ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ರಾಜ್ಯ ಬಜೆಟ್ ಮಂಡಿಸಲು ಹಸುವಿನ ಸಗಣಿಯಿಂದ ತಯಾರಿಸಿದ ಬ್ರೀಫ್‌ಕೇಸ್‌ನೊಂದಿಗೆ ರಾಜ್ಯದ ವಿಧಾನಸಭೆಗೆ ತೆರಳಿದ ಆಶ್ಚರ್ಯಕರ ಘಟನೆ ಬುಧವಾರ ನಡೆದಿದೆ.
2022-23ರ ಆರ್ಥಿಕ ವರ್ಷಕ್ಕೆ ರಾಜ್ಯ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಘೇಲ್ ಅವರು ವಿಧಾನಸಭೆಗೆ ಹಸುವಿನ ಸಗಣಿಯಿಂದ ಮಾಡಿದ ಚೌಕಾಕಾರದ ಬ್ರೀಫ್‌ಕೇಸ್ ಅನ್ನು ಹಿಡಿದುಕೊಂಡು ಪ್ರವೇಶಿಸಿದ್ದಾರೆ.
ಛತ್ತೀಸ್‌ಗಢ ವಿಧಾನಸಭೆಯ ಬಜೆಟ್ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, 2022-23ನೇ ಸಾಲಿನ ರಾಜ್ಯದ ಬಜೆಟ್ ಅನ್ನು ಬುಧವಾರ ಸದನದಲ್ಲಿ ಮಂಡಿಸಲಾಯಿತು.
ಇದಕ್ಕೂ ಮುನ್ನ ಭೂಪೇಶ್ ಬಘೇಲ್ ಅವರು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ಕ್ರಮಗಳನ್ನು ಕೈಗೊಂಡರು. ಜೊತೆಗೆ ಬಿಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸಲು, ಸಾವಯವ ಕೃಷಿಯನ್ನು ಉತ್ತೇಜಿಸಲು ಮತ್ತು ಗ್ರಾಮೀಣ ಆರ್ಥಿಕತೆಗೆ ನೆರವು ಘೋಷಿಸಿದ್ದಾರೆ.
2020 ರಲ್ಲಿ, ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢ ಸರ್ಕಾರವು ಹಸು ಸಾಕಣೆದಾರರು ಮತ್ತು ರೈತರಿಂದ ಹಸುವಿನ ಸಗಣಿ ಸಂಗ್ರಹಿಸುವುದಾಗಿ ಘೋಷಿಸಿತ್ತು. ಈ ಘೋಷಣೆಯನ್ನು ಮಾಡಿದ ದೇಶದ ಮೊದಲ ರಾಜ್ಯ ಛತ್ತೀಸ್‌ಗಢವಾಗಿದೆ.
ರಾಜ್ಯದ ‘ಗೋಧನ್ ನ್ಯಾಯ್’ ಎಂಬ ಯೋಜನೆಯು ಜಾನುವಾರು ಮಾಲೀಕರಿಗೆ ಸಗಣಿ ಸಂಗ್ರಹಣೆಯ ಮೂಲಕ ಆದಾಯದ ಬೆಂಬಲವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ರಾಜ್ಯದಲ್ಲಿನ ರಾಸಾಯನಿಕ ಗೊಬ್ಬರಗಳ ಕೊರತೆಯನ್ನು ಪರಿಹರಿಸಲು ಭೂಪೇಶ್ ಬಘೇಲ್ ಸರ್ಕಾರವು ವರ್ಮಿಕಾಂಪೋಸ್ಟ್‌ಗಾಗಿ ಇದನ್ನು ಬಳಸಿಕೊಳ್ಳುತ್ತಿದೆ.
ಭೂಪೇಶ್ ಬಘೇಲ್ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ನಾಯಕರು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ಗೋವಿನ ಸಗಣಿ ಬಳಕೆಯನ್ನು ಪ್ರಸ್ತಾಪಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಸಾಯನಿಕ ಗೊಬ್ಬರಗಳನ್ನು ತ್ಯಜಿಸುವಂತೆ ರೈತರನ್ನು ಒತ್ತಾಯಿಸಿದ್ದ ಪ್ರಧಾನಿ ಮೋದಿ, “ನಾವು ಸಾವಯವ ಕೃಷಿ ವಿಧಾನಗಳಿಗೆ ಬದಲಾಗಬೇಕಾಗಿದೆ… ದೇಸಿ ಹಸುವಿನ ಸಗಣಿ ಮತ್ತು ಮೂತ್ರವು ನಿಮ್ಮ ಕೃಷಿ ಉತ್ಪನ್ನಗಳನ್ನು ರಕ್ಷಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸ್ವಾಭಾವಿಕವಾಗಿ ಮಾಡಬಹುದು” ಎಂದು ಹೇಳಿದ್ದರು.
ಇದನ್ನೂ ಓದಿ: ಸಿಬಿಐಗಿದ್ದ ಸಮ್ಮತಿಯನ್ನು ಹಿಂಪಡೆದ ಮೇಘಾಲಯ: ಒಂಬತ್ತು ರಾಜ್ಯಗಳಲ್ಲಿ ಸಿಬಿಐಗೆ ಎಂಟ್ರಿ ಇಲ್ಲ!
ಇಷ್ಟೊಂದು ಮೂಢನಂಬಿಕೆ ಇನ್ನೂ ನಮ್ಮ ಜನಗಳಲ್ಲಿ ಇದೆಯಲ್ಲಾ……