Homeಮುಖಪುಟಚಂಡೀಗಢ: ಬಿಜೆಪಿ ಸಂಸದೆ ಜೊತೆ ವಾಗ್ವಾದ; ಸದನದಿಂದ ಎಎಪಿ ಕೌನ್ಸಿಲರ್‌ಗಳ ಅಮಾನತು

ಚಂಡೀಗಢ: ಬಿಜೆಪಿ ಸಂಸದೆ ಜೊತೆ ವಾಗ್ವಾದ; ಸದನದಿಂದ ಎಎಪಿ ಕೌನ್ಸಿಲರ್‌ಗಳ ಅಮಾನತು

- Advertisement -
- Advertisement -

ಬಿಜೆಪಿ ಸಂಸದೆ ಕಿರಣ್ ಖೇರ್ ಅವರೊಂದಿಗೆ ವಾಗ್ವಾದ ನಡೆಸಿದ ನಂತರ ಚಂಡೀಗಢದ ಎಲ್ಲಾ 13 ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳನ್ನು ಮಂಗಳವಾರ ಸಾಮಾನ್ಯ ಸದನ ಸಭೆಯಿಂದ ಅಮಾನತುಗೊಳಿಸಿರುವ ಘಟನೆ ನಡೆದಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ನಂತರ ಕೌನ್ಸಿಲರ್‌ಗಳನ್ನು ಬಲವಂತವಾಗಿ ಸದನದಿಂದ ಹೊರ ಹಾಕಲಾಯಿತು.

ಘನತ್ಯಾಜ್ಯ ನಿರ್ವಹಣೆಗೆ ಹಣ ಖರ್ಚು ಮಾಡುವ ಸಂಬಂಧ ಎಎಪಿ ಸದಸ್ಯರು ಪ್ರಸ್ತಾಪಿಸಿದ ನಂತರ ಸಂಸದೆ ಕಿರಣ್‌ ಅಸಾಂವಿಧಾನಿಕ ಪದಗಳನ್ನು ಬಳಸಿದ್ದಾರೆಂಬ ಆರೋಪ ಬಂದಿದೆ.

“ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಅಸಂಸದೀಯ, ನಿಂದನೀಯ ಭಾಷೆಯನ್ನು ಖೇರ್‌‌ ಬಳಸಿದ್ದಾರೆ” ಎಂದು ಎಎಪಿ ಕೌನ್ಸಿಲರ್ ಜಸ್ಬೀರ್ ಸಿಂಗ್ ಆರೋಪಿಸಿದ್ದಾರೆ.

ಆದರೆ ಚಂಡೀಗಢ ಸಂಸದೆ ಖೇರ್‌ ಈ ಆರೋಪವನ್ನು ನಿರಾಕರಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಜಸ್ಬೀರ್‌ ಸಿಂಗ್ ಪ್ರತಿಕ್ರಿಯಿಸಿ, “ಸಂಸದರು ನಾನು ಕುಳಿತಿರುವಲ್ಲಿಗೆ ಬಂದು ‘ಕೇಜ್ರಿವಾಲ್ ಅವರ ಮನೆಗೆ ಖರ್ಚು ಮಾಡಿದ ಹಣದ ವಿವರಗಳನ್ನು ನೀಡಬೇಕು’ ಎಂದು ಹೇಳಿದರು. ನಂತರ ಅವರು ಕೇಜ್ರಿವಾಲ್ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಮತ್ತೆ ತನ್ನ ಸೀಟಿಗೆ ಹಿಂತಿರುಗಿದರು” ಎಂದು ವಿವರಿಸಿದ್ದಾರೆ.

“ನಾನು ಸದನದಲ್ಲಿ ಅದರ ಬಗ್ಗೆ ಆಕ್ಷೇಪಿಸಿದಾಗ, ನಾನು ಅವರು ಹೇಳಿದ ಪದಗಳನ್ನು ತಿಳಿಸಿದ್ದೇನೆ. ಆದರೆ ಸಂಸದರ ವಿರುದ್ಧ ಮೇಯರ್ ಕ್ರಮವನ್ನು ತೆಗೆದುಕೊಳ್ಳುವ ಬದಲು ನನ್ನನ್ನು ಅಮಾನತುಗೊಳಿಸಿದರು” ಎಂದಿದ್ದಾರೆ.

ಇದನ್ನೂ ಓದಿರಿ: ಅಮಿತ್ ಶಾರೊಂದಿಗೆ ನಾವು ಡೀಲ್ ಮಾಡಿಕೊಂಡಿಲ್ಲ, ಪ್ರತಿಭಟನೆ ಮುಂದುವರೆಸುತ್ತೇವೆ: ಕುಸ್ತಿಪಟು ಬಜರಂಗ್ ಪುನಿಯಾ

“ಕಿರಣ್ ಖೇರ್‌ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಜಸ್ಬೀರ್ ಸಿಂಗ್ ನೀಡಿದ ನಂತರ ಎಎಪಿ ಕೌನ್ಸಿಲರ್‌ಗಳನ್ನು ಅಮಾನತುಗೊಳಿಸಲಾಗಿದೆ” ಎಂದು ಮೇಯರ್ ಅನುಪ್ ಗುಪ್ತಾ ಹೇಳಿದ್ದಾರೆ.

“ಇತರ ಎಎಪಿ ಕೌನ್ಸಿಲರ್‌ಗಳು ಜಸ್ಬೀರ್ ಸಿಂಗ್ ಅವರ ಟೀಕೆಗಳಿಗೆ ವಿಷಾದ ವ್ಯಕ್ತಪಡಿಸುವ ಬದಲು ಬೆಂಬಲವನ್ನು ನೀಡಿದರು. ಇದರಿಂದಾಗಿ ಅವರನ್ನೂ ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಆದರೆ ಯಾವುದೇ ಅಸಂಸದೀಯ ಭಾಷೆ ಬಳಸಿಲ್ಲ ಎಂದು ಖೇರ್ ಪ್ರತಿಕ್ರಿಯಿಸಿದ್ದಾರೆ.

ಎಎಪಿ ಕೌನ್ಸಿಲರ್‌ಗಳನ್ನು ಹೊರಹಾಕಿದ ನಂತರ, ಅವರು ಸದನದ ಕೊಠಡಿಯ ಹೊರಗೆ ಪ್ರತಿಭಟನೆ ನಡೆಸಿದರು. ಭಾರತೀಯ ಜನತಾ ಪಕ್ಷದ ಸಂಸದೆ ಖೇರ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...