HomeಚಳವಳಿCAA ವಿರುದ್ಧ ತಿರುಗಿಬಿದ್ದ ಸುಭಾಷ್ ಚಂದ್ರ ಬೋಸ್ ಸಂಬಂಧಿ ಚಂದ್ರ ಕುಮಾರ್‌ ಬೋಸ್‌...

CAA ವಿರುದ್ಧ ತಿರುಗಿಬಿದ್ದ ಸುಭಾಷ್ ಚಂದ್ರ ಬೋಸ್ ಸಂಬಂಧಿ ಚಂದ್ರ ಕುಮಾರ್‌ ಬೋಸ್‌…

ಕಾಂಗ್ರೆಸ್‌ ಆಡಳಿತದ ರಾಜ್ಯಗಳು ಮಾತ್ರವಲ್ಲದೇ ದೆಹಲಿ, ಪಶ್ಚಿಮ ಬಂಗಾಳ, ಬಿಹಾರ, ಒಡಿಸ್ಸಾ, ಆಂಧ್ರ, ಗೋವಾ ಸೇರಿದಂತೆ ಹಲವು ರಾಜ್ಯಗಳು CAA, NRCಗೆ ವಿರೋಧ ವ್ಯಕ್ತಪಡಿಸಿವೆ.

- Advertisement -
- Advertisement -

ವಿವಾದಾತ್ಮಕ ಪೌರತ್ವ ಕಾನೂನನ್ನು ಬೆಂಬಲಿಸಿ ಕೋಲ್ಕತ್ತಾದ ಬೀದಿಗಳಲ್ಲಿ ಬೃಹತ್ ಬಿಜೆಪಿ ಮೆರವಣಿಗೆ ನಡೆಸಿದ ಕೆಲವೇ ಗಂಟೆಗಳ ನಂತರ, ಪಶ್ಚಿಮ ಬಂಗಾಳದ ಬಿಜೆಪಿಯ ಉನ್ನತ ನಾಯಕರಲ್ಲಿ ಒಬ್ಬರಾದ ಚಂದ್ರ ಕುಮಾರ್ ಬೋಸ್ ಈ ಕೃತ್ಯವನ್ನು ಪ್ರಶ್ನಿಸಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಭಾರತವು “ಎಲ್ಲಾ ಧರ್ಮಗಳು ಮತ್ತು ಸಮುದಾಯಗಳಿಗೆ ಮುಕ್ತವಾಗಿದೆ” ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರಳಿಯ ಚಂದ್ರ ಕುಮಾರ್‌ ಬೋಸ್‌ ಪ್ರತಿಪಾದಿಸಿದ್ದಾರೆ.

“#CAA2019 ಯಾವುದೇ ಧರ್ಮಕ್ಕೆ ಸಂಬಂಧಿಸದಿದ್ದರೆ – ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಜೈನರು ಮಾತ್ರ ಎಂದು ಏಕೆ ಹೇಳುತ್ತಿದ್ದೀರಿ? ಮುಸ್ಲಿಮರನ್ನು ಏಕೆ ಸೇರಿಸಿಲ್ಲ? ಇದು ಪಾರದರ್ಶಕವಾಗಿರಲಿ” ಎಂದು ಬೋಸ್ ಟ್ವೀಟ್ ಮಾಡಿದ್ದಾರೆ.

“ಭಾರತವನ್ನು ಸಮೀಕರಿಸಬೇಡಿ ಅಥವಾ ಅದನ್ನು ಬೇರೆ ಯಾವುದೇ ರಾಷ್ಟ್ರದೊಂದಿಗೆ ಹೋಲಿಸಬೇಡಿ – ಇದು ಎಲ್ಲಾ ಧರ್ಮಗಳು ಮತ್ತು ಸಮುದಾಯಗಳಿಗೆ ಮುಕ್ತ ರಾಷ್ಟ್ರವಾಗಿದೆ” ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮುಸ್ಲಿಮರು ತಮ್ಮ ತಾಯ್ನಾಡಿನಲ್ಲಿ ಕಿರುಕುಳಕ್ಕೆ ಒಳಗಾಗದಿದ್ದರೆ ಅವರು ಇಲ್ಲಿಗೆ ಬರುವುದಿಲ್ಲ, ಆದ್ದರಿಂದ ಅವರನ್ನು ಸೇರಿಸಿಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ. ಆದಾಗ್ಯೂ, ಇದು ಸಂಪೂರ್ಣವಾಗಿ ನಿಜವಲ್ಲ- ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುವ ಬಲೂಚ್ ಬಗ್ಗೆ ಏನು? ಪಾಕಿಸ್ತಾನದ ಅಹ್ವಾಡಿಯಾ ಬಗ್ಗೆ ಏನು? ಎಂದು ಅವರು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಮೋದಿ ಸರ್ಕಾರ ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೊಳಿಸಲು ಮುಂದಾದಾಗ ಅದಕ್ಕ ತೀವ್ರ ಅಡೆತಡೆಗಳು ಉಂಟಾಗಿವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸು ಮಾಡಿದರೂ ಬೀದಿಯಲ್ಲಿ ಅದಕ್ಕೆ ಪ್ರತಿರೋಧ ಭುಗಿಲೆದ್ದಿದೆ.

ಕಾಂಗ್ರೆಸ್‌ ಆಡಳಿತದ ರಾಜ್ಯಗಳು ಮಾತ್ರವಲ್ಲದೇ ದೆಹಲಿ, ಪಶ್ಚಿಮ ಬಂಗಾಳ, ಬಿಹಾರ, ಒಡಿಸ್ಸಾ, ಆಂಧ್ರ, ಗೋವಾ ಸೇರಿದಂತೆ ಹಲವು ರಾಜ್ಯಗಳು CAA, NRCಗೆ ವಿರೋಧ ವ್ಯಕ್ತಪಡಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...