Homeಅಂತರಾಷ್ಟ್ರೀಯBreaking: ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಬೃಹತ್ ಹಡಗು ಈಗ ಚಲಿಸುತ್ತಿದೆ

Breaking: ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಬೃಹತ್ ಹಡಗು ಈಗ ಚಲಿಸುತ್ತಿದೆ

- Advertisement -
- Advertisement -

ಕಳೆದ ಒಂದು ವಾರದಿಂದ ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ 400 ಮೀಟರ್ ಉದ್ದದ ಬೃಹತ್ ಸರಕು ಹಡಗು ‘ಎವರ್‌ ಗಿವೆನ್’ ಈಗ ಚಲಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರೆಡ್ ಸೀ ಮುಖಾಂತರ ಕಡಿದಾದ ಕಾಲುವೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಜಪಾನ್ ದೇಶದ ಈ ದೈತ್ಯ ಹಡಗಿನಿಂದಾಗಿ ಜಾಗತಿಕ ಜಲಮಾರ್ಗ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದ್ದು, ಬಿಲಿಯನ್‌ಗಟ್ಟಲೆ ಡಾಲರ್ ನಷ್ಟ ಉಂಟಾಗುತ್ತಿದೆ. ಈ ಹಡಗನ್ನು ಆ ಸ್ಥಳದಿಂದ ಬಂದರಿಗೆ ಸಾಗಿಸುವುದು ಹರಸಾಹಸದ ಕೆಲಸ ಎಂದು ಹೇಳಲಾಗಿತ್ತು. ಆದರೆ ಈಗ ಈ ಎಲ್ಲಾ ಅಡೆತಡೆಗಳನ್ನು ದಾಟಿ ಹಡಗು ಮುಂದೆ ಚಲಿಸುತ್ತಿದೆ.

ಈ ಕೆಲಸ ಪೂರ್ಣಗೊಳಿಸಲು ಕೆಲವು ವಾರಗಳೇ ಬೇಕಾಗಬಹುದು ಎಂದು ಎವರ್ ಗಿವನ್ ಹಡಗನ್ನು ಅಲ್ಲಿಂದ ಸಾಗಿಸಲು ಜವಾಬ್ದಾರಿ ನೀಡಲಾಗಿರುವ ಎರಡು ಸಂಸ್ಥೆಗಳ ಪೈಕಿ ಒಂದಾಗಿರುವ ಡೆನ್ಮಾರ್ಕ್‍ನ ಬೊಸ್ಲಾಲಿಸ್ ಸಂಸ್ಥೆಯ ಸಿಒಇಒ ಪೀಟರ್ ಬೆರ್ಡೊವೊಸ್ಕಿ ಹೇಳಿದ್ದರು.

ಇದನ್ನೂ ಓದಿ: ಈಜಿಪ್ಟ್‌ನ ಸುಯೆಜ್ ಕಾಲುವೆಯ ಮಧ್ಯೆ ಸಿಲುಕಿದ ಬೃಹತ್ ಹಡಗು – ಕೋಟ್ಯಂತರ ಡಾಲರ್ ನಷ್ಟ!

ನಂತರ ಸುಯೆಜ್ ಕಾಲುವೆ ಪ್ರಾಧಿಕಾರ ಈ ಅತ್ಯಂತ ಮಹತ್ವದ ಕಾಲುವೆ ಮುಖಾಂತರ ಎಲ್ಲಾ ಸಂಚಾರ ನಿಲ್ಲಿಸಿತ್ತು. ಪ್ರತಿ ದಿನ ಈ ಕಾಲುವೆ ಮೂಲಕ ಸುಮಾರು 50 ಸರಕು ಹಡಗುಗಳು ಹಾದು ಹೋಗುತ್ತವೆ ಹಾಗೂ ಸರಾಸರಿ ಜಾಗತಿಕ ಹಡಗು ಸಂಚಾರದ ಶೇ 30ರಷ್ಟು ಹಡಗುಗಳು ವಾರ್ಷಿಕವಾಗಿ ಈ ಕಾಲುವೆ ಮೂಲಕ ಸಾಗುತ್ತವೆ ಎಂದು ಎನ್‌ಡಿಟಿವಿ ವರದಿ ಮಾಡಿತ್ತು.

ಈಗಾಗಲೇ ಸುಯೆಜ್ ಕಾಲುವೆ ಬಂದ್ ಆಗಿದ್ದರಿಂದ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ನಷ್ಟ ಉಂಟಾಗಿತ್ತು. ಈ ದೈತ್ಯ ಹಡಗು 2.20 ಲಕ್ಷ ಟನ್ ಭಾರವಿದ್ದು, 193.3 ಕಿಮೀ ಉದ್ದವಿರುವ ಕಿರಿದಾದ ಸುಯೆಜ್ ಕಾಲುವೆಯನ್ನು ವಸ್ತುಶಃ ಬ್ಲಾಕ್ ಮಾಡಿತ್ತು. ಈ ಹಾದಿಯಲ್ಲಿ ಸಾಮಾನ್ಯವಾಗಿ ಸಾಗುವ ಸರಕು ನೌಕೆಗಳು ಹೆಚ್ಚಾಗಿ ತೈಲ, ಸಂಸ್ಕರಿತ ತೈಲ, ಆಹಾರ ಧಾನ್ಯ ಸಾಗಿಸುತ್ತವೆಯಲ್ಲದೆ ಪೂರ್ವ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ವ್ಯಾಪಾರ ವಹಿವಾಟಿಗೆ ಮಹತ್ವದ ಕೊಂಡಿಯಾಗಿದೆ.


ಇದನ್ನೂ ಓದಿ: ಬಾಂಗ್ಲಾದೇಶಕ್ಕಾಗಿ ಹೋರಾಡಿ ಜೈಲು ಸೇರಿದ್ದ ಪ್ರಧಾನಿ: RTI ಅಡಿಯಲ್ಲಿ ಮಾಹಿತಿ ಕೋರಿ ಅರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...