Homeಮುಖಪುಟರೈಲ್ವೆ ಯೋಜನೆಗಳಲ್ಲಿನ ವಿಳಂಬದಿಂದ ಹೆಚ್ಚಿದ ಹೆಚ್ಚುವರಿ ವೆಚ್ಚ: ವರದಿ

ರೈಲ್ವೆ ಯೋಜನೆಗಳಲ್ಲಿನ ವಿಳಂಬದಿಂದ ಹೆಚ್ಚಿದ ಹೆಚ್ಚುವರಿ ವೆಚ್ಚ: ವರದಿ

- Advertisement -
- Advertisement -

ದೇಶದಲ್ಲಿನ 848 ರೈಲ್ವೆ ಯೋಜನೆಗಳು ಸರಾಸರಿ 36 ತಿಂಗಳುಗಳಿಂದ ವಿಳಂಬವಾಗಿವೆ, ಪ್ರತಿ ಯೋಜನೆಯ ವೆಚ್ಚ 150 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚದ್ದಾಗಿದೆ ಎಂದು ಹಿಂದೂ ಬಿಸಿನೆಸ್‌ಲೈನ್‌ನ ವರದಿಯೊಂದು ಬಹಿರಂಗಪಡಿಸಿದ್ದು, ಯೋಜನೆಯ ವಿಳಂಬದಿಂದ ಹೆಚ್ಚುವರಿ ವೆಚ್ಚವಾಗುತ್ತಿದೆ ಎನ್ನುವುದನ್ನು ಕೂಡ ಉಲ್ಲೇಖಿಸಿದೆ.

1,820 ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ. ಅದರಲ್ಲಿ 56 ವೇಳಾಪಟ್ಟಿಗಿಂತ ಮುಂದಿದೆ, 618 ವೇಳಾಪಟ್ಟಿಯಲ್ಲಿದೆ, 431 ಯೋಜನೆಗಳು ವೆಚ್ಚವನ್ನು ಮೀರಿವೆ ಎಂದು ವರದಿ ಮಾಡಿದೆ ಮತ್ತು 268 ಯೋಜನೆಗಳು ಅವುಗಳ ಮೂಲ ಯೋಜನೆಯ ಅನುಷ್ಠಾನ ವೇಳಾಪಟ್ಟಿಗಳಿಗೆ ಸಂಬಂಧಿಸಿದಂತೆ ಸಮಯ ಮತ್ತು ವೆಚ್ಚದ ಮಿತಿ ಎರಡನ್ನೂ ಮೀರಿದೆ ಎಂದು ವರದಿ ಉಲ್ಲೇಖಿಸಿದೆ.

848 ಯೋಜನೆಗಳು ಸರಾಸರಿ 36.59 ತಿಂಗಳುಗಳಿಂದ ವಿಳಂಬವಾಗಿದೆ. ಇದರ ಪರಿಣಾಮವಾಗಿ ನಿರೀಕ್ಷಿತ ಪೂರ್ಣಗೊಳಿಸುವಿಕೆಯ ವೆಚ್ಚವು ಮೂಲ ವೆಚ್ಚಕ್ಕಿಂತ 18.5% ಹೆಚ್ಚಾಗಿದೆ. ಸರ್ಕಾರದ ಮೂಲಸೌಕರ್ಯ ಮತ್ತು ಪ್ರಾಜೆಕ್ಟ್ ಮಾನಿಟರಿಂಗ್ ವಿಭಾಗವು ಸಿದ್ಧಪಡಿಸಿದ ವರದಿಯ ಆಧಾರದ ಮೇಲೆ ಈ ವರದಿಯ ಅಂಕಿ-ಅಂಶಗಳನ್ನು ಬಹಿರಂಗಪಡಿಸಲಾಗಿದೆ.

ಲಲಿತ್‌ಪುರ-ಸತ್ನಾ-ರೇವಾ-ಸಿಂಗ್ರೌಲಿ ರೈಲು ಮಾರ್ಗ ಯೋಜನೆಯು 16 ವರ್ಷಗಳ ವಿಳಂಬವನ್ನು ಮತ್ತು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ಯೋಜನೆಯು 20 ವರ್ಷ ಮತ್ತು 15 ತಿಂಗಳುಗಳ ವಿಳಂಬವನ್ನು ಉಲ್ಲೇಖಿಸಲಾಗಿದೆ.

ರೈಲ್ವೇ ಯೋಜನೆಯ ಕಾಮಗಾರಿ ವಿಳಂಬ ಭಾರತದಲ್ಲಿ ಮುಂದುವರಿಯುತ್ತಲೇ ಇದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಕಳೆದ ವರ್ಷ ರೈಲ್ವೇಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಳಂಬಿತ ಯೋಜನೆಗಳ ಸಂಖ್ಯೆಯು 2022ರಲ್ಲಿ 56 ರಿಂದ 2023ರಲ್ಲಿ 98ಕ್ಕೆ ಏರಿದೆ ಎಂದು ವರದಿ ಮಾಡಿದೆ.

24 ಮೂಲಸೌಕರ್ಯ ಕ್ಷೇತ್ರಗಳ ಪೈಕಿ, ಅತಿ ಹೆಚ್ಚು ಯೋಜನೆಗಳು ವಿಳಂಬವಾಗಿರುವಲ್ಲಿ ರೈಲ್ವೆ ಎರಡನೇ ಸ್ಥಾನದಲ್ಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯವು ಕಾಮಗಾರಿ ವಿಳಂಬದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ವರದಿಯು ಉಲ್ಲೇಖಿಸಿದೆ.

ಕಳೆದ ವರ್ಷ ಸರ್ಕಾರವು ರಾಜ್ಯಸಭೆಗೆ ನೀಡಿದ ಮಾಹಿತಿಯ ಪ್ರಕಾರ, 2022ರ ವೇಳೆಗೆ 800ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳಲ್ಲಿ ವಿಳಂಬವಾಗಿದೆ, ಇದರ ವೆಚ್ಚ 4.5 ಟ್ರಿಲಿಯನ್ ರೂಪಾಯಿಗಳಿಗೆ ತಲುಪಿದೆ ಎಂದು ಹೇಳಿತ್ತು. ಅಂದರೆ ಸರ್ಕಾರವು 1,438 ಯೋಜನೆಗಳನ್ನು ರೂಪಿಸಿದೆ. ಇದರ ಮೂಲ ವೆಚ್ಚ 20.4 ಟ್ರಿಲಿಯನ್ ರೂ. ಆದರೆ ವಿಳಂಬದಿಂದ ವೆಚ್ಚವು ಡಿಸೆಂಬರ್ 2022ರ ಹೊತ್ತಿಗೆ 24.9 ಟ್ರಿಲಿಯನ್‌ಗೆ ಹೆಚ್ಚಾಗಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಹೇಳಿತ್ತು.

ಇದನ್ನು ಓದಿ: ‘ಜೈ ಹಿಂದ್ ಟಿವಿ’ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಿದ ಐಟಿ ಇಲಾಖೆ: ಡಿಕೆ ಶಿವಕುಮಾರ್ ಹೂಡಿಕೆಗೆ ರಾಜಕೀಯ ಸೇಡು?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...