Homeಮುಖಪುಟರದ್ದಾದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲು!; ರಾಜ್ಯ ಮತ್ತು ಕೇಂದ್ರಾಡಳಿತಕ್ಕೆ ಸುಪ್ರೀಂ ನೋಟಿಸ್‌‌

ರದ್ದಾದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲು!; ರಾಜ್ಯ ಮತ್ತು ಕೇಂದ್ರಾಡಳಿತಕ್ಕೆ ಸುಪ್ರೀಂ ನೋಟಿಸ್‌‌

- Advertisement -
- Advertisement -

2015 ರಲ್ಲಿ ರದ್ದುಗೊಂಡಿದ್ದ ಐಟಿ ಕಾಯಿದೆಯ ‘ಸೆಕ್ಷನ್ 66 ಎ’ ಅಡಿಯಲ್ಲಿ ದಾಖಲಾದ ಪ್ರಕರಣಗಳ ನೋಂದಣಿಗೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್‌ ಸೋಮವಾರ ನೋಟಿಸ್‌ ನೀಡಿದೆ. ಸುಪ್ರೀಂಕೋರ್ಟ್‌‌ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೂ ನೋಟಿಸ್‌‌ ನೀಡಿದ್ದು ನಾಲ್ಕು ವಾರಗಳಲ್ಲಿ ಉತ್ತರಗಳನ್ನು ಕೇಳಲಾಗಿದೆ.

“ನ್ಯಾಯಾಂಗವನ್ನು ನಾವು ಪ್ರತ್ಯೇಕವಾಗಿ ನೋಡುತ್ತೇವೆ … ಮತ್ತು ಈ ವಿಷಯವು ನ್ಯಾಯಾಲಯಗಳಿಗೆ ಮಾತ್ರವಲ್ಲದೆ ಪೊಲೀಸರಿಗೂ ಸಂಬಂಧಿಸಿದೆ. ಹಾಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಲಾಗುವುದು” ಎಂದು ನ್ಯಾಯಮೂರ್ತಿಗಳಾದ ಆರ್‌ಎಫ್‌ ನಾರಿಮನ್ ಮತ್ತು ಬಿ.ಆರ್. ಗವಾಯಿ ಹೇಳಿದ್ದಾರೆ.

“ಇಂದಿನಿಂದ ನಾಲ್ಕು ವಾರಗಳ ಅವಧಿಯಲ್ಲಿ ಇದನ್ನು ಮಾಡಬೇಕಾಗಿದೆ. ನಾಲ್ಕು ವಾರಗಳ ನಂತರ ವಿಷಯವನ್ನು ಪಟ್ಟಿ ಮಾಡಿ” ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: ಪೆಗಾಸಸ್ ಹಗರಣ: ಎಸ್‌ಐಟಿ ತನಿಖೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ

ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಎಂಬ ಎನ್‌ಜಿಒ – ಸೆಕ್ಷನ್ 66 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸದಂತೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಸಲಹೆ ನೀಡುವಂತೆ ಒಕ್ಕೂಟ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ನ್ಯಾಯಾಲಯವು ಆಲಿಸುತ್ತಿತ್ತು.

ಒಕ್ಕೂಟ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರದ್ದಾದ ಕಾನೂನಿನ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಬೇಡಿ ಮತ್ತು ಅಂತಹ ಯಾವುದೇ ಪ್ರಕರಣವನ್ನು ಹಿಂಪಡೆಯಬೇಕು ಎಂದು ತಮ್ಮ ಪೊಲೀಸ್ ಪಡೆಗಳಿಗೆ ಸೂಚನೆ ನೀಡಿದ ವಾರಗಳ ನಂತರ ಸುಪ್ರೀಂಕೋರ್ಟ್‌ ಈ ನೋಟಿಸ್‌‌ ನೀಡಿದೆ.

ಕಳೆದ ತಿಂಗಳ ಗೃಹ ಸಚಿವಾಲಯದ ಅಧಿಸೂಚನೆಗೆ ಸುಪ್ರೀಂಕೋರ್ಟ್ ಆಘಾತ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದ ನಂತರ 1,000 ಕ್ಕೂ ಹೆಚ್ಚು ಪ್ರಕರಣಗಳನ್ನು, ರದ್ದಾದ ಕಾನೂನಿನ ಅಡಿಯಲ್ಲಿ ಹೊಸದಾಗಿ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ನಮ್ಮ ವರದಿಗೆ ಸರ್ಕಾರ ಹೆದರಿದೆ, ಆದರೆ ಐಟಿ ದಾಳಿಗೆ ನಾವು ಬಗ್ಗುವುದಿಲ್ಲ: ದೈನಿಕ್ ಭಾಸ್ಕರ್

ಇದು ಆಘಾತಕಾರಿಯಾಗಿದ್ದು, ನಾವಿದಕ್ಕೆ ನೋಟಿಸ್‌‌ ಜಾರಿ ಮಾಡುತ್ತಿದ್ದೇವೆ. ಅತ್ಯಾಶ್ಚರ್ಯವಾಗಿದ್ದು, ನಡೆಯುತ್ತಿರುವುದು ಭಯಾನಕವಾಗಿದೆ ಎಂದು ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ಹೇಳಿದೆ.

ರದ್ದಾದ ಕಾನೂನನ್ನು ಬಳಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.

2012 ರಲ್ಲಿ ಶಿವಸೇನೆ ಸಂಸ್ಥಾಪಕ ಬಾಲ್ ಠಾಕ್ರೆ ನಿಧನದ ನಂತರ ನಗರವನ್ನು ಬಂದ್‌ ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಕ್ಕೆ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ಮುಂಬೈನ ಕಾನೂನು ವಿದ್ಯಾರ್ಥಿನಿ ಶ್ರೇಯಾ ಸಿಂಘಾಲ್‌‌ ಕೋರ್ಟ್‌‌ಗೆ ಮನವಿ ನೀಡಿದ್ದರು. ನಂತರ, ಸೆಕ್ಷನ್ 66 ಎ ಅನ್ನು ಮಾರ್ಚ್ 24, 2015 ರಂದು ರದ್ದುಗೊಳಿಸಲಾಯಿತು.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರಕ್ಕೆ ಹಿನ್ನಡೆ : ಐಟಿ ರೂಲ್ಸ್‌ ವಿರುದ್ಧದ ಅರ್ಜಿಗಳ ವಿಚಾರಣೆ ತಡೆಗೆ ಕೋರ್ಟ್ ನಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರಧ್ವಜ ಹಾರಿಸದ ಮನೆಗಳ ಫೋಟೋ ತೆಗೆದುಕೊಳ್ಳಿ: ಉತ್ತರಾಖಾಂಡ್‌ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿಕೆ

0
“75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಾರ ಮನೆಯ ಮೇಲೆ ತಿರಂಗ ಧ್ವಜಗಳಿರುವುದಿಲ್ಲವೋ ಆ ಮನೆಯ ಫೋಟೋಗಳನ್ನು ತೆಗೆದುಕೊಳ್ಳಿ” ಎಂದು ಉತ್ತರಾಖಂಡ ಬಿಜೆಪಿ ಘಟಕದ ಮುಖ್ಯಸ್ಥ ತನ್ನ ಬೆಂಬಲಿಗರಿಗೆ ಸೂಚನೆ ನೀಡಿರುವುದಾಗಿ ‘ಟೈಮ್ಸ್ ಆಫ್...