Homeಮುಖಪುಟತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಹುದೊಡ್ಡ ಮುನ್ನಡೆ ಸಾಧಿಸಿದ ಡಿಎಂಕೆ...

ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಹುದೊಡ್ಡ ಮುನ್ನಡೆ ಸಾಧಿಸಿದ ಡಿಎಂಕೆ…

- Advertisement -
- Advertisement -

ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಪಂಚಾಯತ್ ಯೂನಿಯನ್ ಮತ್ತು ಜಿಲ್ಲಾ ಪಂಚಾಯತ್ ಯೂನಿಯನ್ ವಾರ್ಡ್ ಸದಸ್ಯರು ಸೇರಿದಂತೆ ಸುಮಾರು 92,000 ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಹುದ್ದೆಗಳಿಗೆ ತಮಿಳುನಾಡಿನಲ್ಲಿ ಚುನಾವಣೆ ನಡೆದಿದ್ದು ಮತ ಎಣಿಕೆ ನಡೆಯುತ್ತಿದೆ.

ಕಾಂಗ್ರೆಸ್‌ ಬೆಂಬಲಿತ ಪ್ರತಿಪಕ್ಷ ಡಿಎಂಕೆಯು ಆಡಳಿತಾರೂಢ ಬಿಜೆಪಿ ಬೆಂಬಲಿತ AIADMKಯನ್ನು ಹಿಮ್ಮೆಟ್ಟಿಸಿ ಪ್ರಬಲ ಮುನ್ನಡೆ ಸಾಧಿಸಿದೆ. ಇತ್ತೀಚಿನ ವರದಿಯಂತೆ 1,857 ಪಂಚಾಯತ್ ಯೂನಿಯನ್ ಸ್ಥಾನಗಳಲ್ಲಿ ಡಿಎಂಕೆ ಮತ್ತು 1,494 ರಲ್ಲಿ ಎಐಎಡಿಎಂಕೆ ಮುಂದಿದೆ. ಎಐಎಡಿಎಂಕೆಗೆ 120 ಕ್ಕೆ ಹೋಲಿಸಿದರೆ 152 ಜಿಲ್ಲಾ ಪಂಚಾಯತ್ ಯೂನಿಯನ್ ಸ್ಥಾನಗಳಲ್ಲಿ ಡಿಎಂಕೆ ಮುಂದಿದೆ. ಈ ಚುನಾವಣಾ ಫಲಿತಾಂಶವು 2021 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಅನೇಕರು ಭಾವಿಸಿದ್ದಾರೆ.

ನಿನ್ನೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಮತಎಣಿಕೆ ಪ್ರಕ್ರಿಯೆಯು ಇನ್ನು ನಡೆಯುತ್ತಿದೆ. ಎಐಎಡಿಎಂಕೆ ಪಕ್ಷವು ಚುನಾವಣೆಯಲ್ಲಿ ನಮ್ಮ ಡಿಎಂಕೆ ಪಕ್ಷದ ಗೆಲುವನ್ನು ತಡೆಯಲು ಸಂಚು ರೂಪಿಸಿದೆ ಎಂದು ಗುರುವಾರ ಪ್ರತಿಪಕ್ಷದ ನಾಯಕರಾಗಿರುವ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ. ಸೇಲಂ ಕ್ಷೇತ್ರದಲ್ಲಿ (ಇದು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿಯವರ ವಿಧಾನಸಭಾ ಸ್ಥಾನವಾಗಿದೆ) ಮತಎಣಿಕೆ ಪೂರ್ಣಗೊಂಡಿದ್ದರೂ ಫಲಿತಾಂಶವನ್ನು ಘೋಷಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ಮೊದಲು ಡಿಎಂಕೆ ಅಲ್ಲಿ ಮುನ್ನಡೆ ಸಾಧಿಸಿತ್ತು.

ನಾವು ನ್ಯಾಯಾಲಯಗಳನ್ನು ಪ್ರವೇಶಿಸಬೇಕಾಗುತ್ತದೆ ಎಂದಿರುವ ಅವರು, ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿಯಾದ ನಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆದರೆ ಮುಖ್ಯಮಂತ್ರಿ ಪಳನಿಸ್ವಾಮಿಯವರು ಸ್ಟಾಲಿನ್‌ರವರ ಆರೋಪಗಳನ್ನು ನಿರಾಕರಿಸಿದ್ದು ಮತ ಎಣಿಕೆ ಸುಗಮವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ರಾಜ್ಯಾದ್ಯಂತ ಮತಎಣಿಕೆ ಚಟುವಟಿಕೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಕಳೆದ ವರ್ಷದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಸಹ ಡಿಎಂಕೆ ಮೈತ್ರಿಕೂಟದ ಪಕ್ಷಗಳು 38 ಸ್ಥಾನಗಳಲ್ಲಿ 37 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎಐಎಡಿಎಂಕೆಗೆ ಕೇವಲ ಒಂದು ಸ್ಥಾನ ಮಾತ್ರ ಲಭಿಸಿತ್ತು. ಎಐಎಡಿಎಂಕೆ ಅಕ್ಟೋಬರ್‌ನಲ್ಲಿ ಎರಡು ಅಸೆಂಬ್ಲಿ ಸ್ಥಾನಗಳಿಗೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಐತಿಹಾಸಿಕ...