Homeಕರ್ನಾಟಕಧಾರವಾಡ: ಆಸ್ಟ್ರೇಲಿಯಾದ ವಶದಲ್ಲಿದ್ದ ಮಕ್ಕಳನ್ನು ಮರಳಿ ಕರೆತರಲಾಗದೆ ತಾಯಿ ಆತ್ಮಹತ್ಯೆ

ಧಾರವಾಡ: ಆಸ್ಟ್ರೇಲಿಯಾದ ವಶದಲ್ಲಿದ್ದ ಮಕ್ಕಳನ್ನು ಮರಳಿ ಕರೆತರಲಾಗದೆ ತಾಯಿ ಆತ್ಮಹತ್ಯೆ

- Advertisement -
- Advertisement -

ಆಸ್ಟ್ರೇಲಿಯಾದ ಕಸ್ಟಡಿಯಲ್ಲಿದ್ದ ತಮ್ಮ ಇಬ್ಬರು ಮಕ್ಕಳನ್ನು ಮರಳಿ ಭಾರತಕ್ಕೆ ಕರೆತರಲು ಆಸ್ಟ್ರೇಲಿಯಾದ ಅಧಿಕಾರಿಗಳ ಜೊತೆ ಹಲವು ತಿಂಗಳಿನಿಂದ ಹೋರಾಟ ನಡೆಸಿದ ಬಳಿಕ ಮನನೊಂದ ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಎನ್‌ಆರ್‌ಐ ಮಹಿಳೆ ಪ್ರಿಯದರ್ಶಿನಿ ಪಾಟೀಲ್(45)ಆತ್ಮಹತ್ಯೆ ಮಾಡಿಕೊಂಡವರು. ಇವರು ನಿವೃತ್ತ ಪ್ರಾಧ್ಯಾಪಕರಾದ ಎಸ್ ಎಸ್ ದೇಸಾಯಿ ಅವರ ಪುತ್ರಿಯಾಗಿದ್ದಾರೆ. ಇವರು ಮೂಲತಃ ಧಾರವಾಡದ ಸಪ್ತಾಪುರದ ನಿವಾಸಿಗಳಾಗಿದ್ದಾರೆ.

ಪ್ರಿಯದರ್ಶಿನಿ ಪಾಟೀಲ್ ಅವರಿಗೆ ಧಾರವಾಡದ ಕಲ್ಯಾಣ ನಗರದ ಟೆಕ್ಕಿ ಲಿಂಗರಾಜ್ ಪಾಟೀಲ್ ಜೊತೆ ವಿವಾಹವಾಗಿತ್ತು. ದಂಪತಿಗೆ ಅಮರ್ತ್ಯ (17) ಮತ್ತು ಅಪರಾಜಿತಾ (13) ಎಂಬ ಇಬ್ಬರು ಮಕ್ಕಳಿದ್ದರು. ಇವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು.

ಅಮರ್ತ್ಯ  ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ. ಮಗನ ಆರೋಗ್ಯ ಹದಗೆಡಲು  ವೈದ್ಯರು ಕಾರಣ ಎಂದು ಆಸ್ಟ್ರೇಲಿಯಾದ ವೈದ್ಯರ ವಿರುದ್ಧ ಪ್ರಿಯಾದರ್ಶಿನಿ ದೂರು ದಾಖಲಿಸಿದ್ದರು. ಆದರೆ  ಆಸ್ಟ್ರೇಲಿಯನ್ ಪ್ರಾಧಿಕಾರವು ದಂಪತಿಗಳು ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಈ ರೀತಿಯಾಗಿದೆ ಎಂದು ಇಬ್ಬರು ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದ ಸ್ಥಳೀಯ ಮಕ್ಕಳ ರಕ್ಷಣಾ ಕಾನೂನುಗಳನ್ನು ಉಲ್ಲೇಖಿಸಿ ಆಸ್ಟ್ರೇಲಿಯಾದ ಅಧಿಕಾರಿಗಳು ಇಬ್ಬರು  ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಅಂದಿನಿಂದ, ಅಮರ್ತ್ಯ ಮತ್ತು ಅಪರಾಜಿತಾ ತಮ್ಮ ಪೋಷಕರಿಂದ ದೂರ ವಾಸಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದರಿಂದಾಗಿ  ಪ್ರಿಯದರ್ಶಿನಿ ಪಾಟೀಲ್ ತನ್ನ ಮಕ್ಕಳನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸಿದ್ದರು. ಆದರೆ ಆಸ್ಟ್ರೇಲಿಯಾ ಮಕ್ಕಳನ್ನು ಬಿಟ್ಟುಕೊಟ್ಟಿಲ್ಲ. ಇದರಿಂದ ಆಕೆ ನೊಂದುಕೊಂಡಿದ್ದರು.

ಆ.18ರಂದು ಪ್ರಿಯದರ್ಶಿನಿ ಬೆಂಗಳೂರಿಗೆ ಬಂದಿದ್ದು, ಬಳಿಕ ಧಾರವಾಡಕ್ಕೆ ಬಸ್ ಬುಕ್ ಮಾಡಿದ್ದರು. ಆದರೆ ಅವರು ಆ ಬಸ್ ಗೆ ಹೋಗದೆ ಇನ್ನೊಂದು ಬಸ್ ಮೂಲಕ ಹುಬ್ಬಳ್ಳಿಗೆ ತೆರಳಿದ್ದಾರೆ. ಹುಬ್ಬಳ್ಳಿಯಲ್ಲಿ ಕೊರಿಯರ್ ಆಫೀಸ್ ಗೆ ತೆರಳಿ ಅಲ್ಲಿ ತನ್ನ ಒಡವೆ, ಹಣಗಳಿದ್ದ ಬ್ಯಾಗನ್ನು ತಂದೆಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತು ಬ್ಯಾಗ್ ನಲ್ಲಿ ಒಂದು ಪತ್ರವನ್ನು ಇಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಅವರು ಮಲಪ್ರಭಾ ನದಿ ಬಳಿ ಹೋಗಿ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಮುಜಾಫರ್‌ನಗರ ಶಾಲಾ ವೀಡಿಯೊ ಜಿ 20 ಸಭೆಯಲ್ಲಿ ತೋರಿಸಿ: ಬಿಜೆಪಿಗೆ ಅಖಿಲೇಶ್ ಯಾದವ್ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...