Homeಮುಖಪುಟನಿರುದ್ಯೋಗ, ಆರ್ಥಿಕ ಕುಸಿತದಿಂದ ದೇಶದ ಕೋಟ್ಯಾಂತರ ಹಿಂದೂಗಳು ಕಷ್ಟ ಅನುಭವಿಸುತ್ತಿದ್ದಾರೆ. ಕೇಜ್ರಿವಾಲ್‌

ನಿರುದ್ಯೋಗ, ಆರ್ಥಿಕ ಕುಸಿತದಿಂದ ದೇಶದ ಕೋಟ್ಯಾಂತರ ಹಿಂದೂಗಳು ಕಷ್ಟ ಅನುಭವಿಸುತ್ತಿದ್ದಾರೆ. ಕೇಜ್ರಿವಾಲ್‌

- Advertisement -
- Advertisement -

ದೇಶಾದ್ಯಂತ ನಡೆಯುವ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟವನ್ನು ಬೆಂಬಲಿಸಿರುವ ದೆಹಲಿ ಮುಖ್ಯಮಂತ್ರಿ, ಪೌರತ್ವ ಕಾಯ್ದೆ ಯಾವುದೇ ಕಾರಣಕ್ಕೂ ಬೇಡ ಎಂದು ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಆಗ್ರಹಿಸಿದ್ದಾರೆ.

ಹಾಗಾದರೆ ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಒಳ್ಳೆಯದಾಗಬಾರದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಇದು ಏನು? ಪಾಕಿಸ್ತಾನದ ಹಿಂದೂಗಳ ಬಗ್ಗೆ ತುಂಬಾ ಪ್ರೀತಿ ಇದ್ದರೆ ಭಾರತದಲ್ಲಿರುವ ಹಿಂದೂಗಳ ಬಗ್ಗೆ ಪ್ರೀತಿ ಯಾಕಿಲ್ಲ? ಇಲ್ಲಿ ಆರ್ಥಿಕತೆಯು ಕುಸಿದಿದೆ, ಉದ್ಯೋಗಗಳು ಸಿಗುತ್ತಿಲ್ಲ. ದಿನಬಳಕೆಯ ವಸ್ತುಗಳ ಬೆಲೆ ಏರುತ್ತಿದೆ. ಕೋಟ್ಯಾಂತರ ಹಿಂದೂಗಳು ಕಷ್ಟ ಅನುಭವಿಸುತ್ತಿದ್ದಾರೆ. ಇವರ ಬಗ್ಗೆ ಏಕೆ ಮೋದಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಇಂತಹ ಸಂದರ್ಭದಲ್ಲಿ ಪೌರತ್ವ ಕಾನೂನಿನ ಅವಶ್ಯಕತೆ ಏನು ಎಂದು ಅವರು ದೆಹಲಿ ನಾಗರಿಕರೊಂದಿಗೆ ಟೌನ್‌ಹಾಲ್‌ನಲ್ಲಿ ನಡೆದ ಸಂವಾದದಲ್ಲಿ ಪ್ರಶ್ನಿಸಿದ್ದಾರೆ. ಬೇರೆ ದೇಶದ ಮುಸ್ಲಿಮೇತರರಿಗೆ ಅಂದರೆ ಹಿಂದೂಗಳಿಗೆ ದಾಖಲೆ ಇಲ್ಲಿದಿದ್ದರೂ ಕರೆದುಕೊಂಡುಬಂದು ಪೌರತ್ವ ನೀಡುವುದು ಮತ್ತು ನಮ್ಮದೇ ದೇಶದಲ್ಲಿರುವ ಕೋಟ್ಯಾಂತರ ದಾಖಲೆಯಿಲ್ಲದ ಹಿಂದೂ ಧರ್ಮದವರನ್ನು ಹೊರದಬ್ಬುವ ಈ ಕಾನೂನು ನನಗೆ ಅರ್ಥವಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

“ನಾನು ಬುರಾರಿಯಲ್ಲಿ ಬಿಹಾರ ಅಥವಾ ಉತ್ತರ ಪ್ರದೇಶದಿಂದ ದೆಹಲಿಗೆ ಬಂದಿದ್ದ ವ್ಯಕ್ತಿಯೊಬ್ಬನ್ನು ನಿಮ್ಮ ಜನನ ಪ್ರಮಾಣಪತ್ರವಿದೆಯೇ ‌ಎಂದು ಕೇಳಿದೆ. ಅದಕ್ಕೆ ಅವರು ನಾನು ಮನೆಯಲ್ಲಿ ಹುಟ್ಟಿದವನು ಮತ್ತು ಆ ಕಾಲದಲ್ಲಿ ನಮ್ಮ ಮನೆಯಲ್ಲಿ ವಿದ್ಯಾವಂತರು ಇರದ ಕಾರಣ ಜನನಪ್ರಮಾಣ ಪತ್ರ ಮಾಡಿಸಿಲ್ಲ ಎಂದರು. ಅವರ ಹೆತ್ತವರಿಗೂ ಸಹ ಜನನ ಪ್ರಮಾಣಪತ್ರ ಇಲ್ಲ. ಹಾಗಾಗಿ ನಾನು ‘ಅಬ್ ಕ್ಯಾ ಕರೋಗೆ, ನೀವು ದೇಶವನ್ನು ತೊರೆಯಬೇಕಾಗುತ್ತದೆ” ಎಂದೆ. ಆಗ ಪಾಪ ಅವರ ಮುಖವನ್ನು ನೋಡಲಾಗಲಿಲ್ಲ

ದೇಶದ ಬಹಳಷ್ಟು ಜನರ ಬಳಿ ಪ್ರಮಾಣ ಪತ್ರಗಳಿಲ್ಲ. ಎಲ್ಲಾ ಧರ್ಮದವರದ್ದು ಸಹ. ಹಾಗಂತ ಅವರನ್ನು ಅಕ್ರಮ ನುಸುಳುಕೋರರು ಎನ್ನಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...