Homeಮುಖಪುಟಕಲ್ಪನಾ ಸೊರೇನ್ ಜಾರ್ಖಂಡ್ ರಾಜ್ಯದ ಮುಂದಿನ ಮುಖ್ಯಮಂತ್ರಿ?

ಕಲ್ಪನಾ ಸೊರೇನ್ ಜಾರ್ಖಂಡ್ ರಾಜ್ಯದ ಮುಂದಿನ ಮುಖ್ಯಮಂತ್ರಿ?

- Advertisement -
- Advertisement -

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ‘ಪರಾರಿಯಾಗಿದ್ದಾರೆ’ ಎಂದು ಮಂಗಳವಾರ ಜಾರಿ ನಿರ್ದೇಶನಾಲಯವು (ಇಡಿ) ಆರೋಪಿಸಿದೆ. ಆದರೆ, ಸಂಜೆ ಹೊತ್ತಿಗೆ ರಾಂಚಿಗೆ ತಲುಪಿದ ಸೊರೇನ್, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ನಡೆಸುವ ನಿಗದಿತ ವಿಚಾರಣೆಗೆ ಮುಂಚಿತವಾಗಿ ತಮ್ಮ ಪಕ್ಷ ಮತ್ತು ಮೈತ್ರಿ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರು.

ಆಪಾದಿತ ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ಬುಧವಾರ ರಾಂಚಿಯಲ್ಲಿ ಸೋರೆನ್ ಅವರನ್ನು ಪ್ರಶ್ನಿಸಲಿದೆ. ಆ ನಂತರ, ಅವರನ್ನು ಬಂಧಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೇಮಂತ್ ಸೊರೇನ್ ಅವರು ತಮ್ಮ ದಿಲ್ಲಿಯ ನಿವಾಸದಿಂದ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಡಿದ ನಂತರ, ಅವರ ಪತ್ನಿ ಕಲ್ಪನಾ ಸೊರೇನ್ ಅವರು ಜಾರ್ಖಂಡ್‌ನ ಮುಂದಿನ ಮುಖ್ಯಮಂತ್ರಿಯಾಗಬಹುದು ಎಂಬ ಊಹಾಪೋಹಗಳು ಎದ್ದಿವೆ. ಸೋಮವಾರ ಇಡಿ ಪರಿಶೀಲನೆ ನಡೆಸಿದಾಗ ಸುಮಾರು 40 ಗಂಟೆಗಳ ಕಾಲ ಹೇಮಂತ್ ಸೋರೆನ್ ಅವರ ‘ನಾಪತ್ತೆ’ ಕುರಿತು ಭಾರಿ ಬೆಳವಣಿಗೆಗಳು ನಡೆದಿವೆ. ಕಲ್ಪನಾ ಸೊರೇನ್‌ರ ಸಂಭಾವ್ಯ ಹೆಸರು ಮುನ್ನಲೆಗೆ ಬಂದಿರುವುದು, ಬಿಹಾರದ ಲಾಲು ಪ್ರಸಾದ್ ಯಾದವ್ ಅವರ ಇದೇ ನಡೆಯನ್ನು ಪ್ರತಿಧ್ವನಿಸುತ್ತದೆ. ಅವರು ಬಂಧನಕ್ಕೆ ಒಳಗಾದಾಗ ಪತ್ನಿ ರಾಬ್ರಿ ದೇವಿ ಅವರನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡಿದರು.

ತನಿಖಾ ಸಂಸ್ಥೆಯು ಜನವರಿ 20ರಂದು ಹೇಮಂತ್ ಸೊರೇನ್ ಅವರನ್ನು ಪ್ರಶ್ನಿಸಿತು. ನಂತರ, ಹೊಸ ಸಮನ್ಸ್ ನೀಡಿ, ಜನವರಿ 29 ಅಥವಾ ಜನವರಿ 31 ರಂದು ವಿಚಾರಣೆಗೆ ಅವರ ಲಭ್ಯತೆಯನ್ನು ಖಚಿತಪಡಿಸಲು ಕೇಳಿದೆ.

ಕಲ್ಪನಾ ಸೊರೆನ್ ಯಾರು?

ಕಲ್ಪನಾ ಸೊರೇನ್ ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ ಮತ್ತು ಮೂಲತಃ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯವರು. 1976ನೇ ಇಸವಿಯಲ್ಲಿ ರಾಂಚಿಯಲ್ಲಿ ಜನಿಸಿದ ಕಲ್ಪನಾ ಸೊರೇನ್ ಎಂಜಿನಿಯರಿಂಗ್ ಮತ್ತು ಎಂಬಿಎ ಓದಿದ್ದಾರೆ. ಫೆಬ್ರವರಿ 7, 2006 ರಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ವಿವಾಹವಾದರು. ಅವರಿಗೆ ನಿಖಿಲ್ ಮತ್ತು ಅಂಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕಲ್ಪನಾ ಅವರ ತಂದೆ ಉದ್ಯಮಿ ಮತ್ತು ತಾಯಿ ಗೃಹಿಣಿ. ಅವರು ವ್ಯಾಪಾರ ಮತ್ತು ಚಾರಿಟಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಲ್ಪನಾ ಸೊರೇನ್ ಅವರು ಶಾಲೆಯೊಂದನ್ನು ನಡೆಸುತ್ತಿದ್ದು, ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಶಾಸಕಿ ಅಲ್ಲದ ಕಾರಣ, ಸಿಎಂ ಆಗಲು ಅವರ ಸ್ಥಾನವನ್ನು ಖಾಲಿ ಮಾಡಲು ಈಗಿನ ಶಾಸಕರ ಅಗತ್ಯವಿದೆ. ಹೇಮಂತ್ ಸೊರೇನ್ ಬಂಧನದ ವೇಳೆ ಪತ್ನಿ ಕಲ್ಪನಾ ಸೊರೇನ್ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎಂಬ ಊಹಾಪೋಹಗಳು ದಟ್ಟವಾಗಿರುವುದರಿಂದ ಹೇಮಂತ್ ಸೋರೆನ್ ಅವರಿಗೆ ಮೈತ್ರಿಕೂಟದ ಶಾಸಕರು ಹೆಸರಿಲ್ಲದೆ ಬೆಂಬಲ ಪತ್ರಕ್ಕೆ ಸಹಿ ಹಾಕಿದ್ದಾರೆ.

ಬಿಜೆಪಿಯ ನಿಶಿಕಾಂತ್ ದುಬೆ ಪ್ರಕಾರ, ಕಲ್ಪನಾ ಸಿಎಂ ಆಗುವ ಪ್ರಸ್ತಾಪವನ್ನು ಹೇಮಂತ್ ಸಹೋದರ ಬಸಂತ್ ಸೊರೆನ್ ಮತ್ತು ಸೊಸೆ ಸೀತಾ ಸೊರೆನ್ ಒಪ್ಪಲಿಲ್ಲ ಎನ್ನಲಾಗಿದೆ.

ರಾಂಚಿಯಲ್ಲಿ ಮಂಗಳವಾರ ನಡೆದ ರಾಜ್ಯದ ಸಚಿವರು ಮತ್ತು ಪಕ್ಷದ ಶಾಸಕರ ಸಭೆಗಳಲ್ಲಿ ಕಲ್ಪನಾ ಸೊರೇನ್ ಉಪಸ್ಥಿತರಿದ್ದರು. ಹೇಮಂತ್ ಸೊರೆನ್ ದೆಹಲಿಯ ನಿವಾಸದಲ್ಲಿ ಇಡಿಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ಪರಾರಿಯಾಗಿದ್ದಾರೆ ಎಂಬ ಬಿಜೆಪಿ ಹೇಳಿಕೆಗಳ ನಡುವೆಯೇ ಈ ಸಭೆಗಳು ನಡೆದಿವೆ. ಹೇಮಂತ್ ಸೊರೇನ್ ದೆಹಲಿಯಿಂದ ರಾಂಚಿಗೆ ರಸ್ತೆ ಮಾರ್ಗವಾಗಿ ತಲುಪಿ ಎರಡು ಸಭೆಗಳನ್ನು ನಡೆಸಿದರು.

ಇದನ್ನೂ ಓದಿ; ಇಂದಿನಿಂದ ಸಂಸತ್ ಅಧಿವೇಶನ ಆರಂಭ; ನಾಳೆ ಮಂಧ್ಯಂತರ ಬಜೆಟ್ ಮಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...