Homeರಾಷ್ಟ್ರೀಯಸೇತುವೆ ಕುಸಿತ | ಗುಜರಾತ್ ಸರ್ಕಾರ ಇನ್ನೂ ಸಾರ್ವಜನಿಕರ ಕ್ಷಮೆ ಯಾಚಿಸಿಲ್ಲ: ಪಿ.ಚಿದಂಬರಂ

ಸೇತುವೆ ಕುಸಿತ | ಗುಜರಾತ್ ಸರ್ಕಾರ ಇನ್ನೂ ಸಾರ್ವಜನಿಕರ ಕ್ಷಮೆ ಯಾಚಿಸಿಲ್ಲ: ಪಿ.ಚಿದಂಬರಂ

- Advertisement -
- Advertisement -

ಕಳೆದ ವಾರ ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು 141 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಬಗ್ಗೆ ಕಾಂಗ್ರೆಸ್‌‌ ಸಂಸದ ಪಿ. ಚಿದಂಬರಂ ಮಂಗಳವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ವಾಸ್ತವದಲ್ಲಿ ಸರ್ಕಾರದಿಂದ ಯಾರೂ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಲಿಲ್ಲ ಎಂದು ಸೂಚಿಸಿದ್ದಾರೆ. ಅಲ್ಲದೆ, ಗುಜರಾತ್‌ ಬಿಜೆಪಿಯನ್ನು ಪಿ.ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ.

“…ಅತ್ಯಂತ ಆಘಾತಕಾರಿ ಬೆಳವಣಿಗೆಯೆಂದರೆ, ದುರಂತಕ್ಕೆ ಸರ್ಕಾರದ ಪರವಾಗಿ ಯಾರೂ ಕ್ಷಮೆಯಾಚಿಸಲಿಲ್ಲ. ಘಟನೆಯ ಜವಾಬ್ದಾರಿ ಹೊತ್ತು ಯಾರೂ ರಾಜೀನಾಮೆ ನೀಡಿಲ್ಲ. ಮೋರ್ಬಿ ಸೇತುವೆ ಕುಸಿತವು ಗುಜರಾತ್‌‌ನ ಹೆಸರಿಗೆ ಅವಮಾನ ತಂದಿದೆ” ಎಂದು ಪಿ. ಚಿದಂಬರಂ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೊರ್ಬಿಯ ‘ತೂಗುವ ಸೇತುವೆ’ ಕುಸಿದು 141 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ನೋಟ್‌ ಬ್ಯಾನ್‌ಗೆ 6 ವರ್ಷ: ಮೋದಿ ನೇತೃತ್ವದ BJP ಸರ್ಕಾರ ಅಂದು ಹೇಳಿದ್ದೇನು? ಈಗ ಆಗಿದ್ದೇನು?

ಸರಿಯಾದ ಅನುಮತಿಯಿಲ್ಲದೆ ಸೇತುವೆಯನ್ನು ಪುನಃ ತೆರೆಯಲಾಗಿದ್ದು, ಜನದಟ್ಟಣೆಯಿಂದಾಗಿ ಸೇತುವೆ ಮುರಿದುಹೋಗಿದೆ ಎಂದು ಪ್ರಾಥಮಿಕ ವಿಚಾರಣೆಗಳು ದೃಢಪಡಿಸಿವೆ. ಗೋಡೆ ಗಡಿಯಾರಗಳು ಮತ್ತು ಇ-ಬೈಕ್‌ಗಳನ್ನು ತಯಾರಿಸುವ ಖಾಸಗಿ ಕಂಪನಿಯಾದ ಓರೆವಾ ಗ್ರೂಪ್‌ಗೆ ನವೀಕರಣ ಮತ್ತು ನಿರ್ವಹಣೆಯ ಗುತ್ತಿಗೆ ನೀಡಲಾಗಿತ್ತು.

ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಒರೆವಾ ಸಂಸ್ಥೆ ಮತ್ತು ಮೊರ್ಬಿ ಮುನ್ಸಿಪಾಲಿಟಿ ಅಧಿಕಾರಿಗಳ ನಡುವಿನ ಒಪ್ಪಂದದಲ್ಲಿ ಕೆಲವು ಕಾರ್ಯವಿಧಾನದ ಲೋಪಗಳು ನಡೆದಿದೆ ಎಂದು ಹೇಳಿದ್ದಾರೆ.

ಕಳೆದ ವಾರ ಗುಜರಾತ್ ಸರ್ಕಾರವು ಮೋರ್ಬಿ ಮುನ್ಸಿಪಾಲಿಟಿಯ ಮುಖ್ಯ ಅಧಿಕಾರಿ ಸಂದೀಪ್‌ಸಿನ್ಹ್ ಝಾಲಾ ಅವರನ್ನು ಅಮಾನತುಗೊಳಿಸಿದೆ. ಅಮಾನತು ಆದೇಶದಲ್ಲಿ ಯಾವುದೇ ನಿರ್ದಿಷ್ಟ ಆರೋಪವನ್ನು ಮಾಡಿಲ್ಲ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಹೇಳಿದೆ.

ಇದನ್ನೂ ಓದಿ: ನೋಟ್‌ ಬ್ಯಾನ್‌ ದುರಂತಕ್ಕೆ 6 ವರ್ಷ: ದೇಶ ಮರೆಯಬಾರದ ಚಿತ್ರಗಳಿವು!

ಸೋಮವಾರ ಮಾತನಾಡಿದ್ದ ಮತ್ತೊಬ್ಬ ಕಾಂಗ್ರೆಸ್ ನಾಯಕ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ದುರಂತವು ಬಿಜೆಪಿಯ 27 ವರ್ಷಗಳ ಆಡಳಿತದ ದುರಾಡಳಿತವನ್ನು ಬಹಿರಂಗಪಡಿಸಿದೆ…” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರದಿಂದ ವರದಿಯನ್ನು ಕೇಳಿದ್ದು, ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ನ್ಯಾಯಾಲಯವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬಯಸಿದ್ದು, ನವೆಂಬರ್ 14 ರೊಳಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದೆ. ಅಂದೆ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...