Homeಮುಖಪುಟಸಂಸದ ಎ ರಾಜಾ ಒಡೆತನದ 55ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇಡಿ

ಸಂಸದ ಎ ರಾಜಾ ಒಡೆತನದ 55ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇಡಿ

- Advertisement -
- Advertisement -

ಡಿಎಂಕೆ ಸಂಸದ, ಎ ರಾಜಾ ಎಂದು ಕರೆಯಲ್ಪಡುವ ಆಂಡಿಮುತ್ತು ರಾಜಾ ಅವರ ಮಾಲೀಕತ್ವದ 15ಕ್ಕೂ ಹೆಚ್ಚು ಸ್ಥಿರ ಬೇನಾಮಿ ಆಸ್ತಿಗಳನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಪ್ರಕಟಿಸಿದೆ.

ಎ ರಾಜಾ ವಿರುದ್ಧದ ಅಕ್ರಮ ಆಸ್ತಿಗಳಿಗೆ ಪ್ರಕರಣದ ತನಿಖೆಯ ಭಾಗವಾಗಿ ಈ ಬೆಳವಣಿಗೆ ನಡೆದಿದೆ.

ಇಡಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ರಾಜಾ ಅವರ ಬೇನಾಮಿ ಕಂಪನಿ ‘ಕೋವೈ ಶೆಲ್ಟರ್ಸ್ ಪ್ರಮೋಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿ ನೋಂದಾಯಿಸಲಾದ 15 ಸ್ಥಿರ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ವಶಪಡಿಸಿಕೊಂಡ 15 ಬೇನಾಮಿ ಆಸ್ತಿಗಳ ಮೌಲ್ಯ 55 ಕೋಟಿ ಎಂದು ಅಂದಾಜಿಸಲಾಗಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಇರುವ 45 ಎಕರೆ ಭೂಮಿಯನ್ನು ಇ. ಡಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಜಪ್ತಿ ಮಾಡಿತ್ತು. ಹಣ ಅಕ್ರಮ ವರ್ಗಾವಣೆ ಕಾಯ್ದೆಯ (ಪಿಎಂಎಲ್ಎ) ಸಕ್ಷಮ ಪ್ರಾಧಿಕಾರವು ತನ್ನ ಜೂನ್‌ 1ರ ಆದೇಶದಲ್ಲಿ ಇದನ್ನು ಅನುಮೋದಿಸಿತ್ತು.

59 ವರ್ಷ ವಯಯಸ್ಸಿನ ರಾಜಾ ಅವರು ಸದ್ಯ ತಮಿಳುನಾಡಿನ ನೀಲಗಿರೀಸ್‌ ಕ್ಷೇತ್ರದ ಸಂಸದರಾಗಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ಪರಿಸರ ಮತ್ತು ಅರಣ್ಯ ಖಾತೆಯ ಸಚಿವರಾಗಿದ್ದು, ಕೇಂದ್ರ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ಎ. ರಾಜಾ ಹೊಂದಿದ್ದರು.

ಇದನ್ನು ಓದಿ: ಅಬಕಾರಿ ನೀತಿ ಪ್ರಕರಣ: ಸಂಜಯ್ ಸಿಂಗ್ ಇಡಿ ಕಸ್ಟಡಿ ಅವಧಿ ಅ. 13 ರವರೆಗೆ ವಿಸ್ತರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...