Homeಮುಖಪುಟನಕ್ಸಲರನ್ನು ಮುಖ್ಯವಾಹಿನಿಗೆ ಬರಮಾಡಿಕೊಂಡರೆ ಸಾಲದು, ನಕ್ಸಲಿಸಂಗೆ ಕಾರಣವಾದ ಸಮಸ್ಯೆಗಳನ್ನು ಪರಿಹರಿಸಬೇಕು : ಶಾಂತಿಗಾಗಿ ನಾಗರಿಕ ವೇದಿಕೆ

ನಕ್ಸಲರನ್ನು ಮುಖ್ಯವಾಹಿನಿಗೆ ಬರಮಾಡಿಕೊಂಡರೆ ಸಾಲದು, ನಕ್ಸಲಿಸಂಗೆ ಕಾರಣವಾದ ಸಮಸ್ಯೆಗಳನ್ನು ಪರಿಹರಿಸಬೇಕು : ಶಾಂತಿಗಾಗಿ ನಾಗರಿಕ ವೇದಿಕೆ

- Advertisement -
- Advertisement -

ನಕ್ಸಲರನ್ನು ಮುಖ್ಯವಾಹಿನಿಗೆ ಬರಮಾಡಿಕೊಂಡರೆ ಸಾಲದು, ನಕ್ಸಲಿಸಂಗೆ ಕಾರಣವಾದ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ತೋರಬೇಕು ಎಂದು ಆರು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ ‘ಶಾಂತಿಗಾಗಿ ನಾಗರಿಕ ವೇದಿಕೆ’ ಆಗ್ರಹಿಸಿತು.

ಬೆಂಗಳೂರು ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖರಾದ ಬಿ.ಟಿ ಲಲಿತಾ ನಾಯಕ್ “ನಕ್ಸಲ್ ಸಮಸ್ಯೆ ಮುಕ್ತಾಯ, ಮುಕ್ತಾಯ ಎಂಬ ಮಾತುಗಳು ಬಹಳ ಕೇಳುತ್ತಿವೆ. ಈ ವಿದ್ಯಮಾನದಿಂದಾಗಿ ನಕ್ಸಲಿಯ ಮಾದರಿಯ ಹೋರಾಟ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಒಂದು ರೀತಿಯಲ್ಲಿ ಸಮಾರೋಪಗೊಂಡಿರುವುದು ವಾಸ್ತವ. ಆದರೆ, ನಕ್ಸಲಿಯರ ಸಮಸ್ಯೆಗಳು ಮುಕ್ತಾಯಗೊಂಡಿಲ್ಲ. ನಕ್ಸಲರು ಎತ್ತಿರುವ ಮಲೆನಾಡಿನ ಜನರ ಬದುಕಿನ ಸಮಸ್ಯೆಗಳಾವುವೂ ಪರಿಹಾರ ದಿಕ್ಕಿನತ್ತ ಮುಖಮಾಡಿಲ್ಲ ಎಂದು ಹೇಳಿದರು.

ನಕ್ಸಲಿಯರನ್ನು ಮುಖ್ಯವಾಹಿನಿಗೆ ಬರಮಾಡಿಕೊಳ್ಳುವುದರಲ್ಲಿನ ಮೊದಲ ಘಟ್ಟ ಮಾತ್ರ ಪೂರ್ಣಗೊಂಡಿದೆ. ಅವರನ್ನು ಕಾಡಿನಿಂದ ಹೊರತರಲಾಗಿದೆ. ಆದರೆ, ಅವರಿನ್ನು ನಾಡಿಗೆ ತಲುಪಿಲ್ಲ, ಜೈಲಿಗೆ ಹೋಗಿದ್ದಾರೆ. ಅನೇಕ ಗಂಭೀರ ಆರೋಪಗಳಡಿ ಕೇಸುಗಳನ್ನು ಎದುರಿಸಬೇಕಿದೆ. ಮುಂಡಗಾರು ಲತಾ ಒಬ್ಬರ ಮೇಲೆಯೇ 84 ಪ್ರಕರಣಗಳಿವೆ. ಕರ್ನಾಟಕ ಮಾತ್ರವಲ್ಲದೆ ಕೇರಳದಲ್ಲೂ ದೊಡ್ಡ ಪ್ರಮಾಣದಲ್ಲಿ ಕೇಸುಗಳಿವೆ. ಮೊದಲು ಅವರಿಗೆ ಈ ಎಲ್ಲಾ ಕೇಸುಗಳಲ್ಲಿ ಜಾಮೀನು ಸಿಗಬೇಕು. ಆಮೇಲೆ ಇವೆಲ್ಲವುಗಳ ಕುರಿತು ಕುರಿತು ವಿಚಾರಣೆ ನಡೆದು ಇತ್ಯರ್ಥಗೊಳ್ಳಬೇಕು ಎಂದು ತಿಳಿಸಿದರು.

ನಕ್ಸಲರನ್ನು ಕಾಡಿನಿಂದ ಹೊರತಂದಿದ್ದಕ್ಕಿಂತಲೂ ಹೆಚ್ಚಿನ ಕಷ್ಟ ಅವರನ್ನು ಜೈಲಿನಿಂದ ಹೊರ ತರುವ ಕೆಲಸದಲ್ಲಿ ಅಡಗಿದೆ. ಕಾಡಿನಿಂದ ಹೊರ ಕರೆತುವಲ್ಲಿ ನಾಗರಿಕ ವೇದಿಕೆ ಪ್ರಧಾನ ಪಾತ್ರವಹಿಸಿತ್ತು. ಆದರೆ, ಅವರನ್ನು ಜೈಲಿನಿಂದ ಹೊರತರುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಬೇಕಿದೆ. ಸರ್ಕಾರ ಕೊಟ್ಟ ಮಾತಿನಂತೆ ಅವರಿಗೆ ಕನಿಷ್ಠ ಜಾಮೀನು ಸಿಗುವಂತೆ ಮಾಡುವುದೇ ಎಂಬ ಪ್ರಶ್ನೆ ಇದೆ. ಅದನ್ನು ಮಾಡಿದಾಗ ಮಾತ್ರವೇ ಈ ಸಮಸ್ಯೆ ಮುಕ್ತಾಯದ ಬೆಳಕು ಮೂಡಿದಂತಾಗುತ್ತದೆ ಎಂದು ಹೇಳಿದರು.

ವೇದಿಕೆಯು ಸರ್ಕಾರದ ಮುಂದೆ ಈ ಕೆಳಗಿನ ಬೇಡಿಕೆಗಳನ್ನು ಇಟ್ಟಿದೆ. ಕೊಟ್ಟ ಮಾತಿನಂತೆ ಇವುಗಳನ್ನು ಈಡೇರಿಸಲು ಆಗ್ರಹಿಸಿದೆ. 

  • ಈಗ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಬಂದಿರುವ 6 ಜನ ನಕ್ಸಲಿಯರಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಲು ಮತ್ತು ವಿಚಾರಣೆಯನ್ನು ಸಮರ್ಥವಾಗಿ ಪೂರೈಸಿಕೊಳ್ಳಲು ಸೂಕ್ತ ಕಾನೂನು ನೆರವಿನ ವ್ಯವಸ್ಥೆ ಆಗಬೇಕು.
  • 7-8ವರ್ಷಗಳಿಂದ ಜೈಲಿನಲ್ಲಿ ನರಳುತ್ತಿರುವ ಕನ್ಯಾಕುಮಾರಿ ಮತ್ತು ಇತರರ ಮೊಕದ್ದಮೆಗಳು ಕೂಡಲೇ ಬಗೆಹರಿದು ಹೊರಬರಲು ಸಂಪೂರ್ಣ ಸಹಕಾರ ನೀಡಬೇಕು.
  • ಕರ್ನಾಟಕ ಸರ್ಕಾರ ಅಧಿಕೃತವಾಗಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳಿಗೆ ಪತ್ರ ಬರೆದು ಅವರ ಕಡೆಯಿಂದಲೂ ಮಾಜಿ ನಕ್ಸಲರನ್ನು ಜೈಲಿನಿಂದ ಮುಖ್ಯವಾಹಿನಿಗೆ ತರುವ ಪ್ರಕ್ರಿಯೆಗೆ ಸಹಕಾರ ದೊರಕಿಸಿಕೊಳ್ಳಬೇಕು.
  • ಈಗಾಗಲೇ ಮುಖ್ಯವಾಹಿನಿಗೆ ಬಂದಿರುವ ಮಾಜಿ ನಕ್ಸಲಿಯರನ್ನು ಕರೆಸಿ ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.
  • ಈಗ ಬಡಜನರ ಬದುಕಿಗೆ ಸಂಬಂಧಪಟ್ಟ 18 ಹಕೊತ್ತಾಯಗಳನ್ನು ಸವಿಸ್ತಾರವಾಗಿ ಚರ್ಚೆಮಾಡಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ರಚನಾತ್ಮಕ ಕೆಲಸಗಳಿಗೆ ಚಾಲನೆ ಪಡೆಯಬೇಕು. ಇದಕ್ಕಾಗಿ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿಶೇಷ ಸಭೆಗಳನ್ನು ಕರೆದು, ಚರ್ಚಿಸಿ, ಅಗತ್ಯ ಕ್ರಮಗಳ ಪ್ರಕ್ರಿಯೆ ಪ್ರಾರಂಭಿಸಬೇಕು.
  • ವಿಕ್ರಂ ಗೌಡ ಹತ್ಯಾ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು.

ಜನವರಿ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎಲ್ಲಾ ಸವಾಲುಗಳನ್ನು ಮತ್ತು ಪರಿಹಾರ ಕ್ರಮಗಳನ್ನು ಅವರ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಕೂಡ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲು ಸೂಚನೆ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಈ ಎಲ್ಲಾ ವಿಚಾರಗಳ ಸುತ್ತ ಚುರುಕು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದೇವೆ. ಆದರೆ, ಆಳವಾದ ಆತಂಕವಂತೂ ಇದ್ದೇ ಇದೆ ಎಂದು ವೇದಿಕೆ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆಯ ಪ್ರಮುಖರಾದ ವಿ.ಎಸ್‌.ಶ್ರೀಧರ್, ನಗರಗೆರೆ ರಮೇಶ್, ಎನ್‌.ವೆಂಕಟೇಶ್, ವಿಜಯಮ್ಮ, ನೂರ್ ಶ್ರೀಧರ್ ಮತ್ತು ತಾರಾ ರಾವ್ ಇದ್ದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣ | ಬಂಧಿತ ಎಲ್ಲಾ ಆರೋಪಿಗಳಿಗೆ ಜಾಮೀನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ನಲ್ಲಿ ಅತಿ ವೇಗದ ರೈಲುಗಳ ನಡುವೆ ಡಿಕ್ಕಿ; ಕನಿಷ್ಠ 46 ಮಂದಿ ಸಾವು

ಸ್ಪೇನ್‌ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎರಡು ಅತಿ ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್‌ನ ಎಬಿಸಿ (ಎಬಿಸಿ) ಸುದ್ದಿ ಸಂಸ್ಥೆ ವರದಿ ಮಾಡಿದೆ....

ಇಸ್ರೇಲ್ ಚುನಾವಣೆಯಲ್ಲಿ ಸಿಗದ ಬಹುಮತ; ಆದರೂ ಗೆಲುವಿನ ಹಕ್ಕು ಮಂಡಿಸಿದ ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಜೆರುಸಲೇಮ್‌ನಲ್ಲಿರುವ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಹೂದಿ ಮತ್ತು ಝಿಯೋನಿಸ್ಟ್...

ದೆಹಲಿ: 2020ರ ಮುಸ್ಲಿಂ ವಿರೋಧಿ ಹಿಂಸಾಚಾರದಲ್ಲಿ 22 ವರ್ಷದ ಯುವಕನ ಹತ್ಯೆ: ಐವರು ಹಿಂದುತ್ವವಾದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಸಂದರ್ಭದಲ್ಲಿ 22 ವರ್ಷದ ಮುಸ್ಲಿಂ ಯುವಕ ಮೋನಿಷ್  ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಐವರು ಹಿಂದುತ್ವವಾದಿ ಪುರುಷರಿಗೆ ವಿಧಿಸಲಾಗಿದ್ದ ಏಳು ವರ್ಷಗಳ...

ಅರ್ನಬ್ ಚಂಡಮಾರುತ: ಆಂಧ್ರಪ್ರದೇಶದಲ್ಲಿ ಮೂವರ ಸಾವು; ಹಲವು ಮನೆಗಳಿಗೆ ಹಾನಿ

ಅರ್ನಬ್ ಚಂಡಮಾರುತವು ಆಂಧ್ರಪ್ರದೇಶದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಚಂಡಮಾರುತದಿಂದಾಗಿ ಮೂವರು ಮೃತಪಟ್ಟಿದ್ದು, 31 ಮನೆಗಳು ಹಾನಿಗೀಡಾಗಿವೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಚಂಡಮಾರುತವು ಪುದುಚೇರಿಯ ಯಾನಂ ಸಮೀಪದ...

ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಫಲಿತಾಂಶ: ವಾರಣಾಸಿಯ ಎರಡೂ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷಕ್ಕೆ ಭರ್ಜರಿ ಗೆಲುವು

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಗಮನಾರ್ಹ ಸಾಧನೆ ಮಾಡಿದೆ. ವಾರಣಾಸಿ ಶಿಕ್ಷಕರ...

ಎಂಎಲ್‌ಸಿ ಚುನಾವಣೆ ಫಲಿತಾಂಶ: ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಜಯ; ಕಾಂಗ್ರೆಸ್‌ಗೆ ಭಾರೀ ಹಿನ್ನಡೆ

ಕರ್ನಾಟಕ ವಿಧಾನ ಪರಿಷತ್ತಿನ ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾಗಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ, ಅದರ...

ಥೇಣಿ ಉಪಜೈಲಿನಿಂದ 17 ವಿಚಾರಣಾಧೀನ ಕೈದಿಗಳ ಪರಾರಿ ಪ್ರಕರಣ; ಡ್ರೋನ್ ತಂತ್ರಜ್ಞಾನದ ನೆರವಿನಿಂದ 13 ಮಂದಿ ಸೆರೆ

ತಮಿಳುನಾಡಿನ ಥೇಣಿ ಜಿಲ್ಲಾ ಜೈಲಿನಿಂದ 17 ಕೈದಿಗಳು ಪರಾರಿಯಾದ ಒಂದು ದಿನದೊಳಗೆ, ಮಂಗಳವಾರ ಸಂಜೆಯ ವೇಳೆಗೆ ತಮಿಳುನಾಡು ಪೊಲೀಸರು ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಅವರ ಪೈಕಿ 13 ಮಂದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ವಲಯದ...

ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರ ಹೆಸರು ಕಟ್‌: ಎಸ್‌ಐಆರ್‌ ಬಳಿಕ ಅರ್ಧದಷ್ಟು ಮತದಾರರು ಪಟ್ಟಿಯಿಂದ ಹೊರಕ್ಕೆ 

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಬರೋಬ್ಬರಿ 46.88 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಂದರೆ, ಎಸ್‌ಐಆರ್‌ ಆರಂಭಕ್ಕೂ ಮುನ್ನ ನಗರದಲ್ಲಿದ್ದ ಒಟ್ಟು...

ಉತ್ತರ ಪ್ರದೇಶ| ದಲಿತ ಎಂಬಿಬಿಎಸ್ ವಿದ್ಯಾರ್ಥಿಯ ಸಾವು ಪ್ರಕರಣ; ಎಫ್‌ಐಆರ್ ದಾಖಲು

ಅಕ್ಟೋಬರ್ 25 ರಂದು ಪ್ರತಾಪಗಢದ ಡಾ. ಸೋನೆಲಾಲ್ ಪಟೇಲ್ ವೈದ್ಯಕೀಯ ಕಾಲೇಜು ಆವರಣದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ದಲಿತ ಎಂಬಿಬಿಎಸ್ ವಿದ್ಯಾರ್ಥಿಯ ಕುಟುಂಬವು, ಸೋಮವಾರ ತಡರಾತ್ರಿ ಆತನ ಮೃತದೇಹವನ್ನು ಹೊತ್ತುಕೊಂಡು ತಮ್ಮ ಊರಾದ...

SIR ಬಳಿಕವೂ ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಬಿಜೆಪಿ ಸದಸ್ಯನ ಹೆಸರು!

ಕರ್ನಾಟಕದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದೆ. ಈ ನಡುವೆ ಬಿಜೆಪಿ ಸದಸ್ಯ ಉದಯ್ ಕುಮಾರ್ ಹಾಗೂ ಅವರ ಪತ್ನಿ ಬಿಂದು...