Homeಅಂತರಾಷ್ಟ್ರೀಯನೇಪಾಳದ ಗಡಿಯಲ್ಲಿನ ಭೂಮಿಯನ್ನು ಚೀನಾ ಆಕ್ರಮಿಸಿಲ್ಲ: ಕೆ.ಪಿ ಒಲಿ

ನೇಪಾಳದ ಗಡಿಯಲ್ಲಿನ ಭೂಮಿಯನ್ನು ಚೀನಾ ಆಕ್ರಮಿಸಿಲ್ಲ: ಕೆ.ಪಿ ಒಲಿ

ನೇಪಾಳದ ಕೃಷಿ ಸಚಿವಾಲಯದ ಸಮೀಕ್ಷಾ ಇಲಾಖೆಯ ವರದಿಯನ್ನು ಉಲ್ಲೇಖಿಸಿ ಚೀನಾವು ಗಡಿಯ ಏಳು ಜಿಲ್ಲೆಗಳಲ್ಲಿ ನೇಪಾಳದ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಹೇಳಿದೆ.

- Advertisement -
- Advertisement -

ಚೀನಾ ತನ್ನ ಭೂಪ್ರದೇಶವನ್ನು ಅನೇಕ ಸ್ಥಳಗಳಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ನೇಪಾಳ ಪ್ರಧಾನಿ ಕೆ.ಪಿ ಒಲಿ ಬಲವಾಗಿ ನಿರಾಕರಿಸಿದ್ದಾರೆ.

ನೇಪಾಳದ ಕೃಷಿ ಸಚಿವಾಲಯದ ಸಮೀಕ್ಷಾ ಇಲಾಖೆಯ ವರದಿಯನ್ನು ಉಲ್ಲೇಖಿಸಿ ಚೀನಾವು ಗಡಿಯ ಏಳು ಜಿಲ್ಲೆಗಳಲ್ಲಿ ನೇಪಾಳದ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಹೇಳಿದೆ.

ನೇಪಾಳದ ಸರ್ಕಾರದ ಮೂಲಗಳು ವರದಿಯನ್ನು ನಿರಾಕರಿಸಿದ್ದು, ಜೂನ್‌ನಲ್ಲಿ ನೇಪಾಳದ ಪ್ರಮುಖ ಮಾಧ್ಯಮವೊಂದು ಇದೇ ರೀತಿಯ ವರದಿ ಮಾಡಿದ್ದನ್ನು ಸಹ ನಿರಾಕರಿಸಲಾಗಿದೆ ಎಂದು ಕೆ.ಪಿ ಒಲಿ ಹೇಳಿದ್ದಾರೆ. ನಂತರ ಈ ಪತ್ರಿಕೆ, ವರದಿಯನ್ನು ಪ್ರಕಟಿಸಿದ್ದಕ್ಕಾಗಿ ಕ್ಷಮೆಯಾಚಿಸಿತ್ತು.

“ನೇಪಾಳ ಮತ್ತು ಚೀನಾ ನಡುವಿನ ಗಡಿಯನ್ನು 5 ಅಕ್ಟೋಬರ್ 1961 ರ ಗಡಿ ಒಪ್ಪಂದದ ಆಧಾರದ ಮೇಲೆ ವಿವರಿಸಿ, ಗುರುತಿಸಲಾಗಿದೆ ಎಂದು ಅದು ಹೇಳಿದೆ.

“ಯಾವುದೇ ಸಮಸ್ಯೆ ಎದುರಾದರೆ ಉಭಯ ದೇಶಗಳ ಸಂಬಂಧಪಟ್ಟ ಅಧಿಕಾರಿಗಳ ನಡುವೆ ಪರಸ್ಪರ ಸಮಾಲೋಚನೆಯ ಮೂಲಕ ನೇಪಾಳ ಸರ್ಕಾರ ಪರಿಹರಿಸುತ್ತದೆ. ಅಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಸಂಬಂಧಿತ ಅಧಿಕಾರಿಗಳಿಂದ ಮಾಹಿತಿಯನ್ನು ಪರಿಶೀಲಿಸುವಂತೆ ಸಚಿವಾಲಯವು ಮಾಧ್ಯಮಗಳಿಗೆ ವಿನಂತಿಸುತ್ತದೆ. ಎರಡೂ ದೇಶ ಸ್ನೇಹಪರತೆಯ ನೆರೆಹೊರೆಯವರು “ಎಂದು ಅದು ಹೇಳಿದೆ.


ಇದನ್ನೂ ಓದಿ: ಗಡಿ ವಿವಾದ; ಭಾರತ ಅತಿಕ್ರಮಿಸಿರುವ ಪ್ರದೇಶವನ್ನು ಹಿಂತಿರುಗಿಸಬೇಕು: ನೇಪಾಳ ಪ್ರಧಾನಿ
 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...