Homeಮುಖಪುಟವಲಸೆ ಕಾರ್ಮಿಕರ ರೈಲು ಪ್ರಯಾಣದ ಶುಲ್ಕ ಪಾವತಿಗೆ ಕೇಂದ್ರದ ಸೂಚನೆ: ವಿರೋಧ ಪಕ್ಷಗಳ ಆಕ್ಷೇಪ

ವಲಸೆ ಕಾರ್ಮಿಕರ ರೈಲು ಪ್ರಯಾಣದ ಶುಲ್ಕ ಪಾವತಿಗೆ ಕೇಂದ್ರದ ಸೂಚನೆ: ವಿರೋಧ ಪಕ್ಷಗಳ ಆಕ್ಷೇಪ

- Advertisement -
- Advertisement -

ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಲು ರೈಲು ಪ್ರಯಾಣದ ಶುಲ್ಕವನ್ನು ವಿಧಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ಭಾರೀ ಟೀಕಾಪ್ರಹಾರ ಮಾಡಿವೆ.

ಕೊರೊನಾ ವೈರಸ್ ಅನ್ನು ಎದುರಿಸಲು ದೇಶಾದ್ಯಂತದ ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲಾಗುತ್ತಿದ್ದಂತೆ, ಕೇಂದ್ರ ಸರ್ಕಾರವು ಶುಕ್ರವಾರದಿಂದ ವಿಶೇಷ ರೈಲುಗಳನ್ನು ಓಡಿಸಲು ಪ್ರಾರಂಭಿಸಿದೆ. ಹಲವಾರು ರಾಜ್ಯಗಳು ರೈಲು ಪ್ರಯಾಣಕ್ಕೆ ಶುಲ್ಕ ವಿಧಿಸಬಾರದು ಎಂದು ಕೇಂದ್ರದ ಬಳಿ ಬೇಡಿಕೆ ಇಟ್ಟಿದ್ದವು, ಆದರೆ ರಾಜ್ಯಗಳ ಬೇಡಿಕೆಗೆ ವಿರುದ್ಧವಾಗಿ, ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ರೈಲು ಶುಲ್ಕ ವಿಧಿಸುತ್ತಿದೆ.

ಕೇಂದ್ರವು ಟಿಕೆಟ್ ನೀಡುವ ಮತ್ತು ಶುಲ್ಕವನ್ನು ಸಂಗ್ರಹಿಸುವ ಉಸ್ತುವಾರಿಯನ್ನು ರಾಜ್ಯ ಸರ್ಕಾರಗಗಳಿಗೆ ವಹಿಸಿದೆ. ಅನೇಕ ರಾಜ್ಯಗಳು, ಅದರಲ್ಲೂ ಹೆಚ್ಚಾಗಿ ಪ್ರತಿಪಕ್ಷಗಳು ಆಳುವ ರಾಜ್ಯಗಳು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸುತ್ತಿವೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ “ಮನೆಗೆ ಹಿಂದಿರುಗುವ ವಲಸಿಗರನ್ನು ಬಿಜೆಪಿ ಸರ್ಕಾರವು ರೈಲು ಪ್ರಯಾಣಕ್ಕೆ ಹಣ ಪಾವತಿಸಲು ಕೇಳಿಕೊಳ್ಳುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಆಡಳಿತಗಾರ ಸರ್ಕಾರವು ಬಂಡವಾಳಶಾಹಿಗಳು ಹಾಗೂ ಉದ್ಯಮಿಗಳಿಗೆ ಸಾಲವನ್ನು ಮನ್ನಾ ಮಾಡುತ್ತದೆ ಮತ್ತು ಶ್ರೀಮಂತರನ್ನು ಬೆಂಬಲಿಸುತ್ತದೆ ಎಂಬುದಕ್ಕೆ ಇಂದು ಸ್ಪಷ್ಟವಾಗಿದೆ. ದುರಂತದ ಸಮಯದಲ್ಲಿ ಶೋಷಣೆ ಮಾಡುವುದು ಹಣದಾಸೆದಾರರ ಕೆಲಸವೇ ಹೊರತು ಸರ್ಕಾರದ್ದಲ್ಲ.”ಎಂದು ಟ್ವೀಟ್ ಮಾಡಿದ್ದಾರೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ “ನಾವು ರೈಲು ಪ್ರಯಾಣಕ್ಕೆ ಹಣ ಪಾವತಿಸಲು ವಲಸಿಗ ಕಾರ್ಮಿಕರನ್ನು ಕೇಳುವುದಿಲ್ಲ. ಅವರು ಈಗಾಗಲೇ ಬಹಳ ತೊಂದರೆಯಲ್ಲಿದ್ದಾರೆ. ಕೇಂದ್ರವು ಅವರ ಹಣ ಪಾವತಿಸಲು ನಿರಾಕರಿಸಿದರೆ ನಮ್ಮ ಜಾರ್ಖಂಡ್ ಸರ್ಕಾರವು ಹಣ ಒದಗಿಸಲು ಬೇರೆ ಮಾರ್ಗಗಳನ್ನು ಹುಡುಕುತ್ತದೆ ಆದರೆ ವಲಸಿಗರಿಗೆ ಹಣ ಪಾವತಿಸಲು ನಾವು ಖಂಡಿತವಾಗಿಯೂ ಕೇಳುವುದಿಲ್ಲ” ಎಂದು ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಸಾರ್ವಕಾಲಿಕ ಕಡಿಮೆ ಇರುವ ಸಮಯದಲ್ಲಿ ಕೇಂದ್ರವು ರಾಜ್ಯಗಳಿಗೆ ಆರ್ಥಿಕ ಒತ್ತಡವನ್ನುಂಟುಮಾಡುತ್ತಿದೆ ಎಂದು ಚತ್ತೀಸ್‌ಘಡ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 


ವಿಡಿಯೊ ನೋಡಿ: ನಿಮ್ಮ ಸುತ್ತಲಿರುವ ಕಾರ್ಮಿಕರಿಗೆ ಸಹಾಯ ಮಾಡಲು ನಿಮಗೊಂದು ಅವಕಾಶ.‌ ಹೀಗೆ ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...