Homeಮುಖಪುಟಭ್ರಷ್ಟಾಚಾರ ಸೂಚ್ಯಂಕ: 93ನೇ ಸ್ಥಾನದಲ್ಲಿರುವ ಭಾರತ

ಭ್ರಷ್ಟಾಚಾರ ಸೂಚ್ಯಂಕ: 93ನೇ ಸ್ಥಾನದಲ್ಲಿರುವ ಭಾರತ

- Advertisement -
- Advertisement -

2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತವು 180 ದೇಶಗಳಲ್ಲಿ 93ನೇ ಸ್ಥಾನದಲ್ಲಿದೆ, ಏಕೆಂದರೆ ಅದರ ಒಟ್ಟಾರೆ ಅಂಕ ಹೆಚ್ಚಾಗಿ ಬದಲಾಗದೆ ಉಳಿದಿದೆ ಎಂದು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ವರದಿಯು ಬಹಿರಂಗಪಡಿಸಿದೆ.

ಸಾರ್ವಜನಿಕ ವಲಯದ ಭ್ರಷ್ಟಾಚಾರ ಗ್ರಹಿಕೆ ಮಟ್ಟಗಳ ಮೂಲಕ 180 ದೇಶಗಳು ಮತ್ತು ಪ್ರಾಂತ್ಯಗಳನ್ನು ಶ್ರೇಣೀಕರಿಸುವ ಸೂಚ್ಯಂಕವು 0 ರಿಂದ 100ರ ಪ್ರಮಾಣವನ್ನು ಬಳಸುತ್ತದೆ. ಅಲ್ಲಿ 0 ಹೆಚ್ಚು ಭ್ರಷ್ಟ ಮತ್ತು 100 ತುಂಬಾ ಸ್ವಚ್ಛವಾಗಿದೆ ಎಂದು ಪರಿಗಣಿಸಲಾಗುತ್ತದೆ. ಜಗತ್ತಿನ ಹಲವು ದೇಶಗಳಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಸಮರಗಳು ಹೆಚ್ಚು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ ಎಂಬುವುದನ್ನು ಡೇಟಾವು ಬಹಿರಂಗಪಡಿಸಿದೆ.

180 ದೇಶಗಳ ಪೈಕಿ ಭಾರತ, ಮಾಲ್ಡೀವ್ಸ್, ಕಝಾಕಿಸ್ತಾನ್ ಮತ್ತು ಲೆಸೊಥೋ ಸೇರಿದಂತೆ ಐದು ದೇಶಗಳು 93ನೇ ಸ್ಥಾನ ಹಂಚಿಕೊಂಡಿದೆ. 2022ರಲ್ಲಿ ಭಾರತವು 85ನೇ ಸ್ಥಾನದಲ್ಲಿತ್ತು. 2023ರಲ್ಲಿ, ಡೆನ್ಮಾರ್ಕ್  ಸತತ ಆರನೇ ವರ್ಷಕ್ಕೆ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಫಿನ್‌ಲ್ಯಾಂಡ್ ಮತ್ತು ನ್ಯೂಝಿಲ್ಯಾಂಡ್ ಕ್ರಮವಾಗಿ 87 ಮತ್ತು 85 ಅಂಕಗಳೊಂದಿಗೆ 2ನೇ ಮತ್ತು 3ನೇ ಸ್ಥಾನವನ್ನು ಪಡೆದುಕೊಂಡಿವೆ. ಸೊಮಾಲಿಯಾ ಕೊನೆಯ ಸ್ಥಾನದಲ್ಲಿದೆ. ವೆನೆಝುವೆಲಾ, ಸಿರಿಯಾ, ದಕ್ಷಿಣ ಸುಡಾನ್ ಮತ್ತು ಯೆಮೆನ್ ದೇಶಗಳು ಅತ್ಯಂತ ಕೆಳಮಟ್ಟದಲ್ಲಿದೆ.

2023ರಲ್ಲಿ ಭಾರತದ ಒಟ್ಟಾರೆ ಅಂಕ 39 ಆಗಿದ್ದರೆ, 2022ರಲ್ಲಿ ಅದು 40 ಆಗಿತ್ತು. 2022ರಲ್ಲಿ ಭಾರತದ ಶ್ರೇಣಿ 85 ಆಗಿತ್ತು. ಭಾರತವು 39 ಅಂಕಗಳ ಏರಿಳಿತಗಳನ್ನು ತೋರಿಸುತ್ತದೆ. ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ (133) ಮತ್ತು ಶ್ರೀಲಂಕಾ (115) ಎರಡೂ ತಮ್ಮ ಸಾಲದ ಹೊರೆ ಮತ್ತು ನಂತರದ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿವೆ ಎಂದು ವರದಿ ಹೇಳಿದೆ. ಉಭಯ ದೇಶಗಳು ಬಲವಾದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿವೆ, ಇದು ಸರ್ಕಾರವನ್ನು ಹಿಡಿತದಲ್ಲಿಡಲು ಸಹಾಯ ಮಾಡುತ್ತದೆ. ಪಾಕಿಸ್ತಾನದ ಸುಪ್ರೀಂಕೋರ್ಟ್ ತನ್ನ ಸಂವಿಧಾನದ 19A ಪರಿಚ್ಛೇದದ ಅಡಿಯಲ್ಲಿ ಈ ಹಕ್ಕನ್ನು ಈ ಹಿಂದೆ ನಿರ್ಬಂಧಿತ ಸಂಸ್ಥೆಗಳಿಗೆ ವಿಸ್ತರಿಸುವ ಮೂಲಕ ನಾಗರಿಕರ ಮಾಹಿತಿಯ ಹಕ್ಕನ್ನು ಬಲಪಡಿಸಿದೆ ಎಂದು ವರದಿ ಹೇಳಿದೆ.

ಬಾಂಗ್ಲಾದೇಶ (149) ಕಡಿಮೆ ಅಭಿವೃದ್ಧಿ ಹೊಂದಿದ ದೇಶ (ಎಲ್‌ಡಿಸಿ) ಸ್ಥಿತಿಯಿಂದ ಹೊರಹೊಮ್ಮಿದೆ ಎಂದು ವರದಿ ಹೇಳಿದೆ. ಆರ್ಥಿಕ ಬೆಳವಣಿಗೆಯು ಬಡತನದ ನಿರಂತರ ಕಡಿತ ಮತ್ತು ಜೀವನ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ. ನೆರೆಯ ರಾಷ್ಟ್ರ ಚೀನಾ 76 ಅಂಕ ಪಡೆದು 42ನೇ ಸ್ಥಾನದಲ್ಲಿದೆ. ಕಳೆದ ದಶಕದಲ್ಲಿ ಭ್ರಷ್ಟಾಚಾರಕ್ಕಾಗಿ 3.7 ದಶಲಕ್ಷಕ್ಕೂ ಹೆಚ್ಚು ಸಾರ್ವಜನಿಕ ಅಧಿಕಾರಿಗಳನ್ನು ಶಿಕ್ಷಿಸುವ ಮೂಲಕ ಚೀನಾ 76 ಅಂಕಗಳೊಂದಿಗೆ ಭ್ರಷ್ಟಾಚಾರ-ವಿರೋಧಿ ಕ್ರಮಗಳಲ್ಲಿ ಮುಂದಿದೆ. ಸಾಂಸ್ಥಿಕ ತಪಾಸಣೆಗಿಂತ ಹೆಚ್ಚಾಗಿ ಶಿಕ್ಷೆಯ ಮೇಲೆ ಚೀನಾದ ಭಾರೀ ಅವಲಂಬನೆಯು ಭ್ರಷ್ಟಾಚಾರ-ವಿರೋಧಿ ಕ್ರಮಗಳ ದೀರ್ಘಕಾಲೀನ ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ವರದಿ ಹೇಳಿದೆ.

ಏಷ್ಯಾ ಪೆಸಿಫಿಕ್ ಪ್ರದೇಶವು 2024ರ ದೊಡ್ಡ ಚುನಾವಣಾ ವರ್ಷವನ್ನು ಎದುರಿಸುತ್ತಿದೆ ಎಂದು ವರದಿ ಹೇಳಿದೆ. ಬಾಂಗ್ಲಾದೇಶ, ಭಾರತ, ಇಂಡೋನೇಷ್ಯಾ, ಪಾಕಿಸ್ತಾನ, ಸೊಲೊಮನ್ ದ್ವೀಪಗಳು, ದಕ್ಷಿಣ ಕೊರಿಯಾ ಮತ್ತು ತೈವಾನ್‌ನಲ್ಲಿ ಮತದಾನ ನಡೆಯಲಿೆದೆ.  2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಯಾವುದೇ ಅರ್ಥಪೂರ್ಣ ಪ್ರಗತಿಯಿಲ್ಲದ ಇನ್ನೊಂದು ವರ್ಷವನ್ನು ಬಹಿರಂಗಪಡಿಸುತ್ತದೆ. ಕೆಲವೇ ಕೆಲ ದೇಶಗಳು ಭ್ರಷ್ಟಾಚಾರದ ಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ತೋರಿಸುತ್ತವೆ. ಏಷ್ಯಾ ಮತ್ತು ಪೆಸಿಫಿಕ್‌ನಾದ್ಯಂತದ 71 ಪ್ರತಿಶತದಷ್ಟು ದೇಶಗಳಲ್ಲಿ CPI ಸ್ಕೋರ್ ಪ್ರಾದೇಶಿಕ ಸರಾಸರಿ ಸ್ಕೋರ್ 45ಕ್ಕಿಂತ ಕಡಿಮೆ ಮತ್ತು ಜಾಗತಿಕ ಸರಾಸರಿ 100 ರಲ್ಲಿ 43 ಆಗಿದೆ ಎಂದು ವರದಿಯು ಹೇಳಿದೆ.

ಇದನ್ನು ಓದಿ: ದಲಿತ ರೈತರಿಗೆ ಇಡಿ ಸಮನ್ಸ್‌ ಪ್ರಕರಣ: ನಿರ್ಮಲಾ ಸೀತಾರಾಮನ್‌ ವಜಾಗೆ ಆಗ್ರಹಿಸಿ ಪತ್ರ ಬರೆದಿದ್ದ IRS ಅಧಿಕಾರಿ ಅಮಾನತು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....