Homeಮುಖಪುಟಚಂಡೀಗಢ ಮೇಯರ್ ಚುನಾವಣೆ: ಬಿಜೆಪಿಗೆ ಮುಖಭಂಗ, ವಿರೂಪಗೊಂಡ 8 ಮತಗಳು ಮಾನ್ಯ ಎಂದ ಸುಪ್ರೀಂ

ಚಂಡೀಗಢ ಮೇಯರ್ ಚುನಾವಣೆ: ಬಿಜೆಪಿಗೆ ಮುಖಭಂಗ, ವಿರೂಪಗೊಂಡ 8 ಮತಗಳು ಮಾನ್ಯ ಎಂದ ಸುಪ್ರೀಂ

- Advertisement -
- Advertisement -

ಚಂಡೀಗಢ ಮೇಯರ್ ಚುನಾವಣೆ ವಿವಾದ ಪ್ರಕರಣದ ಬಗ್ಗೆ ಇಂದು ತನ್ನ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌, ವಿರೂಪಗೊಂಡ ಎಂಟು ಮತಗಳು ಮಾನ್ಯವಾಗಿವೆ ಎಂದು ಹೇಳಿ, ಮರು ಎಣಿಕೆಗೆ ಆದೇಶ ನೀಡಿದೆ.

ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಜಯಶಾಲಿಯಾಯಿತು. ಎಎಪಿ-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯ ವಿರುದ್ಧ ಗೆಲುವು ಸಾಧಿಸಿತು. ಚುನಾವಣಾಧಿಕಾರಿಯು ಸಮ್ಮಿಶ್ರ ಪಾಲುದಾರ ಪಕ್ಷಗಳ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿ, ಮತಪತ್ರಗಳನ್ನು ತಿದ್ದಿದ ಆರೋಪ ಎದುರಿಸುತ್ತಿದ್ದಾರೆ.

ಬಿಜೆಪಿಯ ಮನೋಜ್ ಸೋಂಕರ್ ಅವರು ತಮ್ಮ ಪ್ರತಿಸ್ಪರ್ಧಿಯ 12 ವಿರುದ್ಧ 16 ಮತಗಳೊಂದಿಗೆ ಮೇಯರ್ ಸ್ಥಾನವನ್ನು ಅಲಂಕರಿಸಿದರು. ಆದರೆ, ಸುಪ್ರೀಂ ಕಿಡಿಕಾರಿದ ನಂತರ ನಿನ್ನೆ ಅವರು ರಾಜೀನಾಮೆ ನೀಡಿದರು. ಈ ನಡುವೆ ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಬೆಂಬಲಿಸಿ, ಕುದುರೆ ವ್ಯಾಪಾರವಾಗಿರುವುದು ಬಹಿರಂಗವಾಗಿತ್ತು.

ಕಳೆದ ತಿಂಗಳು ನಡೆದ ಮೇಯರ್ ಚುನಾವಣೆಯ ಮತಗಳ ಮರು ಎಣಿಕೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಇಂದು ಹೇಳಿದರು. ಸಿಕ್ಕಿಬಿದ್ದಿರುವ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರು ಆಮ್ ಆದ್ಮಿ ಪಕ್ಷದ ಪರವಾಗಿ ಎಂಟು ಮತಗಳನ್ನು ಸೇರಿಸಿ, ಬ್ಯಾಲೆಟ್ ಪೇಪರ್‌ಗಳನ್ನು ತಿರುಚಿರುವುದು ಕ್ಯಾಮರಾದಲ್ಲಿ ಗುರುತಿಸಲಾಗಿದೆ.

ಎಂಟು ಮತಪತ್ರಗಳನ್ನು ವಿರೂಪಗೊಳಿಸಲಾಗಿದೆ ಎಂಬುದನ್ನು ಸೂಚಿಸಲು ಮಸಿಹ್ ಅವರನ್ನು ಕೇಳುವ ಮೂಲಕ ನ್ಯಾಯಾಲಯವು ಇಂದಿನ ವಿಚಾರಣೆಯನ್ನು ಪ್ರಾರಂಭಿಸಿತು. ಈ ವೇಳೆ ಮಸಿಹ್ ಅವರು, ‘ಈ ವಿರೂಪಗೊಂಡ ಮತಪತ್ರಗಳನ್ನು ಎಣಿಕೆ ಮಾಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ‘ನಿನ್ನೆ ಈ ಬ್ಯಾಲೆಟ್ ಪೇಪರ್ ಅನ್ನು ವಿರೂಪಗೊಳಿಸಲಾಗಿದೆ ಎಂದು ನೀವು ಹೇಳಿದ್ದೀರಿ. ಎಲ್ಲಿ ಎಂದು ನಮಗೆ ತೋರಿಸುತ್ತೀರಾ?’ ಎಂದು ಅವರು ಎಂಟು ಮತಪತ್ರಗಳನ್ನು ಮಸಿಹ್ ಮತ್ತು ಅವರ ವಕೀಲರಿಗೆ, ವಿಚಾರಣೆಯಲ್ಲಿ ಹಾಜರಿದ್ದ ಇತರ ಪಕ್ಷಗಳಿಗೆ ತೋರಿಸಿದರು.

‘ಎಲ್ಲ ಎಂಟು ಮಂದಿ ಕುಲದೀಪ್ ಕುಮಾರ್ (ಎಎಪಿ ಅಭ್ಯರ್ಥಿ) ಗಾಗಿ ಮುದ್ರೆಯನ್ನು ಒತ್ತಿದ್ದಾರೆ… ಮತಗಳು  ಕುಮಾರ್‌ಗೆ ಹಾಕಲ್ಪಟ್ಟಿವೆ. ನೋಡಿದಂತೆ ವಿಡಿಯೋದಲ್ಲಿ ನೋಡಿದಂತೆ ಅವರು (ಶ್ರೀ ಮಸಿಹ್) ಏನು ಮಾಡುತ್ತಾರೆ ಎಂದರೆ… ಅವರು ಒಂದೇ ಸಾಲನ್ನು ಹಾಕುತ್ತಾರೆ. ಕೇವಲ ಒಂದು ಸಾಲು’ ಎಂದರು.

ಈ ಹಂತದಲ್ಲಿ ದಿಲೀಪ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅಳಲು ತೋಡಿಕೊಂಡರು, ಮಸಿಹ್ ಅವರ ಕ್ರಮಗಳು ನ್ಯಾಯಾಲಯದ ನಿಂದನೆ, ಇದು ಘೋರ ಅಪರಾಧ…’ ಎಂದು ಅವರು ಹೇಳಿದರು.

ಇದನ್ನೂ ಓದಿ; ಮರಾಠ ಮೀಸಲಾತಿ ಮಸೂದೆ; ಸರ್ವಾನುಮತದಿಂದ ಅಂಗೀಕರಿಸಿದ ಮಹಾರಾಷ್ಟ್ರ ವಿಧಾನಸಭೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...