Homeಮುಖಪುಟಹಸು ತಬ್ಬಿದರೆ ಚರ್ಮಗಂಟು ರೋಗ ಸಮಸ್ಯೆ ಬಗೆಹರಿವುದೇ?: ಕಾಂಗ್ರೆಸ್ ಪ್ರಶ್ನೆ

ಹಸು ತಬ್ಬಿದರೆ ಚರ್ಮಗಂಟು ರೋಗ ಸಮಸ್ಯೆ ಬಗೆಹರಿವುದೇ?: ಕಾಂಗ್ರೆಸ್ ಪ್ರಶ್ನೆ

ಸಾಮಾಜಿಕ ಜಾಲತಾಣಗಳಲ್ಲಿ Cow Hug Day ಕುರಿತಾದ ಹತ್ತಾರು ಮೀಮ್‌ಗಳು, ವಿಡಿಯೋಗಳು ಹರಿದಾಡುತ್ತಿವೆ.

- Advertisement -
- Advertisement -

ಫೆಬ್ರುವರಿ 14 ರ ಪ್ರೇಮಿಗಳ ದಿನದಂದು “ಹಸು ತಬ್ಬಿಕೊಳ್ಳುವ ದಿನ” ಆಚರಿಸಲು ಕೇಂದ್ರೀಯ ಪಶು ಕಲ್ಯಾಣ ಮಂಡಳಿ ಮನವಿ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದೆ.

ಚರ್ಮಗಂಟು ರೋಗ ನಿವಾರಣೆಯ ಕುರಿತು ಗಂಭೀರ ಕ್ರಮ ಕೈಗೊಳ್ಳದ ಬಿಜೆಪಿ ಸರ್ಕಾರ Cow Hug Day ಆಚರಿಸಲು ಹೊರಟಿದ್ದು ಪರಮ ಹಾಸ್ಯ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಚರ್ಮಗಂಟು ರೋಗದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಈ ರೋಗದಿಂದ ಇರುವರೆಗೂ 30 ಸಾವಿರಕ್ಕೂ ಹೆಚ್ಚು ಗೋವುಗಳು ಸಾವನಪ್ಪಿವೆ. ರೋಗಕ್ಕೆ ಲಸಿಕೆ ಇಲ್ಲ, ರೈತರಿಗೆ ಪರಿಹಾರವಿಲ್ಲ. ಇಂತಹ ಸಂದರ್ಭದಲ್ಲಿ ಹಸು ತಬ್ಬಿದರೆ ಈ ಸಮಸ್ಯೆ ಬಗೆಹರಿವುದೇ ಎಂದು ಪ್ರಶ್ನಿಸಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ Cow Hug Day ಕುರಿತಾದ ಹತ್ತಾರು ಮೀಮ್‌ಗಳು, ವಿಡಿಯೋಗಳು ಹರಿದಾಡುತ್ತಿವೆ. ಆ ಮೂಲಕ ಕೇಂದ್ರೀಯ ಪಶು ಕಲ್ಯಾಣ ಮಂಡಳಿ ನಡೆಯನ್ನು ಟ್ರೋಲ್ ಮಾಡಲಾಗಿದೆ.

ಇದನ್ನೂ ಓದಿ: ಪ್ರೇಮಿಗಳ ದಿನ ‘ಹಸು ತಬ್ಬಿಕೊಳ್ಳಿ’: ಹೊಸ ಆಚರಣೆಗೆ ಕೇಂದ್ರೀಯ ಪಶು ಕಲ್ಯಾಣ ಮಂಡಳಿ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...