Homeಮುಖಪುಟನ್ಯಾಯಾಂಗ ನಿಂದನೆ: ಸ್ವರ ಭಾಸ್ಕರ್ ವಿರುದ್ಧದ‌ ವಿಚಾರಣೆ ಅರ್ಜಿ ತಿರಸ್ಕಾರ!

ನ್ಯಾಯಾಂಗ ನಿಂದನೆ: ಸ್ವರ ಭಾಸ್ಕರ್ ವಿರುದ್ಧದ‌ ವಿಚಾರಣೆ ಅರ್ಜಿ ತಿರಸ್ಕಾರ!

ನವೆಂಬರ್ 2019 ರ ತೀರ್ಪಿನಲ್ಲಿ ಬಾಬರಿ ಮಸೀದಿಯನ್ನು ಉರುಳಿಸಿದ್ದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಹಾಗಾಗಿ, ಮಸೀದಿಯನ್ನು ಉರುಳಿಸಿದ ದುಷ್ಕರ್ಮಿಗಳಿಗೆ ಬಹುಮಾನ ನೀಡಿದೆ ಎಂಬ ಭಾಸ್ಕರ್ ಅವರ ಹೇಳಿಕೆ ವಾಸ್ತವಿಕ ಹೇಳಿಕೆಯಂತೆ ಕಾಣುತ್ತದೆ.

- Advertisement -
- Advertisement -

ಸುಪ್ರೀಂ ಕೋರ್ಟ್ ಮತ್ತು ಅಯೋಧ್ಯೆಯ ವಿವಾದದ ತೀರ್ಪನ್ನು ಟೀಕಿಸಿದ್ದಕ್ಕಾಗಿ ನಟಿ ಸ್ವರಾ ಭಾಸ್ಕರ್ ವಿರುದ್ಧ ವಿಚಾರಣೆ ಪ್ರಾರಂಭಿಸಲು ಅನುಮತಿ ಕೋರಿ ಸಲ್ಲಿಸಿದ್ದ ವಿಚಾರಣೆ ಅರ್ಜಿ ಯನ್ನು ಅಟಾರ್ನಿ ಜನರಲ್ ಆಫ್ ಇಂಡಿಯಾ (ಎಜಿ) ಕೆ.ಕೆ.ವೇಣುಗೋಪಾಲ್ ತಿರಸ್ಕರಿಸಿದ್ದಾರೆ.

ನವೆಂಬರ್ 2019 ರ ತೀರ್ಪಿನಲ್ಲಿ ಬಾಬರಿ ಮಸೀದಿಯನ್ನು ಉರುಳಿಸಿದ್ದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಹಾಗಾಗಿ, ಮಸೀದಿಯನ್ನು ಉರುಳಿಸಿದ ದುಷ್ಕರ್ಮಿಗಳಿಗೆ ಬಹುಮಾನ ನೀಡಿದೆ ಎಂಬ ಭಾಸ್ಕರ್ ಅವರ ಹೇಳಿಕೆ ವಾಸ್ತವಿಕ ಹೇಳಿಕೆಯಂತೆ ಕಾಣುತ್ತದೆ ಎಂದು ವೇಣುಗೋಪಾಲ್ ತಮ್ಮ ಅರ್ಜಿದಾರರಿಗೆ ಬರೆದ ಪತ್ರದಲ್ಲಿ ಉಷಾ ಶೆಟ್ಟಿಯ ವಿನಂತಿಯನ್ನು ಉಲ್ಲೇಖಿಸಿ ನಿರಾಕರಿಸಿದ್ದಾರೆ.

ಈ ಹೇಳಿಕೆಯು ಸುಪ್ರೀಂ ಕೋರ್ಟಿನ ತೀರ್ಪನ್ನು ಸೂಚಿಸುತ್ತದೆ. ಹಾಗಾಗಿ ಇದು ಆ ಸಂಸ್ಥೆಯ ಮೇಲಿನ ಆಕ್ರಮಣವಲ್ಲ. ಇದು ಸುಪ್ರೀಂ ಕೋರ್ಟ್‌ನ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಅಥವಾ ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ನಿಂದಿಸುವ, ಕಡಿಮೆ ಮಾಡುವ ಯಾವುದನ್ನೂ ಹೇಳುವುದಿಲ್ಲ. ನನ್ನ ಅಭಿಪ್ರಾಯದಲ್ಲಿ, ಈ ಹೇಳಿಕೆಯು ನ್ಯಾಯಾಂಗ ನಿಂದನೆಯನ್ನು ಹೊಂದಿಲ್ಲ ಎಂದು ಎಜಿಯ ಪತ್ರದಲ್ಲಿ ತಿಳಿಸಲಾಗಿದೆ.

ಮಾಜಿ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ನೀಡಿದ ಅಯೋಧ್ಯೆ ವಿವಾದದಲ್ಲಿ ನವೆಂಬರ್ 9 ರ ಸುಪ್ರೀಂ ಕೋರ್ಟ್ ನೀಡಿದ ತೀರ್ಪು 2.77 ಎಕರೆ ವಿವಾದಿತ ಸ್ಥಳವನ್ನು ರಾಮ್ ಲಲ್ಲಾ ವಿರಾಜ್ಮಾನ್ ಅವರಿಗೆ ನೀಡಿತ್ತು. ಹೊಸ ಮಸೀದಿ ನಿರ್ಮಾಣಕ್ಕಾಗಿ ಪರ್ಯಾಯ ಸ್ಥಳದಲ್ಲಿ 5 ಎಕರೆ ಭೂಮಿಯನ್ನು ಮುಸ್ಲಿಮರಿಗೆ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿತ್ತು.

ವಿವಾದಾತ್ಮಕ ಸ್ಥಳದಲ್ಲಿ ಮಸೀದಿಯ ಅಸ್ತಿತ್ವವನ್ನು ಉನ್ನತ ನ್ಯಾಯಾಲಯವು ಖಾತ್ರಿಪಡಿಸಿ ಒಪ್ಪಿಕೊಂಡಿತ್ತು. 1949 ರಲ್ಲಿ ಮಸೀದಿಯೊಳಗೆ ವಿಗ್ರಹಗಳನ್ನು ಇಟ್ಟು, 1992 ರಲ್ಲಿ ಮಸೀದಿಯ ಧ್ವಂಸದಲ್ಲಿ ಹಿಂದೂಗಳು ಕಾನೂನುಬಾಹಿರ ಕೃತ್ಯ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದರು.

ಆಗಸ್ಟ್ 17 ರಂದು ಉಷಾ ಶೆಟ್ಟಿ ಸಲ್ಲಿಸಿದ್ದ ಸ್ವರ ಭಾಸ್ಕರ್ ವಿರುದ್ಧದ ಅರ್ಜಿಯನ್ನು ನ್ಯಾಯಾಲಯದ ಮುಂದೆ ಪಟ್ಟಿ ಮಾಡಲು ಒಪ್ಪಿಗೆಗಾಗಿ ಎಜಿ ಮುಂದೆ ಇಡಲಾಯಿತು.

ನ್ಯಾಯಾಲಯಗಳ ನಿಂದನೆ ಕಾಯ್ದೆಯ ಸೆಕ್ಷನ್ 15 ಮತ್ತು ಸುಪ್ರೀಂ ಕೋರ್ಟ್‌ನ ಅವಹೇಳನಕ್ಕಾಗಿ ಕ್ರಮಗಳನ್ನು ನಿಯಂತ್ರಿಸುವ ನಿಯಮ 3 ರ ಪ್ರಕಾರ, ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ ಕ್ರಿಮಿನಲ್ ತಿರಸ್ಕಾರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸುವ ಮೊದಲು ಎಜಿ ಅಥವಾ ಸಾಲಿಸಿಟರ್ ಜನರಲ್ ಅವರ ಒಪ್ಪಿಗೆ ಪಡೆಯುವ ಅಗತ್ಯವಿದೆ.

2020 ರ ಫೆಬ್ರವರಿಯಲ್ಲಿ ಮುಂಬೈನಲ್ಲಿ ನಡೆದ “ಕೋಮುವಾದದ ವಿರುದ್ಧ ಕಲಾವಿದರು” ಎಂಬ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು “ನ್ಯಾಯಾಲಯಗಳು ಸಂವಿಧಾನವನ್ನು ನಂಬುತ್ತವೆಯೇ ಎಂದು ಖಚಿತವಾಗಿಲ್ಲ” ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅರ್ಜಿಯ ಪ್ರಕಾರ, ಸ್ವರ ಭಾಸ್ಕರ್, “ಬಾಬರಿ ಮಸೀದಿ ನೆಲಸಮ ಮಾಡುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಹೇಳುವ ದೇಶದಲ್ಲಿ ನಾವು ವಾಸಿಸುತ್ತಿದ್ದೇವೆ ಮತ್ತು ಅದೇ ತೀರ್ಪಿನಲ್ಲಿ ಮಸೀದಿಯನ್ನು ಉರುಳಿಸಿದ ಜನರಿಗೆ ಬಹುಮಾನ ನೀಡಲಾಗುತ್ತದೆ” ಎಂದು ಹೇಳಿದ್ದಾಗಿ ಉಲ್ಲೇಖಿಸಲಾಗಿದೆ.

ಅವರ ಹೇಳಿಕೆಗಳು “ಅಗ್ಗದ ಪ್ರಚಾರಕ್ಕಾಗಿ ಮಾಡುವ ಸಾಹಸವಾಗಿದ್ದು” ಮಾತ್ರವಲ್ಲ, ಸುಪ್ರೀಂ ಕೋರ್ಟ್ ವಿರುದ್ಧ ದಂಗೆ ಎಬ್ಬಿಸುವ ಉದ್ದೇಶಪೂರ್ವಕ ಪ್ರಯತ್ನವೂ ಆಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

“ಆಪಾದಿತ ಸಮಕಾಲೀನ ಹೇಳಿಕೆಗಳು ಗೌರವಾನ್ವಿತ ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅಪನಂಬಿಕೆಯ ಭಾವನೆ ಮತ್ತು ಭಾರತದ ಸುಪ್ರೀಂ ಕೋರ್ಟಿನ ಗೌರವಾನ್ವಿತ ನ್ಯಾಯಾಧೀಶರ ಸಮಗ್ರತೆಗೆ ಪ್ರಚೋದನೆ ನೀಡಲು ಉದ್ದೇಶಿಸಿದೆ” ಎಂದು ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.

ಉಷಾ ಶೆಟ್ಟಿ ಪರವಾಗಿ ವಕೀಲರಾದ ಅನುಜ್ ಸಕ್ಸೇನಾ, ಪ್ರಕಾಶ್ ಶರ್ಮಾ ಮತ್ತು ಮಹೇಕ್ ಮಹೇಶ್ವರಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಎಜಿ ಅನುಮತಿ ನಿರಾಕರಿಸಿದ ನಂತರ, ಶೆಟ್ಟಿ ’ವಕೀಲರು ಭಾನುವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಒಪ್ಪಿಗೆ ಕೋರಿ ಪತ್ರ ಬರೆದಿದ್ದಾರೆ.


ಇದನ್ನೂ ಓದಿ: ನಟಿ ಸ್ವರ ಭಾಸ್ಕರ್ ವಿರುದ್ದ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಲು ಕೋರಿ ಅರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...