HomeUncategorizedನಿಷೇಧಿತ ಪಿಎಫ್‌ಐ ಪರ ಚಟುವಟಿಕೆ ಶಂಕೆ: ವಿವಿಧ ಸ್ಥಳಗಳಲ್ಲಿ ಎನ್‌ಐಎ ದಾಳಿ

ನಿಷೇಧಿತ ಪಿಎಫ್‌ಐ ಪರ ಚಟುವಟಿಕೆ ಶಂಕೆ: ವಿವಿಧ ಸ್ಥಳಗಳಲ್ಲಿ ಎನ್‌ಐಎ ದಾಳಿ

- Advertisement -
- Advertisement -

ಎನ್‌ಐಎ ಅಧಿಕಾರಿಗಳು ದೇಶದ ವಿವಿಧ ರಾಜ್ಯಗಳಲ್ಲಿ ನಿಷೇಧಿತ ಪಿಎಫ್‌ಐ ಪರ ಚಟುವಟಿಕೆ ಶಂಕೆಯಲ್ಲಿ ದಾಳಿಯನ್ನು ನಡೆಸಿದ್ದು, ಮುಂಬೈನ  ಅಬ್ದುಲ್ ವಾಹಿದ್ ಶೇಖ್ ಅವರ ವಿಕ್ರೋಲಿ ನಿವಾಸದಲ್ಲಿ ಕೂಡ ಶೋಧ ನಡೆಸಿದೆ.

ಮುಂಬೈನ 7/11ರ ರೈಲು ಸ್ಫೋಟ ಪ್ರಕರಣದಲ್ಲಿ ವಾಹಿದ್ ಶೇಖ್‌ಗೆ  ಖುಲಾಸೆಗೊಳಿಸಲಾಗಿದೆ. ಮೂಲಗಳ ಪ್ರಕಾರ, ವಾಹಿದ್ ಶೇಖ್‌ ನಿಷೇಧಿತ ಪಿಎಫ್‌ಐ ಜೊತೆ ನಂಟು ಹೊಂದಿದ್ದು, ಸಂಶಯಾಸ್ಪದ ಚಟುವಟಿಕೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂಬೈ, ಥಾಣೆ, ನವಿ ಮುಂಬೈ ಸೇರಿ ಮಹಾರಾಷ್ಟ್ರದ ಹಲವು ಜಿಲ್ಲೆಗಳ ಸುಮಾರು ಐದು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಅಬ್ದುಲ್ ವಾಹಿದ್ ಶೇಖ್ ಅವರ ವಿಕ್ರೋಲಿ ನಿವಾಸದ ಜೊತೆಗೆ NIA ತಂಡವು ಮಹಾರಾಷ್ಟ್ರದ ಭಿವಂಡಿ, ಮುಂಬ್ರಾ ಮತ್ತು ಇತರ ಜಿಲ್ಲೆಗಳಲ್ಲಿ ಶೋಧ ನಡೆಸಿದೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಷೇಧಿತ ಪಿಎಫ್‌ಐಗೆ ಸಂಬಂಧಿಸಿದ ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ.

ಮೂಲಗಳ ಪ್ರಕಾರ ಪಿಎಫ್‌ಐನ್ನು ಹೊಸ ಹೆಸರಿನಲ್ಲಿ ಮರುಸ್ಥಾಪಿಸುವ ಉದ್ದೇಶದಿಂದ ಅನುಮಾನಾಸ್ಪದ ಚಟುವಟಿಕೆ ಮತ್ತು ನಿಧಿಸಂಗ್ರಹದ ಸಂಶಯದಲ್ಲಿ ಎನ್‌ಐಎ ದಾಳಿ ನಡೆದಿದೆ ಎನ್ನಲಾಗಿದೆ. ಈ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಎನ್‌ಐಎ ವಿವಿಧ ಸ್ಥಳಗಳ ಸುಮಾರು 7 ರಿಂದ 10 ವ್ಯಕ್ತಿಗಳನ್ನು ಬಂಧಿಸಿದೆ ಎಂದು ವರದಿಯಾಗಿದೆ.

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ರಾಜಸ್ಥಾನದ ಟೋಂಕ್‌ನ ಶಾಗಿರ್ದ್ ಪೇಶಾ ಪ್ರದೇಶದಲ್ಲಿ ಮತ್ತು ತಮಿಳುನಾಡಿನ ಮಧುರೈನಲ್ಲಿ ಕೂಡ ದಾಳಿ ನಡೆಸಿದೆ.

ಇದನ್ನು ಓದಿ: UAPA ಪ್ರಕರಣ: ನ್ಯೂಸ್‌ಕ್ಲಿಕ್ ಮುಖ್ಯಸ್ಥ, ಹೆಚ್‌ಆರ್‌ಗೆ 10 ದಿನಗಳ ನ್ಯಾಯಾಂಗ ಬಂಧನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...