Homeಚಳವಳಿಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್

ಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್

ಶಿಕ್ಷಣ ಕ್ಷೇತ್ರಕ್ಕೆ ಶೋಮಾ ನೀಡಿದ ಅದ್ಭುತ ಕೊಡುಗೆಗಳು, ಜನರನ್ನು ಅದರಲ್ಲೂ ವಿವಿಧ ಪ್ರದೇಶಗಳ ಮಹಿಳೆಯರನ್ನು ಸಂಘಟಿಸುವ ಅವರ ಶಕ್ತಿಯಿಂದ ಪ್ರಭುತ್ವ ಇವರ ಮೇಲೆ ಕಣ್ಣಿಡುವುದಕ್ಕೆ ಕಾರಣವಾಯಿತು.

- Advertisement -
- Advertisement -

ಹೆಸರಾಂತ ಶಿಕ್ಷಣ ತಜ್ಞೆ, ದಲಿತರ ಮತ್ತು ಮಹಿಳೆಯರ ಹಕ್ಕುಗಳ ಚಳುವಳಿಗಾರ್ತಿ, ಶಿಕ್ಷಕಿ ಮತ್ತು ಹೋರಾಟಗಾರ್ತಿ – ಶೋಮಾ ಸೇನ್ ಇವೆಲ್ಲವೂ ಹೌದು ಮತ್ತು ಇವೆಲ್ಲವಕ್ಕಿಂತ ದೊಡ್ಡ ವ್ಯಕ್ತಿತ್ವದವರು. ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಶೋಮಾ ಸಮಾಜದ ಆಂಚಿನಲ್ಲಿರುವ ದುರ್ಬಲ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವ ಧೃಡ ನಿರ್ಧಾರದೊಂದಿಗೆ ತನ್ನ ಸಂಗಾತಿ ಮತ್ತು ಮಗಳೊಂದಿಗೆ ನಾಗಪುರಕ್ಕೆ ಹೋಗುತ್ತಾರೆ.

ಹೆಚ್ಚು ಕಡಿಮೆ ಮೂರು ದಶಕಗಳ ಕಾಲ ಶೋಮಾ ಗೌರವಾನ್ವಿತ ಶಿಕ್ಷಣ ತಜ್ಞೆಯಾಗಿದ್ದಾರೆ. ವಾರ್ಧ ವಿಶ್ವವಿದ್ಯಾಲಯದ ಮಹಿಳೆಯರ ವಿಭಾಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶೋಮಾ ನಾಗಪುರದ ವಿವಿಧ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದರು. ಬಂಧನಕ್ಕೊಳಗಾದ ಸಮಯದಲ್ಲಿ ಶೋಮಾ ರಾಷ್ಟ್ರಸಂತ್ ತುಕದೋಜಿ ಮಹಾರಾಜ್ ನಾಗಪುರ ವಿಶ್ವವಿದ್ಯಾನಿಲಯದಲ್ಲಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಸಾಹತುಶಾಹಿಯ ನಂತರದ ದಿನಗಳ ಕುರಿತು ಮತ್ತು ಮಹಿಳಾ ಅಧ್ಯಯನದ ಕುರಿತು ಹಲವಾರು ಪ್ರಮುಖ ಲೇಖನಗಳನ್ನು ದಶಕಗಳಿಂದ ಶೋಮಾ ಬರೆದಿದ್ದಾರೆ.

 

ದಲಿತ ಮತ್ತು ಆದಿವಾಸಿ ಮಹಿಳೆಯರ ಮೇಲೆ ನಡೆಯುವ ಹಲವು ವಿಧದ ಸ್ತರದ ದೌರ್ಜನ್ಯಗಳ ಕುರಿತಾಗಿ ಸ್ತ್ರೀವಾದಿ ದೃಷ್ಟಿಕೋನಗಳನ್ನು ಶೋಮಾ ತಮ್ಮ ಬರವಣಿಗೆಯಲ್ಲಿ ಚರ್ಚಿಸಿದ್ದಾರೆ. ಮಹಿಳೆಯರ ರಾಜಕೀಯ ಪ್ರತಿಪಾದನೆ-ಸಮರ್ಥನೆಗಳ ಕುರಿತು ಮತ್ತು ಸ್ತ್ರೀಶಕ್ತಿಯ ಬಗ್ಗೆ ಅವರ ಬರಹಗಳು ಬೆಳಕು ಚೆಲ್ಲಿವೆ. ತಮ್ಮ ಬರಹಗಳ ಜೊತೆಗೆ, ಅವರ ಚಳುವಳಿಯ ಕೆಲಸಗಳು ರಾಜಕೀಯ ಮತ್ತು ಸಾಮಾಜಿಕ ಮಾರ್ಪಾಟಿಗೆ ಅಪಾರ ಕೊಡುಗೆ ನೀಡಿದೆ. 1970ರ ಸಮಯದಲ್ಲಿ ಮುಂಬೈಯಲ್ಲಿ ಓದುವ ಸಮಯದಲ್ಲಿ ಅವರು ವಿದ್ಯಾರ್ಥಿ ಪ್ರಗತಿ ಸಂಘಟನೆಯ ಭಾಗವಾಗಿದ್ದರು. 1980ರಲ್ಲಿ ವಿದ್ಯಾರ್ಥಿಗಳ ಪತ್ರಿಕೆಯಾದ ’ಕಲಂ’ನ ಸಂಪಾದಕರಾಗಿದ್ದರು. ಬಟ್ಟೆ ಉದ್ದಿಮೆಯ ಕಾರ್ಮಿಕರ ಮುಷ್ಕರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾಗಪುರಕ್ಕೆ ಹೋದ ನಂತರ ಶೋಮಾ ಪ್ರಜಾಪ್ರಭುತ್ವ ಹಕ್ಕುಗಳ ಕುರಿತಾದ ತಮ್ಮ ಹೋರಾಟವನ್ನು ಮುಂದುವರಿಸಿದರು. ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್ (ಸಿಪಿಡಿಆರ್ – ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಸಮಿತಿ) ಸಂಘಟನೆಯ ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಸಿಪಿಡಿಆರ್ ಸಂಸ್ಥೆಯ ಮೂಲಕ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಜನರನ್ನು ಸಂಘಟಿಸುತ್ತಿದ್ದರು. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಕಮಿಟಿ ವಿಮೆನ್ಸ್ ಎಗೇನ್ಸ್ಟ್ ಸೆಕ್ಷುಯಲ್ ವಯಲೆನ್ಸ್ ಅಂಡ್ ಸ್ಟೇಟ್ ರಿಪ್ರೆಷನ್ (ಸಿಎವಿಒಡಬ್ಲ್ಯು – ಲೈಂಗಿಕ ದೌರ್ಜನ್ಯ ಮತ್ತು ಪ್ರಭುತ್ವ ದಮನದ ವಿರುದ್ಧ ಮಹಿಳೆಯರ ಸಮಿತಿ) ಮತ್ತು ಸ್ತ್ರೀ ಚೇತನ ಸಂಘಟನೆಗಳ ಭಾಗವಾಗಿದ್ದರು. ಕಮಿಟಿ ವಿಮೆನ್ಸ್ ಎಗೇನ್ಸ್ಟ್ ಸೆಕ್ಷುಯಲ್ ವಯಲೆನ್ಸ್ ಅಂಡ್ ಸ್ಟೇಟ್ ರಿಪ್ರೆಷನ್ ಸಂಘಟನೆಯನ್ನು ಕಟ್ಟಿ ಬೆಳೆಸಿದರು. ಶೋಮಾ ಕಟ್ಟಿದ ಸಂಘಟನೆಯು ಪ್ರಭುತ್ವದ ಹಿಂಸೆಗೆ ಗುರಿಯಾಗಿದ್ದ ಮಣಿಪುರ ಮತ್ತು ಚತ್ತೀಸ್‌ಗಡದ ಪ್ರದೇಶದಲ್ಲಿ ಸತ್ಯಶೋಧನ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಮಹಿಳಾ ರಾಜಕೀಯ ಖೈದಿಗಳಿಗೆ ಕಾನೂನಾತ್ಮಕ ಸಹಾಯ ಒದಗಿಸಲೂ ಶೋಮಾ ನಿರಂತರವಾಗಿ ಕೆಲಸ ಮಾಡಿದರು. ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಮಹಿಳೆಯರ ಪಾತ್ರ ಹೆಸರಿಗಷ್ಟೇ ಅಂತಾಗಬಾರದು, ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣವಿರಬೇಕು ಎಂದು ಶೋಮಾ ಧೃಡವಾಗಿ ನಂಬಿದ್ದರು. ಬ್ರಾಹ್ಮಣ್ಯ – ಪಿತೃಪ್ರಧಾನ ವ್ಯವಸ್ಥೆಯಿಂದ ದುಪ್ಪಟ್ಟು ಶೋಷಣೆಗೊಳಪಟ್ಟಿರುವ ದಲಿತ ಮಹಿಳೆಯರ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಡುತ್ತಿದ್ದರು. ಮುಖ್ಯವಾಹಿನಿಯ ಸ್ತ್ರೀವಾದವು ಜಾತಿಯ ಕುರಿತು ಕುರುಡಾಗಿದೆ, ದಲಿತ ಮಹಿಳೆಯರು ಸಮುದಾಯದ ಒಳಗೆ ಮತ್ತು ಹೊರಗೆ ಅನುಭವಿಸುವ ದೌರ್ಜನ್ಯದ ಕುರಿತು ಮೌನವಾಗಿದೆ ಎಂದು ಶೋಮಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಅರವತ್ತು ವರ್ಷದ ಶೋಮಾರನ್ನು ಪುಣೆಯ ಪೋಲೀಸರು ಜೂನ್ 8, 2018ರಲ್ಲಿ ಬಂಧಿಸುತ್ತಾರೆ. ಪ್ರಭುತ್ವವು ಮಾನವ ಹಕ್ಕುಗಳ ರಕ್ಷಣೆಗೆ ಹೋರಾಡುವವರ ವಿರುದ್ಧ ತೆಗೆದುಕೊಂಡ ಹಿಂಸಾತ್ಮಕ ಕ್ರಮಗಳ ಭಾಗವಾಗಿಯೇ ಈ ಬಂಧನವಾಗುತ್ತದೆ. ಜೈಲಿನಲ್ಲಿನ ಭೇಟಿಗಳ ಕುರಿತು ಶೋಮಾರ ಮಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. ಮಗಳಿಗೆ ಬರೆದ ಪತ್ರವೊಂದರಲ್ಲಿ ಶೋಮಾ “ಅವರು ನನ್ನನ್ನು ಬಂಧಿಸಿರಬಹುದು, ಆದರೆ ನನ್ನ ಆಲೋಚನೆಗಳು ಸ್ವತಂತ್ರವಾಗಿವೆ” ಎಂದು ಬರೆಯುತ್ತಾರೆ. ಈ ಸಾಲುಗಳು ಅವರ ಬತ್ತದ ಉತ್ಸಾಹಕ್ಕೆ ಕನ್ನಡಿಯಾಗಿದೆ. ಜೈಲಿನ ಅಧಿಕಾರಿಗಳು ಶೋಮಾರ ವಯಸ್ಸು, ಅವರ ಅಗತ್ಯಗಳು, ಕೀಲು ನೋವಿನ ಕುರಿತು ಅಸೂಕ್ಷ್ಮವಾಗಿ ವರ್ತಿಸಿದರೂ ಶೋಮಾರ ಉತ್ಸಾಹವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ಶಿಕ್ಷಣ ಕ್ಷೇತ್ರಕ್ಕೆ ಶೋಮಾ ನೀಡಿದ ಅದ್ಭುತ ಕೊಡುಗೆಗಳು, ಜನರನ್ನು ಅದರಲ್ಲೂ ವಿವಿಧ ಪ್ರದೇಶಗಳ ಮಹಿಳೆಯರನ್ನು ಸಂಘಟಿಸುವ ಅವರ ಶಕ್ತಿಯಿಂದ ಪ್ರಭುತ್ವ ಇವರ ಮೇಲೆ ಕಣ್ಣಿಡುವುದಕ್ಕೆ ಕಾರಣವಾಯಿತು. ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದು ಅದನ್ನು ಬದಲಿಸುವ ಉದ್ದೇಶದಿಂದ ಹೋರಾಡುತ್ತಿದ್ದ ಮಹಿಳೆಯ ದನಿಯನ್ನು ಅಡಗಿಸುವ ಸ್ಪಷ್ಟ ಉದ್ದೇಶ ಪಿತೃಪ್ರಧಾನ ಪ್ರಭುತ್ವಕ್ಕಿರುವುದರಲ್ಲಿ ಅನುಮಾನವಿಲ್ಲ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಡಾ. ಕೆ. ಆರ್. ಅಶೋಕ್


ಇದನ್ನೂ ಓದಿ: ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...