Homeಮುಖಪುಟಚಂಡೀಗಢ ಮೇಯರ್ ರಾಜೀನಾಮೆ: ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ

ಚಂಡೀಗಢ ಮೇಯರ್ ರಾಜೀನಾಮೆ: ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ

- Advertisement -
- Advertisement -

ಚಂಡೀಗಢ ಮೇಯರ್ ಚುನಾವಣೆಯ ಅಕ್ರಮ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇಂದು ನಡೆಸಲಿದೆ. ಅದಕ್ಕೂ ಮುನ್ನ ಭಾನುವಾರ ಮೇಯರ್ ಮನೋಜ್ ಸೋಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಮೇಯರ್ ಆಯ್ಕೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಈ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಗುರ್ಚರಂಜಿತ್ ಸಿಂಗ್ ಕಾಲಾ, ನೇಹಾ ಮತ್ತು ಪೂನಮ್ ದೇವಿ ಎಂಬ ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮೇಯರ್ ಆಯ್ಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಒಟ್ಟು 35 ಸದಸ್ಯ ಬಲದ ಚಂಡೀಗಢ ಮುನ್ಸಿಪಲ್‌ ಕಾರ್ಪೋರೇಷನ್‌ನಲ್ಲಿ ಬಿಜೆಪಿ 15, ಎಎಪಿ 13, ಕಾಂಗ್ರೆಸ್ 7 ಮತ್ತು ಶಿರೋಮಣಿ ಅಕಾಲಿ ದಳ ಒಬ್ಬ ಸದಸ್ಯನನ್ನು ಹೊಂದಿತ್ತು. ಮೂವರು ಎಎಪಿ ಸದಸ್ಯರ ಬಿಜೆಪಿ ಸೇರ್ಪಡೆಯಿಂದ ಬಿಜೆಪಿ ಸದಸ್ಯರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಎಎಪಿ ಸದಸ್ಯರ ಸಂಖ್ಯೆ 10ಕ್ಕೆ ಇಳಿದಿದೆ.

ಜನವರಿ 30ರಂದು ನಡೆದ ಚಂಡೀಗಢದ ಮೇಯರ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಂಚೆ ಮತಪತ್ರಗಳನ್ನು ತಿರುಚಿದೆ ಎಂದು ಆರೋಪಿಸಿ ಎಎಪಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ನಿಗದಿಪಡಿಸಿದೆ.

ಜನವರಿ 2023ರಲ್ಲಿ ಮೇಯರ್ ಚುನಾವಣೆ ನಡೆದಾಗ ಒಟ್ಟು 29 ಮತಗಳು ಚಲಾವಣೆಯಾಗಿತ್ತು. ಬಿಜೆಪಿಯ ಅನುಪ್ ಗುಪ್ತಾ ಎಎಪಿಯ ಜಸ್ಬೀರ್ ಸಿಂಗ್ ಲಡ್ಡಿ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿದ್ದರು. ಗುಪ್ತಾ 15 ಮತಗಳನ್ನು ಗಳಿಸಿದ್ದರೆ, ಸಿಂಗ್ 14 ಮತ ಪಡೆದಿದ್ದರು. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಮತದಾನದಿಂದ ದೂರ ಉಳಿದಿತ್ತು. 2022ರಲ್ಲೂ ವಿವಿಧ ಕಾರಣಗಳಿಗಾಗಿ ಒಂದು ಮತ ಅಸಿಂಧುವಾದ ಕಾರಣ ಬಿಜೆಪಿ ಅಭ್ಯರ್ಥಿ ಕೇವಲ ಒಂದು ಮತದ ಅಂತರದಿಂದ ಗೆದ್ದಿದ್ದರು.

ಇದನ್ನೂ ಓದಿ : ‘ED’ಯನ್ನು ಬಂದ್‌ ಮಾಡಿದರೆ ಅರ್ಧದಷ್ಟು ಬಿಜೆಪಿ ನಾಯಕರು ಪಕ್ಷ ತೊರೆಯುತ್ತಾರೆ: ಅರವಿಂದ್ ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...