Homeಮುಖಪುಟನವರಾತ್ರಿ ಕಾರ್ಯಕ್ರಮ: ಆಧಾರ್ ಕಾರ್ಡ್‌ ಪರಿಶೀಲಿಸಿ ಹಿಂದೂಗಳಿಗೆ ಮಾತ್ರ ಅನುಮತಿ ನೀಡಬೇಕು: ಶಾಸಕ ನಿತೇಶ್ ರಾಣೆ

ನವರಾತ್ರಿ ಕಾರ್ಯಕ್ರಮ: ಆಧಾರ್ ಕಾರ್ಡ್‌ ಪರಿಶೀಲಿಸಿ ಹಿಂದೂಗಳಿಗೆ ಮಾತ್ರ ಅನುಮತಿ ನೀಡಬೇಕು: ಶಾಸಕ ನಿತೇಶ್ ರಾಣೆ

- Advertisement -
- Advertisement -

ಮುಂಬರುವ ನವರಾತ್ರಿಯ ಹಿನ್ನೆಲೆ ದಾಂಡಿಯಾ ಕಾರ್ಯಕ್ರಮಕ್ಕೆ ಹಿಂದೂಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕೊಡಬೇಕು ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ ಹೇಳಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ ಕಂಕಾವ್ಲಿ ಶಾಸಕರಾಗಿರುವ ನಿತೇಶ್‌ ರಾಣೆ, ನವರಾತ್ರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಆಧಾರ್ ಕಾರ್ಡ್‌ಗಳನ್ನು ಸಂಘಟಕರು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.

ನವರಾತ್ರಿ ಮತ್ತು ದಾಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಹಿಂದೂ ಸಮುದಾಯದವರಾಗಿರಬೇಕು ಎಂದು ರಾಣೆ ಹೇಳಿದ್ದು, ಅಂತಹ ಕಾರ್ಯಕ್ರಮಗಳ ವೇಳೆ ಲವ್ ಜಿಹಾದ್ ಮತ್ತು ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಘಟನೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ.

ಹಿಂದೂ ಮಹಿಳೆಯರಿಗೆ ಸುಳ್ಳು ಹೇಳಲಾಗುತ್ತದೆ ಮತ್ತು ಆಮಿಷವೊಡ್ಡಲಾಗುತ್ತದೆ  ಕೆಲವರು ನಮ್ಮ ಸಮುದಾಯದಲ್ಲದವರು ಕೇಸರಿ ಉಡುಪುಗಳನ್ನು ಧರಿಸಿ ಇಂತಹ ಕಾರ್ಯಕ್ರಮಗಳಿಗೆ ಬರುತ್ತಾರೆ ಮತ್ತು ತಮ್ಮನ್ನು ತಾವು ಹಿಂದೂಗಳು ಎಂದು ಹೇಳಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ರಾಣೆ, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಬೇಕು. ಹಿಂದೂಗಳಿಗೆ ಮಾತ್ರ ಅವಕಾಶ ನೀಡಿದರೆ, ಹಿಂದೂ ಮಹಿಳೆಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಲವ್ ಜಿಹಾದ್ ಬಗ್ಗೆ ಸಾಕಷ್ಟು ಪುರಾವೆಗಳು ನಮ್ಮ ಬಳಿ ಇವೆ. ಕಾರ್ಯಕ್ರಮಗಳ ಸಂಘಟಕರು ನಮ್ಮ ಮನವಿಯನ್ನು ಪರಿಗಣಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ರಾಣೆ ಹೇಳಿದ್ದಾರೆ.

ಬೇರೆ ಸಮುದಾಯಗಳಿಗೆ ಸೇರಿದ ಜನರು ದಾಂಡಿಯಾ ಕಾರ್ಯಕ್ರಮಗಳಿಗೆ ಏಕೆ ಬರುತ್ತಾರೆ? ಅವರ ಉದ್ದೇಶವೇನು? ಅವರು ನವರಾತ್ರಿ ಆಚರಣೆಯಲ್ಲಿ ಸೇರಲು ಬಯಸಿದರೆ, ನಾವು ಅವರನ್ನು ಹಿಂದೂಗಳಾಗಿ ಪರಿವರ್ತಿಸುತ್ತೇವೆ. ಆದ್ದರಿಂದ ದಾಂಡಿಯಾ ಕಾರ್ಯಕ್ರಮಗಳಲ್ಲಿ ಹಿಂದೂಗಳು ಮಾತ್ರ ಭಾಗವಹಿಸಬೇಕು ಎಂದು ರಾಣೆ ಹೇಳಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಪುತ್ರನಾಗಿರುವ ನಿತೇಶ್ ರಾಣೆ ಮಹಾರಾಷ್ಟ್ರ ಕಂಕಾವ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಇದನ್ನು ಓದಿ: ಸಂಸದ ಎ ರಾಜಾ ಒಡೆತನದ 55ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಬಿಐ, ಜಾರಿ ನಿರ್ದೇಶನಾಲಯವನ್ನು ಮುಚ್ಚಬೇಕು: ಇಂಡಿಯಾ ಮೈತ್ರಿ ಕೂಟದ ಮುಂದೆ ಅಖಿಲೇಶ್ ಯಾದವ್ ಪ್ರಸ್ತಾಪ

0
ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಇಲಾಖೆಗಳು ಅಗತ್ಯವಿಲ್ಲ, ಅವುಗಳನ್ನು ಮುಚ್ಚಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದು, ಈ ಬಗ್ಗೆ ಇಂಡಿಯಾ ಮೈತ್ರಿಕೂಟದ ನಾಯಕರ ಮುಂದೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಸಿಬಿಐ ಮತ್ತು...