಳುನಾಡನ್ನು ‘ತಮಿಳಗಂ’ ಎಂದು ತಮಿಳುಭಾಷೆಯಲ್ಲಿ ಉಲ್ಲೇಖಿಸಿದೆ. ಅಲ್ಲದೆ ರಾಜ್ಯ ಸರ್ಕಾರದ ಲಾಂಛನವನ್ನು ಕೈಬಿಟ್ಟು, ಆಹ್ವಾನ ಪತ್ರಿಕೆಯಲ್ಲಿ ಕೇವಲ ಭಾರತ ಸರ್ಕಾರದ ಲಾಂಛನವನ್ನು ಮಾತ್ರ ಮುದ್ರಿಸಿತ್ತು.

ರಾಜಭವನದ ಈ ನಡೆಯು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಮಿತ್ರ ಪಕ್ಷಗಳನ್ನು ಕೆರಳಿಸಿದ್ದು, ರಾಜ್ಯಪಾಲ ರವಿಯನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದ್ದಾರೆ. ಆಹ್ವಾನ ಪತ್ರಿಕೆಯ ಇಂಗ್ಲಿಷ್ ಆವೃತ್ತಿಯು ರಾಜ್ಯಕ್ಕೆ ‘ತಮಿಳುನಾಡು’ ಎಂಬ ಹೆಸರು ಬಳಸಲಾಗಿದೆ.

ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜ್ಯಪಾಲ ರವಿ, “ಯಾವುದಾದರೂ ವಿಷಯವನ್ನು ಇಡೀ ದೇಶಕ್ಕೆ ಅನ್ವಯಿಸುವಾಗ ತಮಿಳುನಾಡು ಮಾತ್ರ ‘ಬೇಡ’ ಎಂದು ಹೇಳುತ್ತದೆ. ಇದೊಂದು ಅಭ್ಯಾಸವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಅನೇಕ ಪ್ರಬಂಧಗಳನ್ನು ಬರೆಯಲಾಗಿದ್ದು, ಇವುಗಳೆಲ್ಲಾ ಸುಳ್ಳು ಮತ್ತು ಕಾಲ್ಪನಿಕ ಕತೆಗಳಾಗಿವೆ. ಇವುಗಳನ್ನು ಒಡೆಯಬೇಕು. ಸತ್ಯವು ಮೇಲುಗೈ ಸಾಧಿಸಬೇಕು. ರಾಜ್ಯಕ್ಕೆ ‘ತಮಿಳಗಂ’ ಎಂದು ಕರೆಯುವುದೆ ಹೆಚ್ಚು ಸೂಕ್ತವಾದ ಪದವಾಗಿದೆ. ದೇಶದ ಉಳಿದ ಭಾಗವು ದೀರ್ಘಕಾಲದವರೆಗೆ ವಿದೇಶಿಯರ ಕೈಯಲ್ಲಿ ಬಹಳಷ್ಟು ವಿನಾಶವನ್ನು ಅನುಭವಿಸಿತು” ಎಂದು ಹೇಳಿದ್ದರು.

‘ತಮಿಳುನಾಡು’ ಎಂದರೆ ‘ತಮಿಳರ ರಾಷ್ಟ್ರ’ ಎಂದು ಅರ್ಥ ಬರುತ್ತದೆ, ಆದರೆ ‘ತಮಿಳಗಂ’ ಎಂದರೆ ‘ತಮಿಳು ಜನರ ವಾಸಸ್ಥಾನ’ ಎಂದು ಅರ್ಥ. ಇದು ಈ ಪ್ರದೇಶದ ಪ್ರಾಚೀನ ಹೆಸರು ಎಂದು ರಾಜ್ಯಪಾಲರು ಹೇಳಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು, ರಾಜ್ಯಪಾಲರು ಪ್ರತಿಪಕ್ಷ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವು ಕರೆಯುವ ‘ತಮಿಳಗಂ’ ಎಂಬ ಹೆಸರನ್ನು ರಾಜ್ಯಕ್ಕೆ ನೀಡುವ ಮೂಲಕ ಅವರ ಅಜೆಂಡಾವನ್ನು ಮುಂದಕ್ಕೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಅವರು ವಾಸ್ತವಿಕವಾಗಿ ತಪ್ಪಾದ ಮತ್ತು ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಾರೆ” ಎಂದು ಡಿಎಂಕೆ ನಾಯಕ ಟಿಆರ್ ಬಾಲು ಹೇಳಿದ್ದಾರೆ. ಪೊಂಗಲ್ ಆಹ್ವಾನ ಪತ್ರದ ವಿವಾದದ ನಂತರ, ರಾಜ್ಯಪಾಲರು ತಮಿಳುನಾಡು ವಿಧಾನಸಭೆಯಿಂದ ಹೊರನಡೆದು ಮತ್ತೆ ವಿವಾದೆ ಸೃಷ್ಟಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ: ಕೆನಡಾದಲ್ಲಿ ಶಂಕಿತ ಮೂವರು ಭಾರತೀಯರ ಬಂಧನ

0
ಸಿಖ್‌ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಕೆನಡಾದಲ್ಲಿ ಕೆಲ ತಿಂಗಳ ಹಿಂದೆಯೇ ಈ ಶಂಕಿತರನ್ನು ಪೊಲೀಸರು ಗುರುತಿಸಿದ್ದು,...