Homeಮುಖಪುಟಚಂಡೀಗಢ ಮೇಯರ್ ಚುನಾವಣೆ: ಹೊಸದಾಗಿ ಮತದಾನ ನಡೆಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಎಎಪಿ

ಚಂಡೀಗಢ ಮೇಯರ್ ಚುನಾವಣೆ: ಹೊಸದಾಗಿ ಮತದಾನ ನಡೆಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಎಎಪಿ

- Advertisement -
- Advertisement -

ಕಾಂಗ್ರೆಸ್-ಎಎಪಿ ಮೈತ್ರಿಕೂಟಕ್ಕೆ ಬಹುಮತವಿದ್ದರೂ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ, ಹಿರಿಯ ವಕೀಲ ಮತ್ತು ಪಂಜಾಬ್‌ನ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು ನ್ಯಾಯಮೂರ್ತಿ ಜಿಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರ ಪೀಠದ ಮುಂದೆ ತುರ್ತು ವಿಚಾರಣೆಗೆ ವಿನಂತಿ ಸಲ್ಲಿಸಿದರು. ಮಂಗಳವಾರವೇ ವಿಚಾರಣೆಗೆ ಒಪ್ಪದ ನ್ಯಾಯಾಲಯವು, ಬುಧವಾರ ಬೆಳಗ್ಗೆ ಅರ್ಜಿ ಪರಿಶೀಲನೆಗೆ ಅನುಮತಿಸಿದೆ.

ಮಂಗಳವಾರ ನಡೆದ ಚಂಡೀಗಢದ ಮೇಯರ್ ಚುನಾವಣೆಯ ಸಂದರ್ಭದಲ್ಲಿ ತೀವ್ರ ಗದ್ದಲದ ನಂತರ, ಇಂಡಿಯಾ ಬ್ಲಾಕ್ ಅಭ್ಯರ್ಥಿ ಕುಲದೀಪ್ ಧಲೋರ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಿದರು.

‘ಮಂಗಳವಾರ ನಡೆದ ಚುನಾವಣೆಯು ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ “ಸಂಪೂರ್ಣ ವಂಚನೆ ಮತ್ತು ನಕಲಿ ಫಲಿತಾಂಶವಾಗಿದೆ” ಎಂದು ಎಎಪಿ ಕೌನ್ಸಿಲರ್ ಧಲೋರ್ ಅವರು ಮನವಿಯ ಮೂಲಕ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಚುನಾವಣೆಗಳನ್ನು ಹೊಸದಾಗಿ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಮಂಗಳವಾರದ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು. ಮಧ್ಯಂತರ ಕ್ರಮವಾಗಿ, ಮತಪತ್ರಗಳ ದಾಖಲೆ ಮತ್ತು ಚುನಾವಣಾ ಪ್ರಕ್ರಿಯೆಯ ವೀಡಿಯೋಗ್ರಫಿಯನ್ನು ಸೀಲ್ ಮಾಡಲು ಮತ್ತು ಸಂರಕ್ಷಿಸಲು ಅಧಿಕಾರಿಗಳಿಗೆ ತಿಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮೇಯರ್ ಚುನಾವಣೆ ಫಲಿತಾಂಶದ ವಿರುದ್ಧ ಎಎಪಿ ಮತ್ತು ಕಾಂಗ್ರೆಸ್ ಧ್ವನಿ ಎತ್ತಿದವು. ಆದರೆ, ಅವರ ಮನವಿಗೆ ಚುನಾವಣಾ ಅಧ್ಯಕ್ಷರು ಕಿವಿಗೊಡಲಿಲ್ಲ. ಅಚ್ಚರಿಯೆಂದರೆ, ಕಳೆದ ವರ್ಷದ ಚುನಾವಣೆಯಲ್ಲಿ ಅದೇ ಸ್ಥಾನದಲ್ಲಿದ್ದ ಜಿಲ್ಲಾಧಿಕಾರಿ, ಪ್ರತಿವಾದಿ ಸಂಖ್ಯೆ 2 ಮತ್ತು ನಿಗದಿತ ಪ್ರಾಧಿಕಾರವು ಮೌನವಾಗಿಯೇ ಉಳಿದಿದೆ. ಚುನಾವಣೆ ನಡೆಸುವ ಉದ್ದೇಶದಿಂದ ಮುನಿಸಿಪಲ್ ಕಾರ್ಪೊರೇಷನ್ ಕಾರ್ಯದರ್ಶಿ ಎಂದು ಕರೆಸಿಕೊಳ್ಳುವ ಜಂಟಿ ಆಯುಕ್ತರೂ ಆಕ್ಷೇಪ ವ್ಯಕ್ತಪಡಿಸದೆ ಮೌನವಾಗಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಮತದಾನದ ಸ್ವಲ್ಪ ಸಮಯದ ನಂತರ ಅಧ್ಯಕ್ಷರು, ಎಲ್ಲ ನಿಯಮಗಳು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿ, ಎಂಟು ಮತಗಳನ್ನು ಅಮಾನ್ಯವೆಂದು ಘೋಷಿಸಲಾಗಿದೆ ಎಂದು ಅದು ಹೇಳುತ್ತದೆ. ಮತಗಳ ಅಮಾನ್ಯತೆಯ ಬಗ್ಗೆ ಮತ್ತು ಈ ಅಮಾನ್ಯ ಮತಗಳು ಯಾರಿಗೆ ಚಲಾವಣೆಯಾದವು ಎಂಬುದರ ಬಗ್ಗೆ ಅವರು ಒಂದೇ ಒಂದು ಮಾತನ್ನೂ ಹೇಳಲಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ; ಕಲ್ಪನಾ ಸೊರೇನ್ ಜಾರ್ಖಂಡ್ ರಾಜ್ಯದ ಮುಂದಿನ ಮುಖ್ಯಮಂತ್ರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read