HomeಮುಖಪುಟZEE ವಿರುದ್ಧದ ಲೇಖನ ತೆಗೆದುಹಾಕಲು ಬ್ಲೂಮ್‌ಬರ್ಗ್‌ಗೆ ಆದೇಶಿಸಿದ ಕೋರ್ಟ್‌

ZEE ವಿರುದ್ಧದ ಲೇಖನ ತೆಗೆದುಹಾಕಲು ಬ್ಲೂಮ್‌ಬರ್ಗ್‌ಗೆ ಆದೇಶಿಸಿದ ಕೋರ್ಟ್‌

- Advertisement -
- Advertisement -

ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEE) ವಿರುದ್ಧ ಪ್ರಕಟಿಸಲಾದ ಮಾನಹಾನಿಕರ ಲೇಖನವನ್ನು ತೆಗೆದುಹಾಕುವಂತೆ ದೆಹಲಿ ನ್ಯಾಯಾಲಯವು ಬ್ಲೂಮ್‌ಬರ್ಗ್ ಟೆಲಿವಿಷನ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ (ಬ್ಲೂಮ್‌ಬರ್ಗ್) ಆದೇಶಿಸಿದೆ.

ZEE ಕಂಪನಿಯು ಫೆಬ್ರವರಿ 21 ಬ್ಲೂಮ್‌ಬರ್ಗ್ ಪ್ರಕಟಿಸಿದ ಲೇಖನದ ವಿರುದ್ಧ ದೆಹಲಿ ಕೋರ್ಟ್‌ ಮೊರೆ ಹೋಗಿತ್ತು. ಲೇಖನದಲ್ಲಿ ತಪ್ಪು ಮಾಹಿತಿಯಿಂದ ಕಂಪೆನಿಗಾಗಿರುವ ನಷ್ಟದ ಬಗ್ಗೆ ಉಲ್ಲೇಖಿಸಿತ್ತು.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ, ಹರ್ಜ್ಯೋತ್ ಸಿಂಗ್ ಭಲ್ಲಾ ಅವರು ಈ ಕುರಿತು ಅರ್ಜಿ ವಿಚಾರಣೆಯನ್ನು ನಡೆಸಿದ್ದು, ಆದೇಶ ಸ್ವೀಕರಿಸಿದ ಒಂದು ವಾರದೊಳಗೆ ತನ್ನ ವೇದಿಕೆಯಿಂದ ಮಾನಹಾನಿಕರ ಲೇಖನವನ್ನು ತೆಗೆದುಹಾಕುವಂತೆ ಬ್ಲೂಮ್‌ಬರ್ಗ್‌ಗೆ ಆದೇಶಿಸಿದ್ದಾರೆ. ಇದಲ್ಲದೆ ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ಆನ್‌ಲೈನ್ ಅಥವಾ ಆಫ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಲೇಖನವನ್ನು ಪೋಸ್ಟ್ ಮಾಡುವುದು, ಪ್ರಸಾರ ಮಾಡುವುದು ಅಥವಾ ಪ್ರಕಟಿಸುವುದನ್ನು ಬ್ಲೂಮ್‌ಬರ್ಗ್ ನಿರ್ಬಂಧಿಸಿದೆ.

ZEE ಅದರ ದಾವೆಯಲ್ಲಿ, ZEEನ ಕಾರ್ಪೊರೇಟ್ ಆಡಳಿತ ಮತ್ತು ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖಿಸಿರುವ ಬ್ಲೂಮ್‌ಬರ್ಗ್ ಲೇಖನವು ಅಸಮರ್ಪಕವಾಗಿದೆ ಮತ್ತು ಕಂಪನಿಯ ಷೇರು ಬೆಲೆಯಲ್ಲಿ 15 ಪ್ರತಿಶತದಷ್ಟು ಕುಸಿತಕ್ಕೆ ಕಾರಣವಾಗಿದೆ, ಹೂಡಿಕೆದಾರರ ಸಂಪತ್ತಿನ ನಷ್ಟಕ್ಕೆ ಕಾರಣವಾಗಿದೆ. ಸುಳ್ಳು ಮತ್ತು ತಪ್ಪಾದ ಲೇಖನವನ್ನು ಕಂಪನಿಯು ಪ್ರಕಟಿಸಿದ್ದು, ಮಾನಹಾನಿ ಮಾಡುವ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಲೇಖನವನ್ನು ಪ್ರಕಟಿಸಲಾಗಿದೆ ಎಂದು ಹೇಳಲಾಗಿದೆ.

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI), ZEE ಕಂಪೆನಿಯಲ್ಲಿ 241 ಮಿಲಿಯನ್ ಲೆಕ್ಕಪತ್ರ ಸಮಸ್ಯೆಯನ್ನು ಕಂಡುಹಿಡಿದಿದೆ ತಪ್ಪಾಗಿ ಲೇಖನ ಪ್ರಕಟಿಸಿದೆ, ಆದರೆ ಇಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. SEBIಯಿಂದ ಈ ಕುರಿತ ಯಾವುದೇ ಆದೇಶದ ಬಗೆಗಿನ ಆಧಾರವಿಲ್ಲದೆ ಲೇಖನವನ್ನು ಪ್ರಕಟಿಸಲಾಗಿದ್ದು, ZEEನಲ್ಲಿ ಹಣಕಾಸಿನ ಅಕ್ರಮ ನಡೆದಿದೆ ಎಂದು ತಪ್ಪಾಗಿ ಪ್ರಕಟಿಸಿದೆ ಎಂದು ZEE ಹೇಳಿದೆ.

ಬುಧವಾರ ನಡೆದ ವಿಚಾರಣೆಯಲ್ಲಿ ZEE ಪರ ವಕೀಲರು, ಈ ಕುರಿತು ತಡೆಯಾಜ್ಞೆಯನ್ನು ನೀಡದಿದ್ದರೆ ಕಂಪನಿಗೆ ಸರಿಪಡಿಸಲಾಗದ ನಷ್ಟ ಸಂಭವಿಸಬಹುದು ಎಂದು ಹೇಳಿತ್ತು.

ಇದನ್ನು ಓದಿ: ಧರ್ಮ, ಜಾತಿ ಆಧಾರದಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಪಕ್ಷಗಳಿಗೆ ಚುನಾವಣಾ ಆಯೋಗ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...